ದುನಿಯಾ ವಿಜಯ್ 'ಸಲಗ' ಚಿತ್ರಕ್ಕೆ ಪುನೀತ್ ರಾಜ್ ಕುಮಾರ್ ಸಾಥ್
ದುನಿಯಾ ವಿಜಯ್ ನಟಿಸಿ, ನಿರ್ದೇಶನ ಮಾಡುತ್ತಿರುವ ಸಲಗ ಸಿನಿಮಾ ಪ್ರತಿಯೊಂದು ಹಂತದಲ್ಲೂ ಕುತೂಹಲ ಹೆಚ್ಚಿಸುತ್ತಲೇ ಸಾಗುತ್ತಿದೆ. ಹಲವು ವಿಚಾರದಲ್ಲಿ ವಿಶೇಷವೆನಿಸಿಕೊಂಡಿರುವ ಸಲಗ ಚಿತ್ರಕ್ಕೆ ಈಗ ಪುನೀತ್ ರಾಜ್ ಕುಮಾರ್ ಸಾಥ್ ನೀಡುತ್ತಿದ್ದಾರೆ.
Recommended Video
ಓಂ ಆದ್ಮೇಲೆ ನಾನು ಎಂಜಾಯ್ ಮಾಡಿದ ಸಿನಿಮಾ ಇದು | Filmibeat Kannada
'ಸಲಗ' ಸಿನಿಮಾದ ಮಳೆಯೇ....ಮಳೆಯೇ ಹಾಡನ್ನು ಸೆಪ್ಟೆಂಬರ್ 5 ರಂದು ಪವರ್ ಸ್ಟಾರ್ ಪುನೀತ್ ಬಿಡುಗಡೆ ಮಾಡಲಿದ್ದಾರೆ. ಲಾಕ್‌ಡೌನ್‌ನಿಂದ ಚಿತ್ರೀಕರಣ ನಿಲ್ಲಿಸಿದ್ದ ಸಲಗ ಮತ್ತೆ ಶೂಟಿಂಗ್ ಶುರು ಮಾಡಿದ್ದು, ಇತ್ತೀಚಿಗಷ್ಟೆ ಮಡಿಕೇರಿಯಲ್ಲಿ ಸಾಂಗ್ ಶೂಟಿಂಗ್ ಸಹ ಮಾಡಿತ್ತು.
ಚರಣ್ ರಾಜ್ ಈ ಚಿತ್ರಕ್ಕೆ ಸಂಗೀತ ನೀಡಿದ್ದು, ಈಗಾಗಲೇ ಸೂರಿ 'ಅಣ್ಣಾ ಸಾಂಗ್' ದೊಡ್ಡ ಹಿಟ್ ಬಾರಿಸಿದೆ. ಹಾಗಾಗಿ, ಸಲಗ ಚಿತ್ರದ ಮುಂದಿನ ಹಾಡುಗಳ ಮೇಲೂ ಸಹಜವಾಗಿ ಕುತೂಹಲ ಹುಟ್ಟಿಕೊಂಡಿದೆ.

ಇನ್ನುಳಿದಂತೆ ಕೆಪಿ ಶ್ರೀಕಾಂತ್ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. 'ಟಗರು' ಸಿನಿಮಾದಲ್ಲಿ ಕೆಲಸ ಮಾಡಿದ್ದು ಬಹುತೇಕ ಅದೇ ತಾಂತ್ರಿಕ ವರ್ಗ ಈ ಚಿತ್ರದಲ್ಲೂ ಭಾಗಿಯಾಗಿದೆ.
More from Filmibeat
English summary
Kannada actor Puneeth Rajkumar will release Maleye Maleye song from Salaga on september 5th.


Click it and Unblock the Notifications











