ಪುನೀತ್ ನಿರ್ದೇಶನದ ಚಿತ್ರಕ್ಕೆ ಶಿವಣ್ಣ ನಾಯಕ.!

Recommended Video

ಪುನೀತ್ ರಾಜ್ ಕುಮಾರ್ ನಿರ್ದೇಶನದ ಸಿನಿಮಾಗೆ ಶಿವರಾಜ್ ಕುಮಾರ್ ನಾಯಕ

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸ್ಯಾಂಡಲ್ ವುಡ್ ನ ಬ್ಯುಸಿ ನಟ. ವರ್ಷಕ್ಕೆ ಒಂದೆ ಸಿನಿಮಾ ಮಾಡಿದ್ರೂ ಕೈ ತುಂಬ ಪ್ರಾಜೆಕ್ಟ್ ಇಟ್ಟುಕೊಂಡಿರುವ ನಟ. ಸದಾ ಅಭಿನಯದಲ್ಲೇ ತೊಡಗಿಕೊಂಡಿರುವ ಪುನೀತ್ ನಿರ್ಮಾಣ ಸಂಸ್ಥೆ ಮತ್ತು ಆಡಿಯೋ ಕಂಪನಿಯನ್ನು ಸ್ಥಾಪಿಸುವ ಮೂಲಕ ಮತ್ತಷ್ಟು ಸಕ್ರೀಯರಾಗಿದ್ದಾರೆ. ಇದೆಲ್ಲರ ನಡುವೆ ಅಪ್ಪು ಈಗ ನಿರ್ದೇಶನದ ಕಡೆಯು ಗಮನ ಹರಿಸಿದ್ದಾರೆ.

ಹೌದು, ಪುನೀತ್ ರಾಜ್ ಕುಮಾರ್ ಅವರು ನಿರ್ದೇಶಕನಾಗುವ ಆಸೆಯನ್ನು ಹೊರಹಾಕಿದ್ದಾರೆ. ''ಯಾವಾಗಲು ಅಭಿನಯದ ಕಡೆ ಹೆಚ್ಚು ಗಮನ ಹರಿಸುವುದಾಗಿದೆ, ಹಾಗಾಗಿ ನಿರ್ದೇಶನ ಮಾಡಬೇಕು ಎನ್ನುವ ಬಯಕೆ ಕೂಡ ಇದೆ, ನಿರ್ದೇಶನ ಮಾಡುವ ಕನಸು ಬಹಳ ದಿನಗಳಿಂದ ಇದೆ'' ಎಂದು ಅಪ್ಪು ಹೇಳಿಕೊಂಡಿದ್ದಾರೆ.

Puneeth Rajkumar want to direct shiva rajkumar

ಒಂದು ವೇಳೆ ಪುನೀತ್ ರಾಜ್ ಕುಮಾರ್ ಸಿನಿಮಾ ನಿರ್ದೇಶನ ಮಾಡಿದ್ರೆ ಆ ಚಿತ್ರಕ್ಕೆ ಶಿವಣ್ಣ ನಾಯಕ ಎಂದು ಹೇಳಿದ್ದಾರೆ. ಆದರೆ ಕತೆ ಹೇಗಿರಬೇಕು, ಶಿವಣ್ಣ ಅವರ ಗೆಟಪ್ ಹೇಗಿರಲಿದೆ ಅನ್ನುವುದರ ಬಗ್ಗೆ ಮಾತ್ರ ಬಹಿರಂಗ ಪಡಿಸಲಿಲ್ಲ. ಒಂದು ನ್ಯಾಚುರಲ್ ವಿಷಯವನ್ನಿಟ್ಟುಕೊಂಡು ಶಿವಣ್ಣಗೆ ನಿರ್ದೇಶನ ಮಾಡುವ ಕನಸು ಕಂಡಿರುವ ಅಪ್ಪು ಯಾವಾಗ ಡೈರೆಕ್ಟರ್ ಕ್ಯಾಪ್ ತೊಡುತ್ತಾರೆ ಎನ್ನುವುದನ್ನ ಬಿಟ್ಟುಕೊಟ್ಟಿಲ್ಲ.

ಪುನೀತ್ ಮಾತುಗಳನ್ನು ಕೇಳಿದ ಅಭಿಮಾನಿಗಳು, ಯಾವಾಗ ಈ ಸಿನಿಮಾ ಸೆಟ್ಟೇರಲಿದೆ ಅಂತ ಕಾಯುತ್ತಿದ್ದಾರೆ. ಈಗಾಗಲೇ ಪುನೀತ್ ಅಭಿನಯ, ಗಾಯನ, ಪ್ರೊಡಕ್ಷನ್ ಹೌಸ್, ಆಡಿಯೋ ಕಂಪನಿ ಅಂತ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಇದರ ಜೊತೆಗೀಗ ನಿರ್ದೇಶನ ಮಾಡುವ ಮಾತು ಪ್ರೇಕ್ಷಕರಲ್ಲಿ ಮತ್ತಷ್ಟು ಹುತೂಹಲ ಮೂಡಿಸಿದೆ.

More from Filmibeat

English summary
Kannada actor Puneeth Rajkumar want to direct his brother shiva rajkumar. he is already busy in acting, production. now, puneeth is showing interest to direct movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X