For Quick Alerts
  ALLOW NOTIFICATIONS  
  For Daily Alerts

  ಪ್ಯಾರಾಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದ ಭವೀನಾ ಪಟೇಲ್: ಶುಭಕೋರಿದ ಪುನೀತ್

  |

  ಟೋಕಿಯೋ ಒಲಂಪಿಕ್ಸ್ ನಂತರ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತೀಯರ ಪದಕದ ಬೇಟೆ ಮುಂದುವರಿದಿದೆ. ಭಾರತದ ಪ್ಯಾರಾ ಟೇಬಲ್ ಟೆನಿಸ್ ಆಟಗಾರ್ತಿ ಭವೀನಾ ಪಟೇಲ್ ಪ್ಯಾರಾಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ. ಈ ಮೂಲಕ ಭಾರತಕ್ಕೆ ಐತಿಹಾಸಿಕ ಕೀರ್ತಿ ತಂದುಕೊಡುವಲ್ಲಿ ಭವೀನಾ ಯಶಸ್ಸು ಕಂಡಿದ್ದು, ದೇಶದ ಹೆಣ್ಣು ಮಗಳ ಸಾಧನೆಗೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.

  ಬೆಳ್ಳಿ ಪದಕ ಗೆದ್ದ ಭವೀನಾ ಪಟೇಲ್‌ಗೆ ಕನ್ನಡದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಂದನೆ ಸಲ್ಲಿಸಿದ್ದಾರೆ. ಟ್ವಿಟ್ಟರ್ ಮೂಲಕ ಶುಭಕೋರಿರುವ ಪವರ್‌ಸ್ಟಾರ್, ''ಪ್ಯಾರಾಲಿಂಪಿಕ್ಸ್‌ನಲ್ಲಿ ಮೊದಲ ಬೆಳ್ಳಿ ಪದಕ ಗೆಲ್ಲುವ ಮೂಲಕ ಭವೀನಾ ಪಟೇಲ್ ಇತಿಹಾಸ ಸೃಷ್ಟಿಸಿದರು. ರಾಷ್ಟ್ರೀಯ ಕ್ರೀಡಾ ದಿನ ಆರಂಭಿಸಲು ಅದ್ಭುತ ಮಾರ್ಗ'' ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

  ಪ್ಯಾರಾಲಿಂಪಿಕ್ಸ್‌ನಲ್ಲಿ ಐತಿಹಾಸಿಕ ಬೆಳ್ಳಿ ಪದಕ ಗೆದ್ದ ಭವೀನಾಬೆನ್ ಪಟೇಲ್

  ಟೇಬಲ್ ಟೆನಿಸ್ ಆಟದಲ್ಲಿ ಬೆಳ್ಳಿ ಪದಕ ಗೆದ್ದ ಭವೀನಾ ಪಟೇಲ್‌ಗೆ ಶುಭಕೋರಿರುವ ಪ್ರಿಯಾ ಸುದೀಪ್, ''ಇದು ಭಾರತಕ್ಕೆ ಹೆಮ್ಮೆಯ ಕ್ಷಣ'' ಎಂದು ಟ್ವೀಟ್ ಮಾಡಿದ್ದಾರೆ. ಬಾಲಿವುಡ್ ನಟ ರಣದೀಪ್ ಹೂಡ ಸಹ ಭವೀನಾ ಪಟೇಲ್‌ಗೆ ಅಭಿನಂದನೆ ಸಲ್ಲಿಸಿದ್ದಾರೆ. ''ನಿಮ್ಮ ಪದಕದೊಂದಿಗೆ ಇತಿಹಾಸ ನಿರ್ಮಿಸಿದ್ದಕ್ಕೆ ಧನ್ಯವಾದಗಳು ಭವೀನಾ ಪಟೇಲ್. ನಿಮ್ಮ ಪ್ರತಿಭೆ ಮತ್ತು ನಿಮ್ಮ ಪರಿಶ್ರಮ ನಮ್ಮನ್ನು ಅಚ್ಚರಿಗೊಳಿಸಿದೆ'' ಎಂದು ಬಾಲಿವುಡ್ ನಟ ಅಕ್ಷಯ್ ಕುಮಾರ್ ಶುಭಕೋರಿದ್ದಾರೆ.

  34ರ ಹರೆಯದ ಭಾರತದ ಈ ಆಟಗಾರ್ತಿ ಭವೀನಾ ಪ್ರಸ್ತುತ ಪ್ಯಾರಾಲಿಂಪಿಕ್ಸ್ ಟೂರ್ನಿಯಲ್ಲಿ ಅದ್ಭುತವಾದ ಪ್ರದರ್ಶನ ನೀಡಿದ್ದರು. ಅಗ್ರ ಶ್ರೇಯಾಂಕದ ಆಟಗಾರರ ವಿರುದ್ಧವೂ ಗೆಲುವು ಸಾಧಿಸಿ ಫೈನಲ್‌ಗೆ ಪ್ರವೇಶ ಪಡೆದುಕೊಂಡಿದ್ದರು. ಆದರೆ ಫೈನಲ್‌ನಲ್ಲಿ ಚೀನಾದ ಪೆಡ್ಲರ್ ಝಿಂಗ್ ಝೌ ವಿರುದ್ಧ 7-11, 5-11, 6-11 ಅಂತರದಿಂದ ಸೋಲು ಅನುಭವಿಸಿದರು.

  19 ನಿಮಿಷದಲ್ಲಿ ಈ ಪಂದ್ಯ ಮುಕ್ತಾಯ ಕಂಡಿತ್ತು. ಈ ಮೂಲಕ ಚಿನ್ನದ ಪದಕಕ್ಕೆ ಭವೀನಾ ಕೈ ತಪ್ಪಿತು. ಝೌ ವಿರುದ್ಧ ಗ್ರೂಪ್ ಹಂತದಲ್ಲಿಯೂ ಹೋರಾಟ ನಡೆಸಿ ಸೋಲು ಅನುಭವಿಸಿದ್ದರು ಭವೀನಾ ಪಟೇಲ್.

  English summary
  Actor Puneeth Raj Kumar and Priya sudeep wishes to Para-Table Tennis player Bhavina Patel for winning silver medal at the Paralympics.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X