For Quick Alerts
  ALLOW NOTIFICATIONS  
  For Daily Alerts

  Filmibeat Poll Result: ಭಾರಿ ಪೈಪೋಟಿಯಲ್ಲಿ ಗೆದ್ದು ಬೀಗಿದ ಪುನೀತ್ ರಾಜ್ ಕುಮಾರ್

  |

  2019ನೇ ಸಾಲಿನ ಅತ್ಯುತ್ತಮ ಸಿನಿಮಾ, ನಟ, ನಟಿ ಸೇರಿದಂತೆ ಸುಮಾರು 9 ವಿಭಾಗದಲ್ಲಿ ಫಿಲ್ಮಿಬೀಟ್ ಕನ್ನಡ ಪೋಲ್ ಆಯೋಜನೆ ಮಾಡಿತ್ತು. ಡಿಸೆಂಬರ್ 20ಕ್ಕೆ ವೋಟಿಂಗ್ ಆರಂಭವಾಗಿತ್ತು. ಸುಮಾರು ಒಂದು ತಿಂಗಳಿಗೆ ಹೆಚ್ಚು ಕಾಲ ವೋಟ್ ಮಾಡಲು ಅವಕಾಶ ಕಲ್ಪಿಸಲಾಗಿತ್ತು.

  Bigg Boss Kannada 07 : Shine Shetty lifts the BB trophy | Kuri Prathap

  ಜನವರಿ 31 ರಂದು ಫಿಲ್ಮಿಬೀಟ್ ಆಯೋಜಿಸಿದ್ದ ಬೆಸ್ಟ್ ಆಫ್ ಸ್ಯಾಂಡಲ್ ವುಡ್ ಪೋಲ್ ಅಂತ್ಯವಾಗಿದೆ. ಅಧಿಕೃತ ಅಂತಿಮ ಫಲಿತಾಂಶ ಪ್ರಕಟವಾಗಿದ್ದು, ಅತ್ಯುತ್ತಮ ನಟ ವಿಭಾಗದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಗೆದ್ದು ಬೀಗಿದ್ದಾರೆ.

  ಹಾಗಿದ್ರೆ, ಪುನೀತ್ ರಾಜ್ ಕುಮಾರ್ ಗೆ ಪೈಪೋಟಿ ನೀಡಿದ ನಟ ಯಾರು? ಅಪ್ಪು ಒಟ್ಟು ಎಷ್ಟು ಮತಗಳಿಸಿದರು? ಮುಂದೆ ಓದಿ...

  ಅತಿ ಹೆಚ್ಚು ಮತ ಪಡೆದ ಪುನೀತ್

  ಅತಿ ಹೆಚ್ಚು ಮತ ಪಡೆದ ಪುನೀತ್

  ಸುಮಾರು 40 ದಿನಕ್ಕೂ ಹೆಚ್ಚು ಕಾಲ ನಡೆದ ಫಿಲ್ಮಿಬೀಟ್ ವೋಟಿಂಗ್ ನಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅತಿ ಹೆಚ್ಚು ಮತ ಗಳಿಸಿ ಜಯಶಾಲಿಯಾಗಿದ್ದಾರೆ. ಅಪ್ಪು ಅಭಿಮಾನಿಗಳು ಹೆಚ್ಚು ಮತ ಹಾಕಿ ಪುನೀತ್ ಅವರನ್ನು ಗೆಲ್ಲಿಸಿದ್ದಾರೆ.

  ಫಿಲ್ಮಿಬೀಟ್ ಪೋಲ್: ದರ್ಶನ್-ಪುನೀತ್ ಅಭಿಮಾನಿಗಳ ನಡುವೆ ಭಾರಿ ಪೈಪೋಟಿಫಿಲ್ಮಿಬೀಟ್ ಪೋಲ್: ದರ್ಶನ್-ಪುನೀತ್ ಅಭಿಮಾನಿಗಳ ನಡುವೆ ಭಾರಿ ಪೈಪೋಟಿ

  ಪುನೀತ್ ಗಳಿಸಿದ ಮತ ಎಷ್ಟು?

  ಪುನೀತ್ ಗಳಿಸಿದ ಮತ ಎಷ್ಟು?

  ಅತ್ಯುತ್ತಮ ನಟ ವಿಭಾಗದಲ್ಲಿ ಒಟ್ಟು 173243 ಲಕ್ಷ ವೋಟಿಂಗ್ ಆಗಿತ್ತು. ಇದರಲ್ಲಿ ಪುನೀತ್ ರಾಜ್ ಕುಮಾರ್ 70111 ಮತ ಪಡೆದುಕೊಂಡಿದ್ದಾರೆ. ಈ ಮೂಲಕ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಹಿಂದಿಕ್ಕಿ ಅಪ್ಪು ಮೊದಲ ಸ್ಥಾನ ಗಳಿಸಿಕೊಂಡಿದ್ದಾರೆ.

  ಡಿ ಬಾಸ್ ಪಡೆದುಕೊಂಡ ಮತ ಎಷ್ಟು?

  ಡಿ ಬಾಸ್ ಪಡೆದುಕೊಂಡ ಮತ ಎಷ್ಟು?

  ಆರಂಭದಿಂದಲೂ ಮುನ್ನಡೆಯಲ್ಲಿದ್ದ ದರ್ಶನ್, ಪುನೀತ್ ರಾಜ್ ಕುಮಾರ್ ಅವರಿಗೆ ಭಾರಿ ಪೈಪೋಟಿ ನೀಡಿದ್ದರು. ಆದರೆ, ಅಂತಿಮ ಹಂತಕ್ಕೆ ಬರುತ್ತಿದ್ದಂತೆ ಪುನೀತ್ ಮುನ್ನಡೆ ಸಾಧಿಸಿದರು. ಅಂತಿಮವಾಗಿ ದರ್ಶನ್ 69517 ಮತ ಪಡೆದುಕೊಂಡರು. ಅಲ್ಲಿಗೆ ಪುನೀತ್ ಮತ್ತು ದರ್ಶನ್ ನಡುವಿನ ಅಂತರ ಕೇವಲ 594 ಮತಗಳು ಮಾತ್ರ. ಹೀಗಾಗಿ, ಡಿ ಬಾಸ್ ಎರಡನೇ ಸ್ಥಾನದಲ್ಲಿದ್ದಾರೆ.

  ಉಳಿದಂತೆ ಯಾರೆಲ್ಲಾ ಸ್ಪರ್ಧೆಯಲ್ಲಿದ್ದರು

  ಉಳಿದಂತೆ ಯಾರೆಲ್ಲಾ ಸ್ಪರ್ಧೆಯಲ್ಲಿದ್ದರು

  ಪುನೀತ್ ರಾಜ್ ಕುಮಾರ್ ಮತ್ತು ದರ್ಶನ್ ಅವರನ್ನು ಬಿಟ್ಟರೆ ಕಿಚ್ಚ ಸುದೀಪ್, ಶಿವರಾಜ್ ಕುಮಾರ್, ರಕ್ಷಿತ್ ಶೆಟ್ಟಿ, ರವಿಚಂದ್ರನ್, ರಿಷಬ್ ಶೆಟ್ಟಿ, ಸತೀಶ್ ನೀನಾಸಂ, ಜಗ್ಗೇಶ್ ಕೂಡ ಸ್ಫರ್ಧೆಯಲ್ಲಿದ್ದರು.

  ನಟಸಾರ್ವಭೌಮ ಚಿತ್ರದ ಅಭಿನಯ

  ನಟಸಾರ್ವಭೌಮ ಚಿತ್ರದ ಅಭಿನಯ

  ಅಂದ್ಹಾಗೆ, ಈ ವರ್ಷ ಪುನೀತ್ ರಾಜ್ ಕುಮಾರ್ ಮಾಡಿದ್ದು ಒಂದೇ ಚಿತ್ರ. ಪವನ್ ಒಡೆಯರ್ ನಿರ್ದೇಶಿಸಿದ್ದ ನಟಸಾರ್ವಭೌಮ ಚಿತ್ರದಲ್ಲಿ ಅಪ್ಪು ನಟಿಸಿದ್ದರು. ಈ ಹಿಂದಿನ ಚಿತ್ರಗಳಿಗೆ ಹೋಲಿಸಿಕೊಂಡರೆ ಪುನೀತ್ ಅವರದ್ದು ಹೊಸ ರೀತಿಯ ಪಾತ್ರ ಮತ್ತು ಚಿತ್ರವಾಗಿತ್ತು.

  English summary
  Filmibeat poll final result announced. power star Puneeth rajkumar wins best actor 2019 title.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X