ಸುದೀಪ್ ಬಯೋಗ್ರಫಿ ಪುಸ್ತಕ ಬಿಡುಗಡೆಗೊಳಿಸಲಿದ್ದಾರೆ ಪುನೀತ್ ರಾಜ್ ಕುಮಾರ್

ಕಿಚ್ಚ ಸುದೀಪ್....ರಾತ್ರೋರಾತ್ರಿ ಸ್ಟಾರ್ ಆದವರಲ್ಲ! ಎಲ್ಲರಂತೆ ಕಾನಿಷ್ಕ ಅಂಗಳದಲ್ಲಿ ಸೈಕಲ್ ಹೊಡೆದವರು! ಆ ಹಾದಿಯಲ್ಲಿ ನೋವುಗಳಿವೆ, ಅವಮಾನಗಳಿವೆ! ಆ ಹಾದಿಯತ್ತ ಬೆಳಕು ಚೆಲ್ಲುವ ಅಭಿಮಾನದ ಕೃತಿಯೊಂದನ್ನು ಸಿದ್ದಪಡಿಸಿದ್ದಾರೆ ಪತ್ರಕರ್ತ ಶರಣು ಹುಲ್ಲೂರು.

Recommended Video

Darshan first reaction about sandalwood drug mafia | Filmibeat Kannada

ಅಭಿನಯ ಚಕ್ರವರ್ತಿಯ ಜೀವನ ಕಥೆಗೆ ಪುಸ್ತಕ ರೂಪ ನೀಡಿ, ಜನರ ಮುಂದೆ ತರುತ್ತಿದ್ದಾರೆ ಸಿನಿಮಾ ಪತ್ರಕರ್ತ ಶರಣು ಹುಲ್ಲೂರು. ಸುದೀಪ್ ಹುಟ್ಟುಹಬ್ಬದ ಪ್ರಯುಕ್ತ ಸೆಪ್ಟೆಂಬರ್ 2 ರಂದು ಬಯೋಗ್ರಫಿ ಪುಸ್ತಕ ಬಿಡುಗಡೆಯಾಗಲಿದ್ದು, ಕನ್ನಡದ ಖ್ಯಾತ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಲೋಕಾರ್ಪಣೆ ಮಾಡಲಿದ್ದಾರೆ.

ಇದುವರೆಗೂ ಈ ಪುಸ್ತಕ ಹೆಸರೇನು ಎನ್ನುವುದು ಬಹಿರಂಗವಾಗಿಲ್ಲ. ಶರಣು ಅವರು ಸಹ ಪುಸ್ತಕ ಹೆಸರನ್ನು ಊಹಿಸಿ ಎಂದು ಅಭಿಮಾನಿಗಳಿಗೆ ಬಿಟ್ಟಿದ್ದಾರೆ.

Puneeth Rajkumar will be releasing Kiccha Sudeeps biography Book

ಈ ಕುರಿತು ಬರಹಗಾರ ಶರಣು ಹುಲ್ಲೂರು ಸಹ ಸಂತಸ ವ್ಯಕ್ತಪಡಿಸಿದ್ದಾರೆ. ''ನೀವು ಈವರೆಗೂ ನೋಡದೇ ಇರುವಂತಹ ಅಭಿನಯ ಚಕ್ರವರ್ತಿ ಸುದೀಪ್ ಅವರ ಅಪರೂಪದ ಫೋಟೋಗಳು ಮತ್ತು ಅನೇಕ ವಿಷಯಗಳು ಬಯೋಗ್ರಫಿಯಲ್ಲಿವೆ. ನಿಮಗೆ ಈ ಪುಸ್ತಕ ತುಂಬಾ ಇಷ್ಟವಾಗತ್ತೆ ಎನ್ನುವ ನಂಬಿಕೆ'' ಎಂದು ಹಳೆಯದೊಂದು ಫೋಟೋ ಹಂಚಿಕೊಂಡಿದ್ದಾರೆ.

ಸುದೀಪ್ ಅವರ ಬಯೋಗ್ರಫಿ ಪುಸ್ತಕದ ಕುರಿತು ಅಭಿಮಾನಿಗಳಿಗೆ ನಿರೀಕ್ಷೆ ಹೆಚ್ಚಾಗಿದೆ. ಕಿಚ್ಚನ ಕುರಿತು ಇದುವರೆಗೂ ಬಹಿರಂಗವಾಗದ ಅನೇಕ ವಿಷಯಗಳು ಈ ಪುಸ್ತಕದಲ್ಲಿ ಇರಲಿದೆ ಎಂಬ ನಿರೀಕ್ಷೆ ಹುಟ್ಟಿಕೊಂಡಿದೆ. ಅಪರೂಪದ ಫೋಟೋಗಳು ಈ ಪುಸ್ತಕ ಒದಗಿಸಲಿದೆ ಎಂಬ ಲೆಕ್ಕಾಚಾರದಲ್ಲಿ ಅಭಿಮಾನಿಗಳಿದ್ದಾರೆ.

Puneeth Rajkumar will be releasing Kiccha Sudeeps biography Book

ಅಂದ್ಹಾಗೆ, ಪತ್ರಿಕೋದ್ಯಮದಲ್ಲಿ ತಮ್ಮದೇ ಛಾಪು ಮೂಡಿಸಿರುವ ಶರಣು ಹುಲ್ಲೂರು ಹಲವು ಪುಸ್ತಕಗಳನ್ನು ಬರೆದಿದ್ದಾರೆ. ರೆಬೆಲ್ ಸ್ಟಾರ್ ಕುರಿತು 'ಅಂಬರೀಶ್' ಎಂಬ ಪುಸ್ತಕ ಬರೆದಿದ್ದರು. 'ಕೊರೋನಾ' ಹೆಸರಿನಲ್ಲು ಸಹ ಪುಸ್ತಕ ಬರೆದಿದ್ದರು. 'ಬದುಕು ಹ್ಯಾಕ್ ಆಗಿದೆ', 'ಸಿನಿ ಸಾಂಗತ್ಯ', 'ಜುಗಲ್ ಬಂದಿ ಕವಿತೆಗಳು' ಎಂಬ ಪುಸ್ತಕಗಳನ್ನು ಸಹ ಹುಲ್ಲೂರು ರಚಿಸಿದ್ದಾರೆ.

More from Filmibeat

English summary
Kannada actor Puneeth Rajkumar will be releasing Kiccha Sudeep's biography Book. written by journalist sharanu hullur.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X