ಪುನೀತ್ ರಾಜ್‌ಕುಮಾರ್ ಯಾವಾಗಲೂ ನಂಬರ್ 1: ಗಣೇಶ್

ನಟ ಪುನೀತ್ ರಾಜ್‌ಕುಮಾರ್ ಅಗಲಿ ಒಂದು ತಿಂಗಳಾಗುತ್ತಾ ಬಂತು, ಅವರ ನೆನಪು ಇನಿತೂ ಮಾಸಿಲ್ಲ. ಅವರ ಗೈರಿನಲ್ಲಿಯೇ ಚಿತ್ರರಂಗ ಮುಂದೆ ಸಾಗುತ್ತಿದೆ. ಹೊಸ ಸಿನಿಮಾಗಳು ಸೆಟ್ಟೇರುತ್ತಿವೆ, ಬಿಡುಗಡೆ ಆಗುತ್ತಿವೆ, ಪ್ರೆಸ್ ಮೀಟ್‌ಗಳು, ಆಡಿಯೋ ಬಿಡುಗಡೆ ಕಾರ್ಯಕ್ರಮಗಳು, ಪ್ರೀ ರಿಲೀಸ್ ಕಾರ್ಯಕ್ರಮಗಳು ನಡೆಯುತ್ತಲೇ ಇವೆ. ಆದರೆ ಎಲ್ಲ ಕಾರ್ಯಕ್ರಮಗಳಲ್ಲೂ ಅಪ್ಪುವಿನ ನೆನಪು ಇದ್ದೇ ಇದೆ.

Recommended Video

Puneeth Rajkumar ಯಾವತ್ತಿದ್ರೂ ನಂಬರ್ No 1

ನಿನ್ನೆಯಷ್ಟೆ ಗಣೇಶ್ ನಟನೆಯ 'ಸಖತ್' ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮ ಬೆಂಗಳೂರಿನಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಬಹುತೇಕರು ಪುನೀತ್ ರಾಜ್‌ಕುಮಾರ್ ಬಗ್ಗೆ ಮಾತನಾಡಿದರು. ಕೆಲವರಂತೂ ಬಹಳ ಭಾವುಕರಾದರು.

ಚಿತ್ರರಂಗದ ಎಲ್ಲರೊಟ್ಟಿಗೆ ಆತ್ಮೀಯ ಬಂಧ ಹೊಂದಿದ್ದ ಪುನೀತ್ ರಾಜ್‌ಕುಮಾರ್‌ಗೆ ನಟ ಗಣೇಶ್ ಜೊತೆಗೂ ಬಹಳ ಒಳ್ಳೆಯ ಗೆಳೆತನ ಇತ್ತು. ಪುನೀತ್ ಅಗಲಿದಾಗಲೂ ಗಣೇಶ್ ತೀವ್ರ ಆಘಾತಕ್ಕೆ ಒಳಗಾಗಿದ್ದರು. ಇದೀಗ ನಿನ್ನೆ ತಮ್ಮ 'ಸಖತ್' ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ಪುನೀತ್ ಬಗ್ಗೆ ಉದ್ವೇಗದಿಂದ ಮಾತನಾಡಿದ್ದಾರೆ ನಟ ಗಣೇಶ್.

ಪುನೀತ್‌ ಅವರಲ್ಲಿ ಒಂದು ಎನರ್ಜಿ ಇತ್ತು: ಗಣೇಶ್

ಪುನೀತ್‌ ಅವರಲ್ಲಿ ಒಂದು ಎನರ್ಜಿ ಇತ್ತು: ಗಣೇಶ್

''ಪುನೀತ್ ರಾಜ್‌ಕುಮಾರ್ ನನ್ನ ಸಹೋದರ ಸಮಾನರಾಗಿದ್ದರು, ನನ್ನ ಸ್ನೇಹಿತರು ಹಿತೈಷಿಗಳಾಗಿದ್ದರು. ನನ್ನ ಮನಸ್ಸಿನಾಳದಿಂದ ಅಪ್ಪು ಸರ್ ಅವರ ಕುಟುಂಬ ಸದಸ್ಯರಿಗೆ ಈ ದುಃಖ ನೀಗಿಸಿಕೊಳ್ಳುವ ಶಕ್ತಿ ನೀಡಲೆಂದು ಭಗವಂತನಲ್ಲಿ ಪ್ರಾರ್ಥನೆ ಮಾಡಿಕೊಳ್ಳುತ್ತೇನೆ. ಪುನೀತ್ ಅವರು ಸಿಕ್ಕಾಗೆಲ್ಲ ಒಂದು ಎನರ್ಜಿ ಇರ್ತಿತ್ತು. ಅಪ್ಪು ಅಗಲಿ ಇಷ್ಟು ದಿನ ಆದಮೇಲೂ ಅವರ ಬಗ್ಗೆ ನಾವು ಇಷ್ಟೆಲ್ಲ ಮಾತನಾಡುತ್ತಿದ್ದೀವೆಂದರೆ ಅವರು ನಮ್ಮ ಮನಸ್ಸಿನಲ್ಲಿ ಇದ್ದಾರೆಂದು ಅರ್ಥ'' ಎಂದರು ಗಣೇಶ್.

ಚಿತ್ರರಂಗ ಇರುವವರೆಗೆ ಅಪ್ಪು ನಂಬರ್ 1: ಗಣೇಶ್

ಚಿತ್ರರಂಗ ಇರುವವರೆಗೆ ಅಪ್ಪು ನಂಬರ್ 1: ಗಣೇಶ್

''ಎಲ್ಲಿಯವರೆಗೆ ಚಿತ್ರರಂಗ ಇರುತ್ತದೆಯೋ ಅಲ್ಲಿಯವರೆಗೆ ಪುನೀತ್ ರಾಜ್‌ಕುಮಾರ್ ಹೆಸರು ನಂಬರ್ 1 ಆಗಿಯೇ ಇರುತ್ತದೆ. ಪವರ್ ಸ್ಟಾರ್ ಯಾವತ್ತಿದ್ದರೂ ಪವರ್ ಸ್ಟಾರ್ ಆಗಿಯೇ ಇರುತ್ತಾರೆ. ಇತ್ತೀಚೆಗೆ ನಡೆದ 'ಪುನೀತ್ ನಮನ' ಕಾರ್ಯಕ್ರಮದಲ್ಲಿ ರಾಘಣ್ಣ ಹೇಳಿದ ಮಾತು ನನಗೆ ಮನಸ್ಸಿನಲ್ಲಿ ಕುಳಿತುಕೊಂಡು ಬಿಟ್ಟಿತು, ''ಅಪ್ಪು ಅವರನ್ನು ಹೂತಿಲ್ಲ ಬಿತ್ತಿದ್ದೇವೆ'' ಎಂದು. ಅವರ ಆದರ್ಶಗಳನ್ನು ನಾವು ಪಾಲಿಸೋಣ'' ಎಂದರು ಗಣೇಶ್.

ಯಾರೆ ಸಿಕ್ಕಲಿ ಗೌರವದಿಂದ ಮಾತನಾಡುತ್ತಿದ್ದ ಅಪ್ಪು: ಗಣೇಶ್

ಯಾರೆ ಸಿಕ್ಕಲಿ ಗೌರವದಿಂದ ಮಾತನಾಡುತ್ತಿದ್ದ ಅಪ್ಪು: ಗಣೇಶ್

''ಯಾರೆ ಸಿಕ್ಕಲಿ ಬಹಳ ಗೌರವಯುತವಾಗಿ ಅಪ್ಪು ಮಾತನಾಡಿಸುತ್ತಿದ್ದರು. ಅವರ ಆದರ್ಶಗಳು, ಅವರು ಕೊಟ್ಟಂತಹಾ ಪ್ರೀತಿ. ಅವರು ಮಾಡಿದಂಥಹಾ ದೊಡ್ಡ-ದೊಡ್ಡ ಕೆಲಸಗಳು, ಎಲ್ಲವೂ ದೊಡ್ಡ ಹೆಮ್ಮರವಾಗಿ ಬೆಳೆದು, ಆ ಆದರ್ಶಗಳನ್ನು ನಾವು ಪಾಲಿಸುವಂತೆ ಅಪ್ಪು ನಮ್ಮನ್ನು ಪ್ರೇರೇಪಿಸಿದ್ದಾರೆ. ನಾವೂ ಸಹ ಅಪ್ಪು ಅವರ ಆದರ್ಶಗಳನ್ನು ರೂಡಿಸಿಕೊಳ್ಳಬೇಕು'' ಎಂದರು ಗಣೇಶ್. ಪುನೀತ್ ರಾಜ್‌ಕುಮಾರ್ ಎಲ್ಲರೊಂದಿಗೆ ಒಳ್ಳೆಯ ಬಾಂಧವ್ಯ ಹೊಂದಿದ್ದರು. ಗುರುಕಿರಣ್ ಅವರ ಕಳೆದ ವರ್ಷದ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಗಣೇಶ್ ಜೊತೆಗೆ 'ಎಂಟಿವಿ ಸುಬ್ಬುಲಕ್ಷ್ಮಿಗೆ ಬರಿ ಓಳು' ಹಾಡು ಹಾಡುತ್ತಿರುವ ವಿಡಿಯೋ ಒಂದು ವೈರಲ್ ಆಗಿತ್ತು. 'ಮುಂಗಾರು ಮಳೆ' ಸಿನಿಮಾ ಬಂದಾಗಲೂ ಪುನೀತ್ ಸಿನಿಮಾದ ಬಗ್ಗೆ ಮೆಚ್ಚಿ ಮಾತನಾಡಿದ್ದರು.

ಬಿಡುಗಡೆ ಆಗಲಿದೆ 'ಸಖತ್' ಸಿನಿಮಾ

ಬಿಡುಗಡೆ ಆಗಲಿದೆ 'ಸಖತ್' ಸಿನಿಮಾ

ಇನ್ನು 'ಸಖತ್' ಸಿನಿಮಾ ಕೆಲವೇ ದಿನಗಳಲ್ಲಿ ಚಿತ್ರಮಂದಿರದಲ್ಲಿ ಬಿಡುಗಡೆ ಆಗಲಿದೆ. ಸಿನಿಮಾದ ಟ್ರೇಲರ್ ಈಗಾಗಲೇ ಬಿಡುಗಡೆ ಆಗಿದ್ದು ಸಖತ್ ಹಿಟ್ ಆಗಿದೆ. ಸಿಂಪಲ್ ಸುನಿ ನಿರ್ದೇಶನ ಮಾಡಿರುವ ಈ ಸಿನಿಮಾದಲ್ಲಿ ಗಣೇಶ್ ಬಾಲು ಹೆಸರಿನ ಪಾತ್ರದಲ್ಲಿ ನಟಿಸಿದ್ದಾರೆ. ಗಣೇಶ್ ಕುರುಡನ ಪಾತ್ರದಲ್ಲಿ ನಟಿಸಿದ್ದು, ಸಿನಿಮಾದಲ್ಲಿ ಗಣೇಶ್ ನಿಜವಾಗಲೂ ಕುರುಡನಾ ಅಥವಾ ಜನರಿಗೆ ಮೋಸ ಮಾಡಲು ಕುರುಡನಂತೆ ನಟಿಸುತ್ತಿದ್ದಾನಾ ಎಂಬುದು ಗುಟ್ಟಿನ ವಿಷಯ.

More from Filmibeat

English summary
Golden star fame Ganesh said Puneeth Rajkumar will always be number one. He said Puneeth Rajkumar is within us.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X