ಪುನೀತ್ ಗೆ ಈ ನಿರ್ದೇಶಕನ ಜೊತೆಗೆ ಸಿನಿಮಾ ಮಾಡುವ ಆಸೆ ಇದೆಯಂತೆ
Recommended Video
ನಟ ಪುನೀತ್ ರಾಜ್ ಕುಮಾರ್ ಗೆ ಒಂದು ಸಿನಿಮಾ ನಿರ್ದೇಶನ ಮಾಡಬೇಕು ಎನ್ನುವುದು ಅನೇಕ ನಿರ್ದೇಶಕರ ಕನಸಾಗಿರುತ್ತದೆ. ಅದೇ ರೀತಿ ಪುನೀತ್ ರಾಜ್ ಕುಮಾರ್ ಕೂಡ ಕೆಲವು ನಿರ್ದೇಶಕರ ಜೊತೆಗೆ ಚಿತ್ರ ಮಾಡುವ ಆಸೆ ಹೊಂದಿದ್ದಾರೆ.
ಪುನೀತ್ ರಾಜ್ ಕುಮಾರ್ ತಮ್ಮ ಎರಡನೇ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಅದೇ 'ಮಾಯಾ ಬಜಾರ್'. ಈ ಸಿನಿಮಾದ ಕಾರ್ಯಕ್ರಮದಲ್ಲಿ ಮಾತನಾಡಿದ ಪುನೀತ್ ನಿರ್ದೇಶಕ ರಾಧಕೃಷ್ಣ ರೆಡ್ಡಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ರಾಧಕೃಷ್ಣ ರೆಡ್ಡಿ ಕೆಲಸ, ಅವರ ಕಥೆ ಪುನೀತ್ ಗೆ ಬಹಳ ಇಷ್ಟವಾಗಿದೆ. ಮುಂದಿನ ದಿನದಲ್ಲಿ ಅವರ ಸಿನಿಮಾಗೆ ನಾಯಕನಾಗುವ ಆಸೆ ಇದೆ ಎಂದು ಪುನೀತ್ ಹೇಳಿದ್ದಾರೆ. ಮುಂದೆ ರಾಧಕೃಷ್ಣ ಜೊತೆಗೆ ಕೆಲಸ ಮಾಡುವ ಸಮಯ ಬರುತ್ತದೆ ಎಂದಿದ್ದಾರೆ.

'ಮಾಯಾ ಬಜಾರ್' ಸಿನಿಮಾದ ಒಂದು ಹಾಡಿನಲ್ಲಿ ಪುನೀತ್ ರಾಜ್ ಕುಮಾರ್ ಹೆಜ್ಜೆ ಹಾಕಿದ್ದಾರೆ. ಮೊದಲ ಬಾರಿಗೆ ಪುನೀತ್ ಸಿನಿಮಾಗೆ ಎಸ್ ಪಿ ಬಾಲಸುಪ್ರಬ್ರಹ್ಮಣ್ಯಂ ಹಾಡಿದ್ದಾರೆ. ಈ ಹಾಡನ್ನು ಯೋಗರಾಜ್ ಭಟ್ ಬರೆದಿದ್ದಾರೆ. ಹಾಡು ಯೂ ಟ್ಯೂಬ್ ನಲ್ಲಿ 1 ಲಕ್ಷ 80 ಸಾವಿರಕ್ಕೂ ಅಧಿಕ ಹಿಟ್ಸ್ ಪಡೆದುಕೊಂಡಿದೆ.


Click it and Unblock the Notifications











