For Quick Alerts
  ALLOW NOTIFICATIONS  
  For Daily Alerts

  'ಡಾನ್ ಜಯರಾಜ್'ಗೆ ಪವರ್ ಹೆಚ್ಚಿಸಲಿದ್ದಾರೆ ಪುನೀತ್ ರಾಜ್ ಕುಮಾರ್

  |

  ಡಾಲಿ ಖ್ಯಾತಿಯ ಧನಂಜಯ್ ಡಾನ್ ಜಯರಾಜ್ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎನ್ನುವುದು ಗೊತ್ತಿರುವ ಸಂಗತಿ. ಅಗ್ನಿ ಶ್ರೀಧರ್ ಈ ಚಿತ್ರಕ್ಕೆ ಕಥೆ ಮಾಡಿದ್ದು, ಧನಂಜಯ್ ತೆರೆಮೇಲೆ ಡಾನ್ ಆಗಿ ಮಿಂಚಲಿದ್ದಾರೆ.

  Upendra ಕ್ರಿಕೆಟ್ಆಡಿದ್ದು ಹೀಗೆ | I love you behind the scenes

  ಅಶುಬೇದ್ರ ಈ ಚಿತ್ರ ನಿರ್ಮಾಣ ಮಾಡುತ್ತಿದ್ದು, ನವ ನಿರ್ದೇಶಕ ಶೂನ್ಯ ಈ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಫೆಬ್ರವರಿ ತಿಂಗಳಲ್ಲಿ ಈ ಚಿತ್ರದ ಬಗ್ಗೆ ಹಾಗೂ ತಾಂತ್ರಿಕ ವರ್ಗದ ಬಗ್ಗೆ ಚಿತ್ರತಂಡ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿತ್ತು.

  'ಜಯರಾಜ್' ಚಿತ್ರಕ್ಕಾಗಿ ಭಾರಿ ಸಂಭಾವನೆ ಪಡೆದ ಧನಂಜಯ'ಜಯರಾಜ್' ಚಿತ್ರಕ್ಕಾಗಿ ಭಾರಿ ಸಂಭಾವನೆ ಪಡೆದ ಧನಂಜಯ

  ಅದಾದ ಬಳಿಕ ಕೊರೊನಾ ವೈರಸ್, ಲಾಕ್‌ಡೌನ್, ಶೂಟಿಂಗ್ ಸ್ಥಗಿತಗೊಂಡ ಹಿನ್ನೆಲೆ ಈ ಸಿನಿಮಾ ಬಗ್ಗೆ ಯಾವುದೇ ಅಪ್‌ಡೇಟ್ ಇರಲಿಲ್ಲ. ಇದೀಗ, ಧನಂಜಯ್ ಚಿತ್ರದ ಕ್ಯಾಂಪ್‌ನಿಂದ ಸರ್ಪ್ರೈಸ್ ಸುದ್ದಿ ಹೊರಬಿದ್ದಿದೆ. ಡಾಲಿಯ ಡಾನ್ ಅವತಾರಕ್ಕೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸಾಥ್ ನೀಡಲಿದ್ದಾರೆ. ಮುಂದೆ ಓದಿ...

  'ಡಾನ್' ಪವರ್ ಹೆಚ್ಚಿಸಲಿರುವ ಪುನೀತ್

  'ಡಾನ್' ಪವರ್ ಹೆಚ್ಚಿಸಲಿರುವ ಪುನೀತ್

  ಧನಂಜಯ್ ಮತ್ತು ಅಗ್ನಿ ಶ್ರೀಧರ್ ಜುಗುಲ್ ಬಂದಿಯಲ್ಲಿ ಬರಲಿರುವ ಹೊಸ ಚಿತ್ರದ ಟೈಟಲ್ ಅನಾವರಣವನ್ನು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮಾಡಲಿದ್ದಾರೆ. ಈ ಚಿತ್ರದಲ್ಲಿ ಧನಂಜಯ್, ಎಂಪಿ ಜಯರಾಜ್ ಪಾತ್ರ ನಿರ್ವಹಿಸುತ್ತಿದ್ದಾರೆ. ಚಿತ್ರದ ಕಥೆಯೇ ಜಯರಾಜ್ ಸುತ್ತವೇ ಹಣೆದಿರುವುದರಿಂದ ಶೀರ್ಷಿಕೆ ಸಹ ಜಯರಾಜ್ ಹೆಸರಿಗೆ ಬಹಳ ಹತ್ತಿರವಿರಲಿದೆ ಎಂದು ಹೇಳಲಾಗುತ್ತಿದೆ.

  ಆಗಸ್ಟ್ 15ಕ್ಕೆ ಶೀರ್ಷಿಕೆ ಘೋಷಣೆ

  ಆಗಸ್ಟ್ 15ಕ್ಕೆ ಶೀರ್ಷಿಕೆ ಘೋಷಣೆ

  ಆಗಸ್ಟ್ 15 ರಂದು ಬೆಳಗ್ಗೆ 10 ಗಂಟೆಗೆ ಅಧಿಕೃತ ಟ್ವಿಟ್ಟರ್, ಫೇಸ್‌ಬುಕ್ ಖಾತೆಯಲ್ಲಿ ಪುನೀತ್ ರಾಜ್ ಕುಮಾರ್ ಅವರ ಚಿತ್ರದ ಶೀರ್ಷಿಕೆ ಅನಾವರಣ ಮಾಡಲಿದ್ದಾರೆ. ಅಗ್ನಿ ಶ್ರೀಧರ್ ಅವರ ಆತ್ಮಕಥೆ 'ದಾದಾಗಿರಿಯ ದಿನಗಳು' ಆಧಾರಿತ ಸಿನಿಮಾ ಇದಾಗಿದ್ದು, ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಅವರೇ ರಚಿಸಲಿದ್ದಾರೆ.

  'ಬಡವ ರಾಸ್ಕಲ್' ಚಿತ್ರಕ್ಕೆ ಪುನೀತ್ ರಾಜ್ ಕುಮಾರ್ ಸಾಥ್'ಬಡವ ರಾಸ್ಕಲ್' ಚಿತ್ರಕ್ಕೆ ಪುನೀತ್ ರಾಜ್ ಕುಮಾರ್ ಸಾಥ್

  'ಬಡವ ರಾಸ್ಕಲ್'ಗೆ ಬಲ ತುಂಬಿದ್ದ ಪುನೀತ್

  'ಬಡವ ರಾಸ್ಕಲ್'ಗೆ ಬಲ ತುಂಬಿದ್ದ ಪುನೀತ್

  ಧನಂಜಯ್ ನಟಿಸುತ್ತಿರುವ ಬಡವ ರಾಸ್ಕಲ್ ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿದ್ದು ಸಹ ಪುನೀತ್ ರಾಜ್ ಕುಮಾರ್. ಅಪ್ಪು ಅಭಿನಯದ ಯುವರತ್ನ ಚಿತ್ರದಲ್ಲಿ ಧನಂಜಯ್ ನಟಿಸಿದ್ದಾರೆ. ಹೀಗಾಗಿ, ಡಾಲಿ ಚಿತ್ರಗಳಿಗೆ ಪುನೀತ್ ನಿರಂತರವಾಗಿ ಸಪೋರ್ಟ್ ಮಾಡುತ್ತಾ ಬಂದಿದ್ದಾರೆ.

  ಸಂಭಾವನೆ ವಿಚಾರಕ್ಕೆ ಸುದ್ದಿ!

  ಸಂಭಾವನೆ ವಿಚಾರಕ್ಕೆ ಸುದ್ದಿ!

  ಡಾನ್ ಜಯರಾಜ್ ಕುರಿತು ಮೂಡಿಬರಲಿರುವ ಈ ಚಿತ್ರವನ್ನು ಐದು ಭಾಷೆಗಳಲ್ಲಿ ಸಿದ್ದಪಡಿಸುವುದು ಚಿತ್ರತಂಡದ ಗುರಿ. ಈ ಚಿತ್ರಕ್ಕಾಗಿ ಧನಂಜಯ್ ಸಹ ಭಾರಿ ದೊಡ್ಡ ಮೊತ್ತದ ಸಂಭಾವನೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ಮೂಲಗಳ ಪ್ರಕಾರ, ಡಾಲಿ ವೃತ್ತಿ ಜೀವನದಲ್ಲಿ ಈ ಚಿತ್ರದಲ್ಲೇ ಹೆಚ್ಚು ಸಂಭಾವನೆ ಪಡೆದಿದ್ದಾರೆ ಎಂದು ಸುದ್ದಿಯಾಗಿತ್ತು.

  English summary
  Power star Puneeth Rajkumar joins hands with Dhananjay's new movie. The title will be revealed by Puneeth Rajkumar.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X