ಎಲ್ಲರಿಗಿಂತ ಮುಂಚೆ 'ಹಂಬಲ್ ಪೊಲಿಟಿಷಿಯನ್ ನಾಗರಾಜ್' ನೋಡಿದ ಅಪ್ಪು ಏನಂದ್ರು?
'ಹಂಬಲ್ ಪೊಲಿಟಿಶಿಯನ್ ನಾಗರಾಜ್' ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಸಿನಿಮಾ ಇದೇ ವಾರ ರಿಲೀಸ್ ಆಗಲಿದ್ದು, ಅದಕ್ಕೂ ಮುಂಚೆ ಪುನೀತ್ ರಾಜ್ ಕುಮಾರ್ ಈ ಸಿನಿಮಾವನ್ನು ನೋಡಿದ್ದಾರೆ.
ನಿನ್ನೆ (ಭಾನುವಾರ) 'ಹಂಬಲ್ ಪೊಲಿಟಿಶಿಯನ್ ನಾಗರಾಜ್' ಸಿನಿಮಾದ ಪ್ರದರ್ಶನವನ್ನು ಪುನೀತ್ ರಾಜ್ ಕುಮಾರ್ ನಿವಾಸದಲ್ಲಿ ಏರ್ಪಡಿಸಲಾಗಿತ್ತು. ಸಿನಿಮಾದ ನೋಡಿದ ಅಪ್ಪು ಸಖತ್ ಖುಷಿ ಆಗಿದ್ದರಂತೆ. ಅದರಲ್ಲಿಯೂ ಡ್ಯಾನಿಶ್ ಸೇಠ್ ಅಭಿನಯವನ್ನು ಅಪ್ಪು ತುಂಬನೇ ಇಷ್ಟ ಪಟ್ಟಿದ್ದಾರಂತೆ.
ಚಿತ್ರದ ಬಗ್ಗೆ ತಮ್ಮ ಸಂತಸವನ್ನು ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವೇಳೆ ನಟ ರಕ್ಷಿತ್ ಶೆಟ್ಟಿ, ಡ್ಯಾನಿಶ್ ಸೇಠ್ ಮತ್ತು ನಿರ್ದೇಶಕ ಹೇಮಂತ್ ರಾವ್ ಕೂಡ ಇದ್ದಾರೆ.

ಅಂದಹಾಗೆ, 'ಹಂಬಲ್ ಪೊಲಿಟಿಶಿಯನ್ ನಾಗರಾಜ್' ಚಿತ್ರದಲ್ಲಿ ರಾಜಕೀಯ ವ್ಯವಸ್ಥೆಯ ಲೋಪಗಳನ್ನು ಹಾಸ್ಯಮಯವಾಗಿ ತೋರಿಸಲಾಗಿದೆ. ಚಿತ್ರದ ಮುಖ್ಯ ಪಾತ್ರವೊಂದರಲ್ಲಿ ನಟಿ ಶೃತಿ ಹರಿಹರನ್ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಈ ಸಿನಿಮಾದ ಮೇಲೆ ದೊಡ್ಡ ನಿರೀಕ್ಷೆ ಇದೆ. ಸಾಮಾಜಿಕ ಜಾಲತಾಣದಲ್ಲಿ ಸಿನಿಮಾ ಸಖತ್ ಕ್ರೇಜ್ ಹುಟ್ಟಿಸಿದೆ. U ಸರ್ಟಿಫಿಕೇಟ್ ಪಡೆದುಕೊಂಡಿರುವ 'ಹಂಬಲ್ ಪೊಲಿಟಿಷಿಯನ್ ನಾಗರಾಜ್' ಸಿನಿಮಾ ಜನವರಿ 12ಕ್ಕೆ ರಿಲೀಸ್ ಆಗಲಿದೆ.


Click it and Unblock the Notifications











