For Quick Alerts
  ALLOW NOTIFICATIONS  
  For Daily Alerts

  ಪ್ರಭಾಸ್‌ರನ್ನ ಕನ್ನಡಕ್ಕೆ ಸ್ವಾಗತಿಸಿದ ಪುನೀತ್ ರಾಜ್ ಕುಮಾರ್

  |

  'ಬಾಹುಬಲಿ' ಚಿತ್ರದ ಮೂಲಕ ನ್ಯಾಷನಲ್ ಸ್ಟಾರ್ ಎನಿಸಿಕೊಂಡ ತೆಲುಗು ನಟ ಪ್ರಭಾಸ್ ಈಗ ಕನ್ನಡ ಇಂಡಸ್ಟ್ರಿ ಪ್ರವೇಶಿಸಿದ್ದಾರೆ. ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಮುಂದಿನ ಚಿತ್ರದಲ್ಲಿ ಪ್ರಭಾಸ್ ನಟಿಸುತ್ತಿದ್ದು, ಇಂದು ಅಧಿಕೃತವಾಗಿ ಈ ಪ್ರಾಜೆಕ್ಟ್ ಘೋಷಣೆಯಾಗಿದೆ.

  ಪ್ರಭಾಸ್ ಮತ್ತು ಪ್ರಶಾಂತ್ ನೀಲ್ ಕಾಂಬಿನೇಷನ್ ಚಿತ್ರವನ್ನು ಹೊಂಬಾಳೆ ಫಿಲಂಸ್ ನಿರ್ಮಾಣ ಮಾಡುತ್ತಿದ್ದು, ಚಿತ್ರಕ್ಕೆ ಸಲಾರ್ ಎಂದು ಹೆಸರಿಟ್ಟಿದೆ.

  Big News: ಪ್ರಭಾಸ್ ಹೀರೋ ಎಂದು ಘೋಷಿಸಿದ ಹೊಂಬಾಳೆ ಫಿಲಂಸ್

  ಸಲಾರ್ ಸಿನಿಮಾ ಪ್ಯಾನ್ ಇಂಡಿಯಾ ಬಿಡುಗಡೆಯಾಗಲಿದ್ದು, ಕನ್ನಡದಲ್ಲಿ ಮೊಟ್ಟ ಮೊದಲ ಸಲ ಪ್ರಭಾಸ್ ಸಿನಿಮಾ ಏಕಕಾಲದಲ್ಲಿ ತೆರೆಕಾಣಲಿದೆ. ಈ ಮೂಲಕ ಸ್ಯಾಂಡಲ್ ವುಡ್‌ ಇಂಡಸ್ಟ್ರಿಗೆ ಪ್ರಭಾಸ್ ಅಧಿಕೃತ ಪ್ರವೇಶವಾಗಿದೆ.

  ಕನ್ನಡ ಚಿತ್ರರಂಗ ಪ್ರವೇಶಿಸಿದ ತೆಲುಗು ನಟ ಪ್ರಭಾಸ್ ಅವರನ್ನು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಪ್ರೀತಿಯಿಂದ ಸ್ವಾಗತಿಸಿದ್ದಾರೆ. ''ನಮ್ಮ ಕನ್ನಡ ನಾಡಿಗೆ ಪ್ರೀತಿಯಿಂದ ಸ್ವಾಗತಿಸುತ್ತಿದ್ದೇನೆ ಪ್ರಭಾಸ್'' ಎಂದು ಪುನೀತ್ ಟ್ವೀಟ್ ಮಾಡಿದ್ದಾರೆ.

  KGF ನಂತರ ಹೊಂಬಾಳೆ ಫಿಲಂಸ್ ಘೋಷಣೆ ಮಾಡಲಿರೋ ದೊಡ್ಡ ಪ್ರಾಜೆಕ್ಟ್ ಇದೇನಾ?? | Filmibeat Kannada

  ಪುನೀತ್ ರಾಜ್‌ಕುಮಾರ್ ಅನ್ನು ತೆಲುಗಿಗೆ ಸ್ವಾಗತಿಸಿದ ಬಾಹುಬಲಿ

  ಅಂದ್ಹಾಗೆ, ಹೊಂಬಾಳೆ ಫಿಲಂಸ್ ಅಡಿಯಲ್ಲಿ ಪುನೀತ್ ರಾಜ್ ಕುಮಾರ್ ಮೂರು ಸಿನಿಮಾ ಮಾಡಿದ್ದು, ನಾಲ್ಕನೇ ಚಿತ್ರದ ಮಾತುಕತೆಯೂ ಆಗಿದೆ ಎಂಬ ಮಾಹಿತಿ ಸಿಕ್ಕಿದೆ. ಸದ್ಯ, ಯುವರತ್ನ ಸಿನಿಮಾ ತಯಾರಾಗಿದ್ದು, ಬಿಡುಗಡೆಗೆ ಸಜ್ಜಾಗಿದೆ.

  English summary
  Kannada actor Puneeth Rajkumar welcomes Telugu actor Prabhas to Kannada With Salaar. the movie directed by Prashanth Neel.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X