ವಿಲನ್ ಪಾತ್ರಕ್ಕೆ ಸೈ ಎಂದಿದ್ದ ಪುನೀತ್‌ರಾಜ್‌ಕುಮಾರ್!
ನಟ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನಗುವ ನಕ್ಷತ್ರದಂತೆ ಎಲ್ಲರ ಮನಸಲ್ಲಿ ಅಜರಾಮರ ಆಗಿದ್ದಾರೆ. ಅಪ್ಪು ಅವರು ಎಲ್ಲವನ್ನು ಅರ್ಧಕ್ಕೆ ಬಿಟ್ಟು ಹೊರಟು ಹೋಗಿದ್ದಾರೆ. ಹಾಗಾಗಿ ಅಪ್ಪು ಮಾಡಬೇಕಿದ್ದ ಸಿನಿಮಾಗಳು ಹೊಸ ತಿರುವು ಪಡೆದುಕೊಳ್ಳುತ್ತಿವೆ. ಈಗ ಅವರು ಮಾಡಬೇಕಿದ್ದ ಹೊಸ ಪಾತ್ರದ ಬಗ್ಗೆ ಸುದ್ದಿ ಅನಾವರಣ ಆಗಿದೆ.
ನಟ ಪುನೀತ್ ರಾಜ್‌ಕುಮಾರ್ ಅವರು ಹಲವು ಸಿನಿಮಾಗಳನ್ನು ಒಪ್ಪಿಕೊಂಡಿದ್ದರು. ಅಪ್ಪು ಅವರ ಡೇಟ್ ಹಲವು ನಿರ್ದೇಶಕ, ನಿರ್ಮಾಪಕರ ಬಳಿ ಇತ್ತು. ಆದರೆ ಆ ಸಿನಿಮಾಗಳನ್ನು ಪೂರ್ತಿ ಮಾಡುವ ಮೊದಲೇ ಅಪ್ಪು ಇಲ್ಲವಾಗಿದ್ದಾರೆ. ಹಾಗಾಗಿ ಪುನೀತ್‌ರಾಜ್ ಕುಮಾರ್ ಅವರಿಗಾಗಿ ಮಾಡಿದ ಕತೆಗಳಿಗೆ ಹೊಸ ನಾಯಕರು ಹುಟ್ಟಿಕೊಳ್ಳುತ್ತಾ ಇದ್ದಾರೆ.
Recommended Video
ಹೀಗೆ ಪುನೀತ್ ರಾಜ್‌ಕುಮಾರ್ ಅವರು ಮಾಡಕಿದ್ದ ಮತ್ತೊಂದು ಸಿನಿಮಾದ ಬಗ್ಗೆ ಒಂದಷ್ಟು ಸ್ವಾರಸ್ಯಕರ ಸಂಗತಿಗಳು ಹೊರ ಬಿದ್ದಿವೆ. ಅವರದರಲ್ಲೂ ಪುನೀತ್ ಅವರಿಗಾಗಿ ವಿಲನ್ ಪಾತ್ರ ಒಂದು ಸೃಷ್ಟಿ ಆಗಿತ್ತು ಎನ್ನುವುದು ಅಚ್ಚರಿ ಮೂಡುವಂತೆ ಮಾಡುತ್ತದೆ.

'ಮಿಷನ್ ಕೊಲಂಬಸ್'ನಲ್ಲಿ ವಿಲನ್ ಆಗ್ಬೇಕಿತ್ತು ಪುನೀತ್ ರಾಜ್‌ಕುಮಾರ್!
ನಿರ್ದೇಶಕ ಮಂಸೋರೆ ಅವರು ಪುನೀತ್ ರಾಜ್‌ಕುಮಾರ್ ಜೊತೆಗೆ ಒಂದು ಸಿನಿಮಾ ಮಾಡಬೇಕು ಎಂದು, ವರ್ಷಗಳ ಹಿಂದೆಯೇ ಕಥೆ ಒಂದನ್ನು ಸಿದ್ಧ ಮಾಡಿಕೊಂಡಿದ್ದರು. ಈ ವಿಚಾರವನ್ನು ಅವರು ಈ ಹಿಂದೆಯೇ ಹೇಳಿಕೊಂಡಿದ್ದಾರೆ. ಈಗಾಗಲೇ ಪೋಸ್ಟರ್ ಒಂದನ್ನು ಕೂಡ ರಿಲೀಸ್ ಮಾಡಿದ್ದಾರೆ. ಚಿತ್ರಕ್ಕೆ 'ಮಿಷನ್ ಕೊಲಂಬಸ್' ಎನ್ನುವ ಟೈಟಲ್ ಕೂಡ ಇಡಲಾಗಿತ್ತು. ಇದೇ ಚಿತ್ರದಲ್ಲಿ ಅಪ್ಪು ವಿಲನ್ ಶೇಡ್‌ನಲ್ಲಿ ಕಾಣಿಸಿಕೊಳ್ಳಬೇಕಿತ್ತು.

ಹೀರೋನೂ ಅಪ್ಪು, ವಿಲನ್ ಕೂಡ ಅಪ್ಪು!
ಈ ಚಿತ್ರದಲ್ಲಿ ಪುನೀತ್ ರಾಜ್‌ಕುಮಾರ್ ಅವರ ಪಾತ್ರವನ್ನು ತುಂಬಾನೇ ವಿಭಿನ್ನವಾಗಿ ರೂಪಿಸಿದ್ದರು ನಿರ್ದೇಶಕ ಮಂಸೋರೆ ಮತ್ತು ಕಥೆಗಾರ ಟಿ.ಕೆ. ದಯಾನಂದ. ಈ ಕಥೆಯನ್ನು ರಚಿಸಲು ಹೆಚ್ಚು ಸಮಯ ತೆಗೆದುಕೊಂಡು, ಅಪ್ಪು ಅವರಿಗಾಗಿಯೇ ಕಥೆಯನ್ನು ಸಿದ್ದ ಮಾಡಲಾದೆ. ಈ ಕಥೆಯ ನಾಯಕನ ಪಾತ್ರ ಜೆಮ್ಸ್ ಬಾಂಡ್ ರೀತಿಯಲ್ಲಿ ಸಿಕ್ಕಾ ಪಟ್ಟೆ ಸ್ಟೈಲಿಶ್ ಇರುತ್ತೆ. ಹಾಗೆ ವಿಲನ್ ಕೂಡ ತುಂಬಾ ತೂಕ ಇರುವ ವ್ಯಕ್ತಿಯ ಹಾಗೆ ಕಾಣಿಸಿಕೊಳ್ಳುತ್ತಾನೆ. ಹೀರೋಗಿಂತಲೂ ವಿಲನ್ ಪಾತ್ರ ಸ್ಟ್ರಾಂಗ್ ಅಂತೆ. ಹಾಗಾಗಿ ಈ ಚಿತ್ರದಲ್ಲಿ ಪುನೀತ್ ರಾಜ್‌ಕುಮಾರ್ ಅವರನ್ನೇ, ಹೀರೋ ಮತ್ತು ವಿಲನ್ ಪಾತ್ರಕ್ಕೆ ನೇಮಿಸಲಾಗಿತ್ತು.

'ಮಿಷನ್ ಕೊಲಂಬಸ್' ಕಥೆ ಕೇಳಿ ಟೈಮ್ ಬರಲಿ ಎಂದಿದ್ದ ಅಪ್ಪು!
ಈಗಾಗಲೇ ರಿಲೀಸ್ ಆಗಿರುವ ಪೋಸ್ಟರನ್ನು ಅಪ್ಪು ಅವರು ನೋಡಿದ್ದರಂತೆ. ಚಿತ್ರದ ಬಗ್ಗೆ ಮಾತನಾಡಿದಾಗ ಅಪ್ಪು ಮಂಸೋರೆ ಅವರಿಗೆ ಸಿನಿಮಾ ಮಾಡುವ ಭರವಸೆ ನೀಡಿದ್ದರಂತೆ. ಆ ಸಮಯದಲ್ಲಿ ಪುನೀತ್‌ರಾಜ್‌ಕುಮಾರ್ ಅವರು ಬೇರೆ ಸಿನಿಮಾದಲ್ಲಿ ಬ್ಯುಸಿ ಇದ್ದ ಕಾರಣಕ್ಕೆ ಸಮಯ ಬರಲಿ ಖಂಡಿತ ಸಿನಿಮಾ ಮಾಡೋಣ ಎಂದು ಪುನೀತ್ ರಾಜ್‌ಕುಮಾರ್ ಅವರು ಮಂಸೋರೆ ಅವರಿಗೆ ಭರವಸೆ ನೀಡಿದ್ದರಂತೆ. ಈ ವಿಚಾರವನ್ನು ಸಂದರ್ಶನ ಒಂದರಲ್ಲಿ ಮಂಸೋರೆ ಹೇಳಿಕೊಂಡಿದ್ದಾರೆ.

ಈ ಕಥೆಗೆ ಬೇರೆ ನಾಯಕರನ್ನು ಹುಡುಕುವುದು ಕಷ್ಟ: ಮಂಸೋರೆ!
ಇನ್ನು ಈ ಕಥೆಯನ್ನು ಪುನೀತ್ ರಾಜ್‌ಕುಮಾರ್ ಅವರಿಗಾಗಿಯೇ ಮಾಡಲಾಗಿದೆ. ಹಾಗಾಗಿ ಈಗ ಈ ಕಥೆಯನ್ನು ಬೇರೆಯವರಿಗೆ ಸಿನಿಮಾ ಮಾಡುವುದು ಕೊಂಚ ಕಷ್ಟ ಎನ್ನುತ್ತಾರೆ ನಿರ್ದೇಶಕ. ಕಥೆ ಬರೆಯಲು ಆರಂಭಿಸಿದ್ದೇ ಅಪ್ಪು ಪಾತ್ರವನ್ನು ಇಟ್ಟು ಕೊಂಡು. ಹಾಗಾಗಿ ಈ ಕಥೆಗೆ ಬೇರೆ ಅವರನ್ನು ನಾಯಕನಾಗಿ ಮಾಡಿ ಸಿನಿಮಾ ಮಾಡುವುದು ಕಷ್ಟಕರ ಎನ್ನುತ್ತಾರೆ ನಿರ್ದೇಶಕ ಮನ್ಸೋರೆ.


Click it and Unblock the Notifications











