ಅಮ್ಮನ ಯಶೋಗಾಥೆ ಹೇಳಲು ಅಪ್ಪು ಮಾಡ್ತಿರೋದೇನು?

By Bharath Kumar

ದೊಡ್ಮನೆ ಅಮ್ಮ, ಪಾರ್ವತಮ್ಮ ರಾಜ್ ಕುಮಾರ್ ನಿಧನರಾಗಿ ಸುಮಾರು 8 ತಿಂಗಳು ಕಳೆದಿದೆ. ಕನ್ನಡ ಚಿತ್ರರಂಗ ಕಂಡ ಯಶಸ್ವಿ ನಿರ್ಮಾಪಕರಲ್ಲಿ ಪಾರ್ವತಮ್ಮ ಕೂಡ ಪ್ರಮುಖರು. ಇಂತಹ ಪಾರ್ವತಮ್ಮನ ಬಗ್ಗೆ ಬಹುಶಃ ಕನ್ನಡ ಚಿತ್ರರಂಗದ ಎಲ್ಲರಿಗೂ ಗೊತ್ತಿದೆ.

ಆದ್ರೆ, ಸಾಮಾನ್ಯ ಜನರಿಗೆ ಅದೇಷ್ಟೋ ವಿಷ್ಯಗಳು ಗೊತ್ತಿಲ್ಲ. ಇದನ್ನ ಜನರಿಗೆ ತಲುಪಿಸಲು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮುಂದಾಗಿದ್ದಾರೆ. ಅಮ್ಮನ ಸಾಧನೆ, ಬದುಕು, ಕೆಲಸಗಳ ಬಗ್ಗೆ ಅಭಿಮಾನಿಗಳಿಗೆ ತಿಳಿಸುವ ಮನಸ್ಸು ಮಾಡಿದ್ದಾರೆ.

ಇದಕ್ಕಾಗಿ ಅಪ್ಪು ಕೈಯಲ್ಲಿ ಪೆನ್ ಹಿಡಿಯಲಿದ್ದಾರೆ. ತಾನು ಕಂಡ ಅಮ್ಮನ ಬದುಕನ್ನ ಅಕ್ಷರ ರೂಪಕ್ಕೆ ಇಳಿಸಲಿದ್ದಾರೆ. ಸ್ವತಃ ಪಾರ್ವತಮ್ಮ ಅವರೇ ಹೇಳಿಕೊಂಡು ಅನುಭವಗಳನ್ನ ಅಪ್ಪು ಬಿಚ್ಚಿಡಲಿದ್ದಾರಂತೆ. ಹಾಗಿದ್ರೆ, ಪುನೀತ್ ರಾಜ್ ಕುಮಾರ್ ಅವರ ಈ ಕನಸಿನ ಪುಸ್ತಕದಲ್ಲಿ ಏನೆಲ್ಲಾ ಇರುತ್ತೆ ಎಂದು ತಿಳಿಯಲು ಮುಂದೆ ಓದಿ...

ಏನಿರಲಿದೆ ಪಾರ್ವತಮ್ಮನ ಪುಸ್ತಕದಲ್ಲಿ?

ಏನಿರಲಿದೆ ಪಾರ್ವತಮ್ಮನ ಪುಸ್ತಕದಲ್ಲಿ?

ಕನ್ನಡ ಚಿತ್ರರಂಗದಲ್ಲಿ ಪಾರ್ವತಮ್ಮ ರಾಜ್ ಕುಮಾರ್ ಅವರ ಸಾಧನೆ ಅಪಾರ. ದೊಡ್ಡ ನಿರ್ಮಾಪಕಿಯಾಗಿದ್ದರು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಆದರೆ ಅವರು ಸಿನಿಮಾ ನಿರ್ಮಾಣಕ್ಕೆ ಇಳಿದಿದ್ದೇಕೆ? ಈ ಜವಾಬ್ದಾರಿಯನ್ನು ಏಕೆ ತೆಗೆದುಕೊಳ್ಳಬೇಕಾಯಿತು ಎಂಬ ವಿಚಾರಗಳು ಸೇರಿದಂತೆ ಹಲವು ವಿಷ್ಯಗಳನ್ನ ಪುನೀತ್ ಬರೆಯಲಿದ್ದಾರೆ.

ಪಾರ್ವತಮ್ಮನ ಸ್ಮಾರಕ ನಿರ್ಮಾಣ

ಪಾರ್ವತಮ್ಮನ ಸ್ಮಾರಕ ನಿರ್ಮಾಣ

ಪಾರ್ವತಮ್ಮ ರಾಜ್ ಕುಮಾರ್ ಅವರ ಸ್ಮಾರಕ ನಿರ್ಮಾಣ ಕಾರ್ಯಕ್ಕೆ ಬಿರುಸಿನಿಂದ ಸಿದ್ಧತೆ ನಡೆಯುತ್ತಿದೆ. ಸ್ಮಾರಕದ ಸಮೀಪ ಒಂದು ಧ್ಯಾನಕೇಂದ್ರ ನಿರ್ವಿುಸುವ ಆಲೋಚನೆ ಕೂಡ ಮಾಡಲಾಗಿದೆಯಂತೆ.

ಅಮ್ಮನ ಹಾದಿಯಲ್ಲಿ ಅಪ್ಪು

ಅಮ್ಮನ ಹಾದಿಯಲ್ಲಿ ಅಪ್ಪು

ಪಾರ್ವತಮ್ಮ ಅವರಂತೆ ಪುನೀತ್ ರಾಜ್ ಕುಮಾರ್ ಕೂಡ ಚಿತ್ರ ನಿರ್ಮಾಣದಲ್ಲಿ ತೊಡಗಿಕೊಂಡಿದ್ದಾರೆ. ತಮ್ಮ ನಿರ್ಮಾಣ ಸಂಸ್ಥೆಯ ಮೂಲಕ ಹೊಸ ಹೊಸ ಪ್ರತಿಭೆಗಳಿಗೆ ಅವಕಾಶ ನೀಡುತ್ತಿದ್ದಾರೆ. ನಿರ್ದೇಶಕ ಹಾಗೂ ನಟರನ್ನ ಕನ್ನಡ ಚಿತ್ರರಂಗಕ್ಕೆ ಪರಿಚಯ ಮಾಡ್ತಿದ್ದಾರೆ. ಪ್ರಯೋಗಾತ್ಮಕ ಚಿತ್ರಗಳಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ.

ಪುನೀತ್ ಹೊಸ ಸಿನಿಮಾ ಯಾವುದು?

ಪುನೀತ್ ಹೊಸ ಸಿನಿಮಾ ಯಾವುದು?

ಅಂಜನಿಪುತ್ರ ಚಿತ್ರದ ನಂತರ ಪುನೀತ್ ಮುಂದಿನ ಚಿತ್ರ ಯಾವುದು ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಶಶಾಂಕ್, ಪವನ್ ಒಡೆಯರ್ ಜೊತೆ ಸಿನಿಮಾ ಮಾಡಲಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಇನ್ನೂ ಮಾತುಕತೆ ನಡೆಯುತ್ತಿದ್ದು,. ಫೆಬ್ರವರಿ ಅಂತ್ಯದ ವೇಳೆಗೆ ಈ ಬಗ್ಗೆ ಅಧಿಕೃತ ಘೋಷಣೆಯಾಗಲಿದೆ.

More from Filmibeat

English summary
Kannada Actor Puneeth Rajkumar has decided to write a book about his mother Parvathamma Rajkumar.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X