ಮುಂದುವರೆದ ದಚ್ಚು- ಅಪ್ಪು ಫ್ಯಾನ್ಸ್ ಪರ ವಿರೋಧ ಚರ್ಚೆ: ಮತ್ತೊಂದು ವಿಡಿಯೋ ವೈರಲ್!

ನಟ ದರ್ಶನ್ ಕೊಟ್ಟ ಅದೊಂದು ಹೇಳಿಕೆ ಈಗ ಬಿರುಗಾಳಿ ಎಬ್ಬಿಸಿದೆ. ಪುನೀತ್ ರಾಜ್‌ಕುಮಾರ್ ಸಾವಿನ ಬಗ್ಗೆ ಮಾತಾಡಿದ್ದು, ಭಾರೀ ಚರ್ಚೆ ಹುಟ್ಟಾಕ್ಕಿದೆ. ದರ್ಶನ್ ಹೇಳಿಕೆ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗುತ್ತಿದ್ದು, ಕ್ಷಮೆ ಕೇಳಬೇಕು ಎಂದು ಅಪ್ಪು ಫ್ಯಾನ್ಸ್ ಪಟ್ಟು ಹಿಡಿದಿದ್ದಾರೆ. ರಾಜ್ಯಾದ್ಯಂತ 'ಕ್ರಾಂತಿ' ಚಿತ್ರವನ್ನು ಬಹಿಷ್ಕರಿಸೋದಾಗಿ ಹೇಳ್ತಿದ್ದಾರೆ.

ಇತ್ತ ಚಾಲೆಂಜಿಂಗ್ ಸ್ಟಾರ್ ಫ್ಯಾನ್ಸ್ ನಮ್ಮ ನೆಚ್ಚಿನ ನಟನ ಹೇಳಿಕೆಯಲ್ಲಿ ಯಾವುದೇ ತಪ್ಪಿಲ್ಲ ಎಂದು ತಿರುಗೇಟು ನೀಡುತ್ತಿದ್ದಾರೆ. ಅಪ್ಪು ಬಗ್ಗೆ ದರ್ಶನ್ ಮಾತನಾಡಿರುವ ಮತ್ತೊಂದು ವಿಡಿಯೋವನ್ನು ಶೇರ್ ಮಾಡಿ ನಮ್ಮ ಬಾಸ್‌ ಏನು ಅಂತ ಗೊತ್ತು, ಅವರು ತಪ್ಪು ಮಾತನಾಡಿಲ್ಲ, ಯಾರ ಕ್ಷಮೆಯನ್ನು ಕೇಳೋದು ಬೇಕಾಗಿಲ್ಲ ಎಂದಿದ್ದಾರೆ. ಕಳೆದೆರಡು ದಿನಗಳಿಂದ ಅಪ್ಪು ಮತ್ತು ದರ್ಶನ್ ಫ್ಯಾನ್ಸ್ ನಡುವಿನ ಗಲಾಟೆ ತಾರಕಕ್ಕೇರಿದೆ. ಕೆಲವರು ಸೆಲ್ಫಿ ವಿಡಿಯೋಗಳನ್ನು ಮಾಡಿ ಶೇರ್ ಮಾಡುತ್ತಿದ್ದಾರೆ.

ಬಹಳ ದಿನಗಳ ನಂತರ ದರ್ಶನ್ ಯೂಟ್ಯೂಬ್‌ವೊಂದಕ್ಕೆ ಸಂದರ್ಶನ ನೀಡಿದ್ದಾರೆ. ಸಂದರ್ಶನದಲ್ಲಿ ಸಾಕಷ್ಟು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಅದರಲ್ಲಿ ತಮ್ಮ ಫ್ಯಾನ್ಸ್ 'ಕ್ರಾಂತಿ' ಸಿನಿಮಾ ಪ್ರಮೋಷನ್ ಮಾಡುತ್ತಿರುವುದರ ಬಗ್ಗೆ ಕೊಂಡಾಡಿದ್ದಾರೆ. ಯಾವುದೇ ಫಲಾಪೇಕ್ಷೆ ಇಲ್ಲದೇ ಇಷ್ಟೆಲ್ಲಾ ಪ್ರೀತಿ ತೋರಿಸುತ್ತಿರುವ ನನ್ನ ಸೆಲೆಬ್ರೆಟಿಗಳಿಗೆ ನಾನು ತಿರುಗಿ ಏನು ಮಾಡಲು ಸಾಧ್ಯ ಎಂದಿದ್ದಾರೆ. ಮತ್ತೆ ಮಾತು ಮುಂದುವರೆಸಿ "ಸಹಜವಾಗಿ ನಾವು ಸತ್ತಮೇಲೆ ನೋಡಿದ್ದೇವೆ. ಫ್ಯಾನ್ಸ್‌ಗಳು ಅಂದ್ರೆ ಹೇಗೆ ಎಂದು ಪುನೀತ್ ರಾಜ್‌ಕುಮಾರ್ ಒಬ್ಬರದ್ದೇ ಸಾಕು. ಆದ್ರೆ ನಾನು ಬದುಕಿದ್ದಾಗಲೇ ಫ್ಯಾನ್ಸ್‌ಗಳು ತೋರಿಸಿ ಬಿಟ್ಟರಲ್ಲ ನನಗೆ ಅಷ್ಟೇ ಸಾಕು" ಎಂದು ದರ್ಶನ್ ಹೇಳಿದ್ದರು. ಇದೇ ಇಷ್ಟೆಲ್ಲಾ ರಾದ್ಧಾಂತಕ್ಕೆ ಕಾರಣವಾಗಿರೋದು.

 ಅಪ್ಪು ಫ್ಯಾನ್ಸ್ ಆಕ್ರೋಶ

ಅಪ್ಪು ಫ್ಯಾನ್ಸ್ ಆಕ್ರೋಶ

ದರ್ಶನ್ ಹೇಳಿಕೆಯ ವಿಡಿಯೋ ವೈರಲ್ ಆಗ್ತಿದ್ದಂತೆ ಪುನೀತ್ ಫ್ಯಾನ್ಸ್ ಖಂಡಿಸೋಕೆ ಶುರು ಮಾಡಿದ್ದರು. ಸೋಶಿಯಲ್ ಮೀಡಿಯಾ ಪೋಸ್ಟ್‌ಗಳ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ನಿಮ್ಮ ಫ್ಯಾನ್ಸ್ ಬಗ್ಗೆ ಮಾತನಾಡುವುದಕ್ಕೆ ಪುನೀತ್ ಹೆಸರನ್ನು ಯಾಕೆ ತೆಗೆದ್ರಿ ಅಂತ ಕೇಳೊಕೆ ಶುರು ಮಾಡಿದ್ದರು. ಕೆಲವರು ವಿಡಿಯೋಗಳನ್ನು ಮಾಡಿ 'ಕ್ರಾಂತಿ' ಸಿನಿಮಾ ಬಹಿಷ್ಕರಿಸೋದಾಗಿಯೂ ಹೇಳಿದ್ದರು. ತಮ್ಮ ಹೇಳಿಕೆಗೆ ದರ್ಶನ್ ಕ್ಷಮೆ ಕೇಳಬೇಕು ಇಲ್ಲ ಅಂದರೆ ರಾಜ್ಯಾದ್ಯಂತ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದರು.

 ದರ್ಶನ್ ಫ್ಯಾನ್ಸ್ ತಿರುಗೇಟು

ದರ್ಶನ್ ಫ್ಯಾನ್ಸ್ ತಿರುಗೇಟು

ಪುನೀತ್ ಫ್ಯಾನ್ಸ್ ಆಕ್ರೋಶ ಹೆಚ್ಚಾಗುತ್ತಿದ್ದಂತೆ ದರ್ಶನ್ ಫ್ಯಾನ್ಸ್ ಕೂಡ ತಿರುಗೇಟ ನೀಡೋಕೆ ಆರಂಭಿಸಿದರು. "ಅಪ್ಪು ಅಗಲಿಕೆಯ ಹಿನ್ನೆಲೆಯಲ್ಲಿ ನಮ್ಮ ಬಾಸ್ ಬರ್ತ್‌ಡೇ ಆಚರಿಸೋದಿಲ್ಲ ಅಂದರು, ಅಪ್ಪು ನಮನ ಕಾರ್ಯಕ್ರಮದಲ್ಲಿ ಚೇರ್ ಇಲ್ಲದಿದ್ದರೂ ಪರವಾಗಿಲ್ಲ ನಿಂತುಕೊಂಡೇ ಕಾರ್ಯಕ್ರಮ ನೋಡ್ತಿನಿ ಅಂದಿದ್ದರು. ಅದು ನಿಮ್ಮ ಕಣ್ಣಿಗೆ ಕಾಣಲಿಲ್ಲವಾ. ದೊಡ್ಮನೆ ಮೇಲೆ ದರ್ಶನ್‌ ಅವರಿಗೆ ಗೌರವ ಇದೆ. ಸುಖಾಸುಮ್ಮನೆ ಏನೇನೋ ಮಾತನಾಡಬೇಡಿ" ಎಂದಿದ್ದಾರೆ.

 ದರ್ಶನ್ ಮತ್ತೊಂದು ವಿಡಿಯೋ ವೈರಲ್

ದರ್ಶನ್ ಮತ್ತೊಂದು ವಿಡಿಯೋ ವೈರಲ್

ಸಂದರ್ಶನದ ಮುಂದುವರೆದ ಭಾಗದಲ್ಲಿ 'ಕ್ರಾಂತಿ' ಸಿನಿಮಾ ರಿಲೀಸ್ ಬಗ್ಗೆ ಮಾತನಾಡಿದ ದರ್ಶನ್ ಶೂಟಿಂಗ್ ತಡವಾಗಲು ಕಾರಣ ಏನು ಎಂದು ವಿವರಿಸಿದ್ದಾರೆ. "ಆಕ್ಚ್ಯೂಲಿ 'ಕ್ರಾಂತಿ' ಸಿನಿಮಾ ರಿಲೀಸ್ ಆಗಿಬಿಡಬೇಕಾಗಿತ್ತು. ಸೆಟ್ ಹಾಕಿದಾಗ ಮಳೆ ಬಂತು. ಆಮೇಲೆ ಪುನೀತ್ ಅವರದ್ದು ಹಂಗಾಯ್ತು. ಪುನೀತ್‌ ಅವರದ್ದು ಆ ತರ ಆದಾಗ ನಾನು ಒಬ್ಬ ಕಲಾವಿದ. ಅವರ ಜೊತೆ ತುಂಬಾ ಒಡನಾಟ ಇಟ್ಟುಕೊಂಡಿದ್ವಿ. ದೊಡ್ಮನೆಯಿಂದ ನಾವೆಲ್ಲಾ ಬಂದವರು. ಹಂಗೆ ಆದ ತಕ್ಷಣ 11 ದಿನ ಮಾಡೋದು ಬೇಡ ಕಣಯ್ಯಾ. ನಮಗೂ ಸೂತಕ ಅದು ಎಂದು ನಾನೇ ಶೂಟಿಂಗ್ ನಿಲ್ಲಿಸಿಬಿಟ್ಟೆ." ಎಂದು ದರ್ಶನ್ ಹೇಳಿದ್ದಾರೆ. ಈ ವಿಡಿಯೋವನ್ನು ಶೇರ್ ಮಾಡುತ್ತಿರುವ ದರ್ಶನ್ ಫ್ಯಾನ್ಸ್ "ನಮ್ಮ ಬಾಸ್ ಬಗ್ಗೆ ಮಾತನಾಡೋಕೆ ಯೋಗ್ಯತೆ ಇರಬೇಕು" ಎನ್ನುತ್ತಿದ್ದಾರೆ.

 ಕ್ಷಮೆ ಕೇಳಿದ್ದ ಸೂಲಿಬೆಲೆ

ಕ್ಷಮೆ ಕೇಳಿದ್ದ ಸೂಲಿಬೆಲೆ

ಯಾವುದೋ ವಿಚಾರಕ್ಕೆ ಟ್ವೀಟ್ ಮಾಡಿದ್ದ ಚಕ್ರವರ್ತಿ ಸೂಲಿಬೆಲೆ ಪುನೀತ್​ ರಾಜ್‌ಕುಮಾರ್​ ಅವರ ಸಾವನ್ನು ಉದಾಹರಣೆಯಾಗಿ ನೀಡಿದ್ದು, ಪುನೀತ್ ಫ್ಯಾನ್ಸ್‌ನ ಕೆರಳಿಸಿತ್ತು. ಸೋಶಿಯಲ್ ಮೀಡಿಯಾದಲ್ಲಿ ಸೂಲಿಬೆಲೆ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ನಂತರ ತಮ್ಮ ತಪ್ಪಿನ ಅರಿವಾಗಿ ಮತ್ತೊಂದು ಟ್ವೀಟ್ ಮೂಲಕ ಸೂಲಿಬೆಲೆ ಕ್ಷಮೆ ಕೇಳಿದ್ದರು. ಅಲ್ಲಿಗೆ ಆ ವಿವಾದ ತಣ್ಣಗಾಗಿತ್ತು.

More from Filmibeat

English summary
Puneeth Rajkumar Vs Darshan Fans War Continues On Social Media. Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X