ಐಷಾರಾಮಿ ಆಡಿ Q7 ಕಾರು ಖರೀದಿಸಿದ ಅಶ್ವಿನಿ ಪುನೀತ್ ರಾಜ್‌ಕುಮಾರ್; ಬೆಲೆ ಎಷ್ಟು ಕೋಟಿ?

ಅಪ್ಪು ಅಗಲಿಕೆಯ ಬಳಿಕ ಇಡೀ ಮನೆಯ ಜವಾಬ್ದಾರಿ ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಹೆಗಲೇರಿದೆ. ನಿಧಾನವಾಗಿ ಸಿನಿಮಾ ಕೆಲಸಗಳಲ್ಲಿ ಅಶ್ವಿನಿ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದಾರೆ. ಇನ್ನು ಸಿನಿಮಾ ಕಾರ್ಯಕ್ರಮಗಳಲ್ಲಿ ಕೂಡ ಭಾಗಿ ಆಗುತ್ತಿದ್ದಾರೆ. ಇತ್ತೀಚೆಗೆ ಹೊಸಪೇಟೆಯಲ್ಲಿ ನಡೆದ 'ಯುವ' ಪ್ರೀ ರಿಲೀಸ್‌ ಈವೆಂಟ್‌ಗೆ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

ಪುನೀತ್ ರಾಜ್‌ಕುಮಾರ್ ಅರ್ಧಕ್ಕೆ ಬಿಟ್ಟುಹೋದ ಕೆಲಸಗಳನ್ನು ಅಶ್ವಿನಿ ಪುನೀತ್ ರಾಜ್‌ಕುಮಾರ್ ಮುಂದುವರೆಸುತ್ತಿದ್ದಾರೆ. ಮುಖ್ಯವಾಗಿ ಪಿಆರ್‌ಕೆ ಪ್ರೊಡಕ್ಷನ್ಸ್ ಸಂಸ್ಥೆಯನ್ನು ಕಟ್ಟಿ ಬೆಳೆಸುತ್ತಿದ್ದಾರೆ. ಅದಾಗಲೇ ಅಪ್ಪು ಒಂದಷ್ಟು ಕಥೆಗಳನ್ನು ಫೈನಲ್ ಮಾಡಿ ಸಿನಿಮಾ ನಿರ್ಮಾಣ ಆರಂಭಿಸಿದ್ದರು. ಆ ಸಿನಿಮಾಗಳು ಇದೀಗ ಬಿಡುಗಡೆಗೆ ಸಜ್ಜಾಗುತ್ತಿವೆ.

Puneeth Rajkumar wife Ashwini buys Audi Q7 car worth Crores

ಸದ್ಯ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಐಷಾರಾಮಿ ಕಾರು ಖರೀದಿಸಿದ್ದಾರೆ. ಅಪ್ಪುಗೂ ಕಾರ್‌, ಬೈಕ್ ಕ್ರೇಜ್‌ ಜಾಸ್ತಿ ಇತ್ತು. ಸಾಕಷ್ಟು ಐಷಾರಾಮಿ ಕಾರುಗಳು ಅವರ ಗ್ಯಾರೇಜ್‌ನಲ್ಲಿ ಇವೆ. ಆ ಪಟ್ಟಿಗೆ ಇದೀಗ ಆಡಿಕ್ಯೂ 7 ಕಾರು ಸೇರಿಕೊಂಡಿದೆ. ಸದ್ಯ ಹೆಚ್ಚು ಮಾರಾಟವಾಗುತ್ತಿರುವ ಕಾರುಗಳಲ್ಲಿ ಇದು ಒಂದು. ವಿನ್ಯಾಸ, ಲುಕ್, ಪರ್ಫಾಮೆನ್ಸ್, ಟೆಕ್ನಾಲಜಿ ಹೀಗೆ ಎಲ್ಲಾ ವಿಚಾರದಲ್ಲೂ ಆಡಿ ಕ್ಯೂ7 ಇತರ ಕಾರಗಳಿಗಿಂತ ಬಹಳ ಭಿನ್ನವಾಗಿದೆ.

ಪನೋರಮಿಕ್ ಸನ್‌ರೂಫ್, 4 ಝೋನ್ ಆಟೋ ಕ್ಲೈಮೇಟ್ ಕಂಟ್ರೋಲ್, 250 KMPH ಸ್ಪೀಡ್ ಹೀಗೆ ಸಾಕಷ್ಟು ಫೀಚರ್ಸ್ ಈ ಕಾರ್‌ನಲ್ಲಿದೆ. ಇನ್ನು ಒಂದು ಲೀಟರ್ ಪೆಟ್ರೋಲ್‌ಗೆ 14 ಕಿ.ಲೋವರೆಗೂ ಮೈಲೇಜ್ ನೀಡುತ್ತದೆ. ಇನ್ನು ಕಾರಿನ ಒಳ ವಿನ್ಯಾಸ ಕೂಡ ಅದ್ಭುತವಾಗಿರುತ್ತದೆ. 8 ಏರ್‌ಬ್ಯಾಗ್ಸ್ ಸೇರಿದಂತೆ ಸಾಕಷ್ಟು ಸುರಕ್ಷತೆ ಕಾರ್‌ನಲ್ಲಿದೆ. ಇಷ್ಟೆಲ್ಲಾ ಸೌಲಭ್ಯಗಳಿರುವ ಆಡಿ ಕ್ಯೂ7 ಕಾರಿನ ಆನ್‌ರೋಡ್ ಬೆಲೆ 1 ಕೋಟಿ 10 ಲಕ್ಷ ರೂ.ವರೆಗೂ ಆಗುತ್ತದೆ.

2019ರಲ್ಲಿ ಪತ್ನಿಗೆ ಪುನೀತ್ ರಾಜ್‌ಕುಮಾರ್‌ ಲ್ಯಾಂಬೋರ್ಗಿನಿ ಕಾರು ಉಡುಗೊರೆಯಾಗಿ ನೀಡಿದ್ದು ಭಾರೀ ಸುದ್ದಿ ಆಗಿತ್ತು. ಮಹಿಳಾ ದಿನಾಚರಣೆ ದಿನವೇ ಪತ್ನಿಗೆ ಅಪ್ಪು ಸರ್‌ಪ್ರೈಸ್ ನೀಡಿದ್ದರು. ಬರೋಬ್ಬರಿ 5 ಕೋಟಿ ರೂ. ಮೌಲ್ಯದ ಲ್ಯಾಂಬೋರ್ಗಿನಿ ಉರುಸ್ ನೀಲಿ ಬಣ್ಣದ ಕಾರು ಅದಾಗಿತ್ತು. ಶೋರೂಂನಲ್ಲಿ ಅಪ್ಪು ಕಾರು ಖರೀದಿಸಿದ್ದ ಫೋಟೊಗಳು ಸಖತ್ ವೈರಲ್ ಆಗಿತ್ತು. 'ನಟಸಾರ್ವಭೌಮ' ಸಿನಿಮಾ ಸಕ್ಸಸ್ ಸಂಭ್ರಮದಲ್ಲೇ ಅಪ್ಪು ಮನೆಗೆ ಹೊಸ ಅತಿಥಿಯ ಆಗಮನವಾಗಿತ್ತು.

Puneeth Rajkumar wife Ashwini buys Audi Q7 car worth Crores

ಅಶ್ವಿನಿ ಪುನೀತ್ ರಾಜ್‌ಕುಮಾರ್ ಆಡಿ ಕ್ಯೂ7 ಕಾರು ಖರೀದಿಸಿರುವ ವಿಚಾರವನ್ನು ಆಡಿ ಬೆಂಗಳೂರು ಸೆಂಟ್ರಲ್ ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದೆ. ಅಭಿಮಾನಿಗಳು ಅಭಿನಂದನೆ ತಿಳಿಸುತ್ತಿದ್ದಾರೆ. ಇನ್ನು ಅಪ್ಪು ಅಗಲಿಕೆ ಬಳಿಕ ಪಿಆರ್‌ಕೆ ಪ್ರೊಡಕ್ಷನ್ಸ್ ಸಂಸ್ಥೆಯ 5 ಸಿನಿಮಾಗಳು ತೆರೆಕಂಡಿದೆ. 'ಗಂಧದಗುಡಿ', 'ಆಚಾರ್‌ & ಕೋ' ಸಿನಿಮಾಗಳು ಥಿಯೇಟರ್‌ನಲ್ಲಿ ಕೂಡ ಯಶಸ್ವಿ ಪ್ರದರ್ಶನ ಕಂಡವರು. ಮತ್ತೆರಡು ಸಿನಿಮಾಗಳು ನೇರವಾಗಿ ಓಟಿಟಿಗೆ ಬಂದಿವೆ.

ಸದ್ಯ ಪಿಆರ್‌ಕೆ ಪ್ರೊಡಕ್ಷನ್ಸ್ ನಿರ್ಮಾಣದ 'O2' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಪುನೀತ್ ರಾಜ್‌ಕುಮಾರ್ ಕಥೆ ಕೇಳಿ ಒಪ್ಪಿ ಆರಂಭಿಸಿದ ಕೊನೆಯ ಸಿನಿಮಾಗಳಲ್ಲಿ ಇದು ಒಂದು. ರಾಘವ್ ನಾಯಕ್ ಹಾಗೂ ಪ್ರಶಾಂತ್ ರಾಜ್ ನಿರ್ದೇಶನದ ಈ ಥ್ರಿಲ್ಲರ್ ಚಿತ್ರದಲ್ಲಿ ಆಶಿಕಾ ರಂಗನಾಥ್ ಲೀಡ್‌ ರೋಲ್‌ನಲ್ಲಿ ನಟಿಸಿದ್ದಾರೆ. ಪ್ರವೀಣ್, ಪ್ರಕಾಶ್ ಬೆಳವಾಡಿ, ಸಿರಿ ರವಿಕುಮಾರ್ ಚಿತ್ರದ ತಾರಾಗಣದಲ್ಲಿದ್ದಾರೆ. ಈಗಾಗಲೇ ಟೀಸರ್ ಬಿಡುಗಡೆಯಾಗಿದೆ.

More from Filmibeat

English summary
Ashwini puneeth Rajkumar purchase Audi Q7 car
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X