»   » ರಂಗಿತರಂಗ ನೋಡಿ ಸೂಪರ್ ಎಂದ 'ಪವರ್ ಸ್ಟಾರ್'

ರಂಗಿತರಂಗ ನೋಡಿ ಸೂಪರ್ ಎಂದ 'ಪವರ್ ಸ್ಟಾರ್'

Posted By:
Subscribe to Filmibeat Kannada

ಸ್ಯಾಂಡಲ್ ವುಡ್ 'ಪವರ್ ಸ್ಟಾರ್' ಪುನೀತ್ ರಾಜ್ ಕುಮಾರ್ ಇಂದು ಒಬ್ಬ ಸಾಮಾನ್ಯ ಪ್ರೇಕ್ಷಕನಂತೆ ಥಿಯೇಟರ್ ಗೆ ನುಗ್ಗಿ ಮೊನ್ನೆ ಮೊನ್ನೆ ತೆರೆಗೆ ಬಂದ ಕನ್ನಡ ಚಿತ್ರ 'ರಂಗಿತರಂಗ' ವೀಕ್ಷಿಸಿದ್ದಾರೆ. ಇಂದು ಬಹು ನಿರೀಕ್ಷಿತ ತೆಲುಗು ಚಿತ್ರ 'ಬಾಹುಬಲಿ' ಬಿಡುಗಡೆಯ ನಡುವೆಯು ಕನ್ನಡ ಚಿತ್ರ ವೀಕ್ಷಿಸಿ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

ಜುಲೈ 3 ರಂದು ತೆರೆ ಕಂಡಿದ್ದ ಕನ್ನಡ ಚಿತ್ರ 'ರಂಗಿತರಂಗ' ಗಾಂಧಿನಗರದಲ್ಲಿ ಭಾರಿ ಸದ್ದು ಮಾಡುತ್ತಿದೆ. ಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್ ಪಡೆದುಕೊಂಡಿರುವ ಚಿತ್ರ, ಕನ್ನಡ ಚಿತ್ರರಂಗವನ್ನು ಸ್ವಲ್ಪಮಟ್ಟಿಗೆ ಎತ್ತಿ ಹಿಡಿಯುವಲ್ಲಿ ಸಫಲವಾಗಿದೆ.['ರಂಗಿತರಂಗ' ಚಿತ್ರಕ್ಕೆ ವಿಮರ್ಶಕರು ಜೈ ಅಂದ್ರಾ?]

ಇದೀಗ ಕನ್ನಡ ಡೈರೆಕ್ಟರುಗಳು ಕೂಡ ಥ್ರಿಲ್ಲರ್ ಮಿಸ್ಟರಿ ಕಥೆಗಳನ್ನು ಒಳಗೊಂಡ ಚಿತ್ರಗಳನ್ನು ಮಾಡಬಹುದು ಅಂತ 'ರಂಗಿತರಂಗ' ಚಿತ್ರ ಪ್ರೂವ್ ಮಾಡಿದೆ. ಅನುಪ್ ಭಂಡಾರಿ ನಿರ್ದೇಶನದಲ್ಲಿ ಮೂಡಿ ಬಂದಿದ್ದ ಚಿತ್ರದಲ್ಲಿ ನಿರುಪ್ ಭಂಡಾರಿ, ರಾಧಿಕಾ ಚೇತನ್, ಅವಂತಿಕಾ ಶೆಟ್ಟಿ ಲೀಡ್ ರೋಲ್ ನಲ್ಲಿ ಕಾಣಿಸಿಕೊಂಡಿದ್ದರು.

ಕೇವಲ ಪುನೀತ್ ಮಾತ್ರವಲ್ಲದೇ ಸ್ಯಾಂಡಲ್ ವುಡ್ ಇನ್ನೂ ಇಬ್ಬರು ಸ್ಟಾರ್ ನಟರಾದ 'ಉಗ್ರಂ' ಖ್ಯಾತಿಯ ಶ್ರೀ ಮುರಳಿ ಹಾಗೂ 'ರಾಕಿಂಗ್ ಸ್ಟಾರ್' ಯಶ್ ಈ ಮೊದಲೇ ಚಿತ್ರದ ಟ್ರೈಲರ್ ಗೆ ಉತ್ತಮ ಪ್ರಶಂಸೆ ವ್ಯಕ್ತಪಡಿಸಿದ್ದರು.[ರಂಗಿತರಂಗ ಸೌಂಡಿಗೆ ಥ್ರಿಲ್ ಆದ ಮುರಳಿ, ಯಶ್ ]

Puneeth Rajkumar

'ರಂಗಿತರಂಗ' ಚಿತ್ರ ಖಂಡಿತವಾಗಲೂ ಹಿಟ್ ಲಿಸ್ಟ್ ಗೆ ಸೇರುತ್ತೆ ಅಂತಾ ಅನಿಸಿಕೆ ವ್ಯಕ್ತಪಡಿಸಿದ ಮೊದಲ ವ್ಯಕ್ತಿ ಯಶ್ ಆಗಿದ್ದಾರೆ. ಮಾತ್ರವಲ್ಲದೇ 'ಮಿಸ್ಟರ್ ರಾಮಾಚಾರಿ' ನಿರ್ಮಾಪಕ ಜಯಣ್ಣ ಅವರಿಗೆ ಚಿತ್ರ ಎಲ್ಲಾ ಪ್ರೇಕ್ಷಕ ವರ್ಗವನ್ನು ತಲುಪಬೇಕೆಂದು ಪ್ರತ್ಯೆಕವಾಗಿ ತಿಳಿಸಿದ್ದರು.

ಇಂದು ಭಾರಿ ಬಜೆಟ್ ನ 'ಬಾಹುಬಲಿ' ಚಿತ್ರದ ನಡುವೆಯೂ ಸಿಂಗಲ್ ಥಿಯೇಟರ್ ನಲ್ಲಿ ಪ್ರದರ್ಶನ ಕಾಣುತ್ತಿರುವ 'ರಂಗಿತರಂಗ' ಭರ್ಜರಿ ಗಳಿಕೆ ಮಾಡುತ್ತಿದೆ. ನಾವು ಕನ್ನಡಿಗರಾಗಿ ಕನ್ನಡ ಚಿತ್ರವನ್ನು ಉಳಿಸಿ ಬೆಳೆಸೋಣ ಅಲ್ವಾ. 'ರಂಗಿತರಂಗ' ಇಡೀ ಕರ್ನಾಟಕದಲ್ಲಿ ಗ್ರ್ಯಾಂಡ್ ಸಕ್ಸಸ್ ಕಾಣಲಿ ಅಂತ ಹಾರೈಸೋಣ.

English summary
Kannada actor Puneeth Rajkumar to watch well appreciated Movie 'RangiTaranga'. The movie released on July 3. The movie is directed by Anup Bhandari.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada