ವಿಶೇಷ ವಿಡಿಯೋ ಶೇರ್ ಮಾಡಿ ಮಕ್ಕಳ ದಿನಾಚರಣೆಗೆ ಶುಭ ಕೋರಿದ ಅಪ್ಪು
ನವೆಂಬರ್ 14 ದೇಶದ ಮಕ್ಕಳಿಗೆ ಸುದಿನ. ಇಂದು ದೇಶದಾದ್ಯಂತ ಮಕ್ಕಳ ದಿನಾಚರಣೆಯ ಸಂಭ್ರಮ. ದೀಪಾವಳಿ ಮತ್ತು ಮಕ್ಕಳ ದಿನಾಚರಣೆ ಒಟ್ಟೊಟ್ಟಿಗೆ ಬಂದಿರುವುದು ಮಕ್ಕಳ ಪಾಲಿಗಂತು ಡಬಲ್ ಸಂಭ್ರಮವಾಗಿದೆ. ನಮ್ಮ ದೇಶದ ಮೊದಲ ಪ್ರಧಾನಿ ಜವಾಹರ್ ಲಾಲ್ ನೆಹರೂ ಅವರ ಹುಟ್ಟಿದ ದಿನ. ಅವರ ಸವಿನೆನಪಿಗಾಗಿ ಅವರು ಪ್ರೀತಿಸುವ ಮಕ್ಕಳಿಗೆ ಈ ದಿನವನ್ನು ಮೀಸಲಿಡಲಾಗಿದೆ.
Recommended Video
ಶಾಲೆ, ಕಾಲೇಜುಗಳಲ್ಲಿ ಮಕ್ಕಳ ದಿನಾಚರಣೆಯನ್ನು ವಿಶೇಷವಾಗಿ ಆಚರಣೆ ಮಾಡಲಾಗುತ್ತೆ. ಮಕ್ಕಳ ದಿನಾಚರಣೆಯ ಅಂಗವಾಗಿ ಅನೇಕರು ಪ್ರೀತಿಯ ಮಕ್ಕಳಿಗೆ ಶುಭಾಶಯ ಕೋರುತ್ತಿದ್ದಾರೆ. ಸಿನಿಮಾ ಗಣ್ಯರು ಸಹ ವಿಶ್ ಮಾಡುತ್ತಿದ್ದಾರೆ. ಮಕ್ಕಳೆಂದರೆ ತುಂಬಾ ಇಷ್ಟ ಪಡುವ ಸ್ಯಾಂಡಲ್ ವುಡ್ ನ ಅಪ್ಪು, ಪವರ್ ಸ್ಟಾರ್ ಪುನೀತ್ ರಾಜ್ ವಿಶೇಷವಾದ ವಿಡಿಯೋ ಹಂಚಿಕೊಳ್ಳುವ ಮಕ್ಕಳಿಗೆ ಪ್ರೀತಿಯ ಶುಭಾಶಯ ತಿಳಿಸಿದ್ದಾರೆ.
ಪುಟ್ಟ ಮಗುವೊಂದು 'ಕಣ್ಣಿಗೆ ಕಾಣುವ ದೇವರು ಎಂದರೆ ಅಮ್ಮನು ತಾನೆ...' ಹಾಡನ್ನು ಹಾಗೂ 'ಬಾನದಾರಿಯಲ್ಲಿ ಸೂರ್ಯ ಜಾರಿ ಹೋದ ಚಂದ್ರ ಮೇಲೆ ಬಂದ..' ಹಾಡನ್ನು ಹಾಡುತ್ತಾ ಹೆಜ್ಜೆ ಹಾಕುತ್ತಿರುವ ಮುದ್ದಾದ ವಿಡಿಯೋವನ್ನು ಶೇರ್ ಮಾಡಿದ್ದಾರೆ. ಈ ಸುಂದರ ವಿಡಿಯೋಗೆ ಅಭಿಮಾನಿಗಳ ಮೆಚ್ಚುಗೆ ಹರಿದುಬರುತ್ತಿವೆ.

ವಿಡಿಯೋ ಶೇರ್ ಮಾಡಿ, 'ಮಕ್ಕಳ ದಿನಾಚರಣೆಯ ಶುಭಾಶಯಗಳು' ಎಂದು ಹೇಳಿದ್ದಾರೆ. ಅಪ್ಪುಗೆ ಮಕ್ಕಳೆಂದರೆ ತುಂಬಾ ಪ್ರೀತಿ. ಮಕ್ಕಳು ಅಷ್ಟೆ ಪುನೀತ್ ರಾಜ್ ಕುಮಾರ್ ನನ್ನು ತುಂಬಾ ಇಷ್ಟ ಪಡುತ್ತಾರೆ. ಮಕ್ಕಳ ಜೊತೆ ಜಾಹೀರಾತು, ಸಿನಿಮಾ, ಹಾಡು, ಡ್ಯಾನ್ಸ್ ಅಂತ ಪುನೀತ್ ಮಕ್ಕಳ ಜೊತೆ ಹೆಚ್ಚಾಗಿ ಸಮಯ ಕಳೆಯುತ್ತಾರೆ.
ಇತ್ತೀಚಿಗೆ ಪುನೀತ್ ರಾಜಕುಮಾರ ಸಿನಿಮಾದಲ್ಲಿ ಅಪ್ಪು ಡ್ಯಾನ್ಸ್..ಹಾಡಿನಲ್ಲಿ ಮಕ್ಕಳ ಜೊತೆ ಹೆಜ್ಜೆ ಹಾಕಿದ್ದರು. ಮಕ್ಕಳ ಜೊತೆ ಮಕ್ಕಳಾಗಾಗೆ ಇದ್ದು, ಅವರ ಮೊಗದಲ್ಲಿ ಸಂತೋಷ ತರಿಸುವ ಅಪ್ಪು ಇಂದು ವಿಶೇಷವಾಗಿ ವಿಶ್ ಮಕ್ಕಳ ಗಮನ ಸೆಳೆದಿದ್ದಾರೆ.


Click it and Unblock the Notifications










