'ಲಕ್ಕಿ ಮ್ಯಾನ್‌' ಚಿತ್ರದಲ್ಲಿ ಎಷ್ಟು ನಿಮಿಷ ಇರಲಿದ್ದಾರೆ ಪುನೀತ್ ರಾಜ್‌ಕುಮಾರ್!

ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ನಟನೆಯ ಕೊನೆಯ ಸಿನಿಮಾಗಳಲ್ಲಿ 'ಲಕ್ಕಿಮ್ಯಾನ್' ಕೂಡ ಒಂದು. ಈಗಾಗಲೇ ಚಿತ್ರದ ಟೀಸರ್, ಸಾಂಗ್ ರಿಲೀಸ್ ಆಗಿ ಗಮನ ಸೆಳೆದಿದೆ. ಸದ್ಯದಲ್ಲೇ ಸಿನಿಮಾ ರಿಲೀಸ್ ಆಗಲಿದೆ. ಈಗಾಗಲೇ ಚಿತ್ರದ ರಿಲೀಸ್ ದಿನಾಂಕ ಕೂಡ ಫಿಕ್ಸ್ ಆಗಿದೆ.

ಈಗಾಗಲೇ 'ಲಕ್ಕಿಮ್ಯಾನ್' ಚಿತ್ರದ ದಾಖಲೆಗಳ ಪರ್ವ ಶುರುವಾಗಿದೆ. ಪ್ರಭುದೇವಾ ಸಹೋದರ ನಾಗೇಂದ್ರ ಪ್ರಸಾದ್ ನಿರ್ದೇಶನದ ಈ ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ, ಸಂಗೀತಾ ಶೃಂಗೇರಿ ಲೀಡ್ ರೋಲ್‌ಗಳಲ್ಲಿ ಮಿಂಚಿದ್ದಾರೆ. ದಿವಂಗತ ಪುನೀತ್ ರಾಜ್‌ಕುಮಾರ್ ಪ್ರಮುಖ ಪಾತ್ರದಲ್ಲಿ ದರ್ಶನ ಕೊಟ್ಟಿದ್ದಾರೆ.

ಇನ್ನು ಚಿತ್ರದಲ್ಲಿ ಪ್ರಭುದೇವಾ ಹಾಗೂ ಪವರ್ ಸ್ಟಾರ್ ಹಾಡೊಂಡಕ್ಕೆ ಭರ್ಜರಿ ಸ್ಟೆಪ್ಸ್ ಹಾಕಿದ್ದಾರೆ. ಅದರ ಮೇಕಿಂಗ್‌ನ ಸಣ್ಣ ಝಲಕ್ ಕೂಡ ರಿಲೀಸ್ ಆಗಿದೆ. ಇನ್ನು ಈ ಚಿತ್ರದಲ್ಲಿ ನಟ ಪುನೀತ್ ರಾಜ್‌ಕುಮಾರ್ ಎಷ್ಟು ಹೊತ್ತು ಇರಲಿದ್ದಾರೆ ಎನ್ನುವ ಬಗ್ಗೆ ಮುಂದೆ ಓದಿ...

'ಲಕ್ಕಿ ಮ್ಯಾನ್'ಗಾಗಿ ದೇವರಾದ ಅಪ್ಪು!

'ಲಕ್ಕಿ ಮ್ಯಾನ್'ಗಾಗಿ ದೇವರಾದ ಅಪ್ಪು!

'ಲಕ್ಕಿ ಮ್ಯಾನ್' ಚಿತ್ರ ರಿಲೀಸ್‌ಗೆ ರೆಡಿಯಾಗಿದೆ. ಇದೇ ಸೆಪ್ಟೆಂಬರ್ 9ಕ್ಕೆ ಸಿನಿಮಾ ಬಿಡುಗಡೆ ಆಗಲಿದೆ. ಈ ಚಿತ್ರದಲ್ಲಿ ಪುನೀತ್ ರಾಜ್‌ಕುಮಾರ್ ಕೂಡ ಅಭಿನಯಿಸಿದ್ದು, ಅವರ ಪಾತ್ರ ಎಷ್ಟು ಹೊತ್ತು ಇರಲಿದೆ ಎನ್ನುವ ಕುತೂಹಲ ಕೂಡ ಇದೆ. ಯಾಕೆಂದರೆ ಈ ಚಿತ್ರದಲ್ಲಿ ಪುನೀತ್ ರಾಜ್‌ಕುಮಾರ್ ನಾಯಕ ನಟನ ಪಾತ್ರದಲ್ಲಿ ಅಭಿನಯಿಸುತ್ತಿಲ್ಲ. ಬದಲಿಗೆ ವಿಶೇಷವಾದ ಪಾತ್ರವೊಂದರಲ್ಲಿ, ಅತಿಥಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಹಾಗಾಗಿ ಅವರ ಪಾತ್ರ ತೆರೆಯ ಮೇಲೆ ಎಷ್ಟು ಕಾಲ ಇರಲಿದೆ ಎನ್ನುವ ಕುತೂಹಲ ಇತ್ತು. ಇದಕ್ಕೆ ನಿರ್ದೇಶಕ ನಾಗೇಂದ್ರ ಪ್ರಸಾದ್ ಉತ್ತರ ಕೊಟ್ಟಿದ್ದಾರೆ.

50 ನಿಮಿಷ ಇರಲಿದೆ ಅಪ್ಪು ಪಾತ್ರ!

50 ನಿಮಿಷ ಇರಲಿದೆ ಅಪ್ಪು ಪಾತ್ರ!

ಲಕ್ಕಿ ಮ್ಯಾನ್ ಚಿತ್ರದಲ್ಲಿ ಅಪ್ಪು ಅತಿಥಿ ಪಾತ್ರ ಮಾಡಿದ್ದಾರೆ ಅಂದಾಕ್ಷಣ ಅದು ಚಿಕ್ಕ ಪಾತ್ರವಲ್ಲ. ಇಡೀ ಸಿನಿಮಾದಾದ್ಯಂತ ಪುನೀತ್ ರಾಜಕುಮಾರ್ ಪಾತ್ರ ಇರುತ್ತದೆ. ಮುಖ್ಯ ಘಟ್ಟಗಳಲ್ಲಿ ಆಗಾಗ ಅಪ್ಪು ಬಂದು ಹೋಗುತ್ತಾರೆ. ಅವರನ್ನು ಸಿನಿಮಾದಾದ್ಯಂತ ಪ್ರೇಕ್ಷಕರು ಮಿಸ್ ಮಾಡಿಕೊಳ್ಳುವುದಿಲ್ಲ ಎಂದಿದ್ದಾರೆ ನಿರ್ದೇಶಕ. ಒಟ್ಟಾರೆ ಇಡೀ ಸಿನಿಮಾದಲ್ಲಿ ಅವರ ಪಾತ್ರ 45 ನಿಮಿಷಗಳ ಕಾಲ ಇರಲಿದೆಯಂತೆ. ಒಂದು ಹಾಡು ಸೇರಿಸಿದರೆ ಒಟ್ಟಾರೆ 50 ನಿಮಿಷಕ್ಕೂ ಹೆಚ್ಚು ಕಾಲ ಪುನೀತ್ ರಾಜಕುಮಾರ್ ಅವರ ಪಾತ್ರ ಸಿನಿಮಾದಲ್ಲಿ ಇರಲಿದೆಯಂತೆ.

ದುಬಾರಿ ಮೊತ್ತಕ್ಕೆ 'ಲಕ್ಕಿ ಮ್ಯಾನ್' ಸೇಲ್!

ದುಬಾರಿ ಮೊತ್ತಕ್ಕೆ 'ಲಕ್ಕಿ ಮ್ಯಾನ್' ಸೇಲ್!

ಪುನೀತ್‌ ರಾಜ್‌ಕುಮಾರ್‌ ಕ್ರೇಜ್ ಕಾರಣ ಪ್ರದರ್ಶಕರು ಸಿನಿಮಾ ಹಕ್ಕುಗಳಿಗಾಗಿ ಮುಗಿಬಿದ್ದಿದ್ದಾರೆ. ಪರಿಣಾಮ ಒಂದೇ ದಿನಕ್ಕೆ ಹಕ್ಕುಗಳು ಮಾರಾಟವಾಗಿದೆ. ಅದು ಕೂಡ ದುಬಾರಿ ಮೊತ್ತಕ್ಕೆ ಈ ಚಿತ್ರದ ಹಕ್ಕುಗಳು ಮಾರಾಟವಾಗಿವೆ. 'ಲಕ್ಕಿ ಮ್ಯಾನ್' ಚಿತ್ರದ ವಿತರಣಾ ಹಕ್ಕು 7 ಕೋಟಿ ಮೌಲ್ಯಕ್ಕೆ ಮಾರಟವಾಗಿದೆ ಎನ್ನಲಾಗಿದೆ. ಈ ಚಿತ್ರವನ್ನು ನೋಡಲು ಅಪ್ಪು ಅಭಿಮಾನಿಗಳು ಮಾತ್ರವಲ್ಲದೇ, ಕರುನಾಡಿನ ಜನ ಕೂಡ ಕಾತರರಾಗಿದ್ದಾರೆ. ಅದಕ್ಕೆ ಪುನೀತ್ ರಾಜ್‌ಕುಮಾರ್ ಕಾರಣ.

'ಗಂಧದಗುಡಿ'ಯಲ್ಲಿ ಅಪ್ಪು ದರ್ಶನ!

'ಗಂಧದಗುಡಿ'ಯಲ್ಲಿ ಅಪ್ಪು ದರ್ಶನ!

ಪುನೀತ್‌ ರಾಜ್‌ಕುಮಾರ್ ಕೊನೆಯ ಸಿನಿಮಾಗಳಲ್ಲಿ ಮಾತ್ರವೇ ಅವ್ರನ್ನು, ತೆರೆಯ ಮೇಲೆ ಕಣ್ತುಂಬಿಕೊಳ್ಳಲು ಸಾಧ್ಯ. ಹಾಗಾಗಿ ದೊಡ್ಡಮಟ್ಟದಲ್ಲಿ ಅಭಿಮಾನಿಗಳು ನೆಚ್ಚಿನ ನಟನ ಸಿನಿಮಾಗಳನ್ನು ನೋಡಲು ಮುಗಿಬೀಳುತ್ತಿದ್ದಾರೆ. ಅದಕ್ಕೆ 'ಜೇಮ್ಸ್' ಸಿನಿಮಾ ಉತ್ತಮ ಉದಾಹರಣೆ. 'ಗಂಧದಗುಡಿ' ಸಾಕ್ಷ್ಯಚಿತ್ರ ಬಿಟ್ಟರೆ ಅಪ್ಪು ನಟಿಸಿರೋ ಕೊನೆಯ ಕಮರ್ಷಿಯಲ್ ಸಿನಿಮಾ 'ಲಕ್ಕಿಮ್ಯಾನ್'. ಹಾಗಾಗಿ ಈ ಸಿನಿಮಾ ಬಗ್ಗೆ ಭಾರೀ ನಿರೀಕ್ಷೆ ಇದೆ. ಅದಕ್ಕೆ ತಕ್ಕಂತೆ ಸಿನಿಮಾ ಪ್ರೀ ರಿಲೀಸ್ ಬ್ಯುಸಿನೆಸ್‌ ಶುರುವಾಗಿದೆ. ಈ ಚಿತ್ರದ ಬಳಿಕ 'ಗಂಧದಗುಡಿ'ಯಲ್ಲಿ ಅಪ್ಪು ಎಂಟ್ರಿಕೊಡಲಿದ್ದಾರೆ.

More from Filmibeat

English summary
Puneeth Rajkumar Will Be Seen 50 Minutes In Lucky Man Movie, Says Director Nagendra Prasad, Know More,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X