Don't Miss!
- News
ಬೆಳಗಾವಿಯಲ್ಲಿ ಮಹಾರಾಷ್ಟ್ರ ಸರ್ಕಾರ ಕಚೇರಿ ತೆರೆಯಬೇಕು: ಸಂಜಯ್ ರಾವತ್
- Automobiles
ಪ್ರತಿ 2 ಸೆಕೆಂಡುಗಳಿಗೆ ಒಂದು ಸ್ಕೂಟರ್ ಉತ್ಪಾದನೆ ಮಾಡಲಿದೆ ಓಲಾ ಎಲೆಕ್ಟ್ರಿಕ್
- Finance
ಸೆನ್ಸೆಕ್ಸ್ 1,100 ಪಾಯಿಂಟ್ಸ್ ಕುಸಿತ: ನಿಫ್ಟಿ 332 ಪಾಯಿಂಟ್ಸ್ ಇಳಿಕೆ
- Sports
ಈ ಐಪಿಎಲ್ನ 'ಮ್ಯಾನ್ ಆಫ್ ದ ಟೂರ್ನಿ' ಹೆಸರಿಸಿದ ಮೈಕಲ್ ವಾನ್
- Lifestyle
ಕೊರೊನಾ 2ನೇ ಡೋಸ್ ಪಡೆದ ಬಳಿಕ ರೋಗ ನಿರೋಧಕ ಶಕ್ತಿ ಹೆಚ್ಚಲು ಎಷ್ಟು ದಿನ ಬೇಕು?
- Education
Ninasam Diploma Admission 2020-21: ಮೇ ತಿಂಗಳಲ್ಲಿ ನೀನಾಸಂ ಡಿಪ್ಲೋಮಾ ಪ್ರವೇಶಾತಿ ಆರಂಭ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಸೌತ್ ಸ್ಟಾರ್ ಗಳ ಜೊತೆ 'ರಾಜಕುಮಾರ': ಪರಭಾಷಿಗರಿಗೆ 'ಅಪ್ಪು'ನೇ ಫೇವರೆಟ್.!

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಂದ್ರೆ ಸ್ಯಾಂಡಲ್ ವುಡ್ ಮಂದಿ ಸಿಕ್ಕಾಪಟ್ಟೆ ಇಷ್ಟ ಪಡ್ತಾರೆ. ಸಿನಿಮಾ ರಂಗಕ್ಕೆ ಬರೋ ಬಹುಳಷ್ಟು ಪ್ರತಿಭೆಗಳು ಪುನೀತ್ ಜೊತೆ ಸಿನಿಮಾ ಮಾಡ್ಬೇಕು ಎಂಬ ಆಸೆ ಹೊಂದಿರುತ್ತಾರೆ. ಸ್ಟಾರ್ ನಟರಿಗೂ ಕೂಡ ಅಪ್ಪು ಅಂದ್ರೆ ಅಷ್ಟೇ ಇಷ್ಟ. ಅಭಿಮಾನಿಗಳ ಮಧ್ಯೆ ಎಷ್ಟೇ ಕಾಂಪಿಟೇಶನ್ ಇದ್ರು ಸುದೀಪ್, ದರ್ಶನ್, ಯಶ್, ಉಪೇಂದ್ರ ಹೀಗೆ ಎಲ್ಲರಿಗೂ ಪುನೀತ್ ಫೆವರೇಟ್.
ಕನ್ನಡದ ಈ ರಾಜರತ್ನವನ್ನ ಕನ್ನಡಿಗರು ಮೆಚ್ಚಿಕೊಳ್ಳುವುದು ಸಾಮಾನ್ಯ. ಆದ್ರೆ, ಪರಭಾಷೆಯ ನಟರು ಕೂಡ ಅಪ್ಪುವಿನ ವ್ಯಕ್ತಿತ್ವ ಮತ್ತು ಸಿನಿಮಾಗಳಿಗೆ ಮನಸೋತಿರುವ ಉದಾಹರಣೆಗಳಿವೆ.
ಅಭಿಮಾನಿಗಳಿಗಾಗಿ 'ರಾಜರ ರಾಜ' ಅಪ್ಪು ಹುಟ್ಟುಹಬ್ಬ ಅರ್ಪಣೆ
ತಮಿಳು, ತೆಲುಗು, ಹಿಂದಿ ಹಾಗೂ ಮಲಯಾಳಂ ಚಿತ್ರರಗದಲ್ಲೂ ಪವರ್ ಸ್ಟಾರ್ ಕಂಡ್ರೆ ಇಷ್ಟ ಪಡುವ ಸ್ಟಾರ್ ನಟರಿದ್ದಾರೆ. ಹಾಗಿದ್ರೆ, ಯಾವೆಲ್ಲ ನಟರ ಜೊತೆ ಅಪ್ಪು ವೇದಿಕೆ ಹಂಚಿಕೊಂಡಿದ್ದಾರೆ. ಯಾವೆಲ್ಲ ನಟರ ಜೊತೆ ಬಾಂಧವ್ಯ ಹೊಂದಿದ್ದಾರೆ ಎಂದು ಮುಂದೆ ನೋಡಿ....ಮುಂದೆ ಓದಿ....

ಮಹೇಶ್ ಬಾಬು ಮತ್ತು ಪುನೀತ್
ತೆಲುಗು ಚಿತ್ರರಂಗದಲ್ಲಿ ಸೂಪರ್ ಸ್ಟಾರ್ ಅಂತಾಲೇ ಕರೆಸಿಕೊಳ್ಳುವ ಮಹೇಶ್ ಬಾಬುಗೆ ಅಪ್ಪು ಅಂದ್ರೆ ಇಷ್ಟ. ಮಹೇಶ್ ಬಾಬು ಅಭಿನಯದ ದೂಕುಡು ಚಿತ್ರವನ್ನ ಕನ್ನಡದಲ್ಲಿ ಪುನೀತ್ ಪವರ್ ಅಂತ ಸಿನಿಮಾ ಮಾಡಿದ್ದರು. ಈ ವೇಳೆ ಕನ್ನಡದ ಪವರ್ ಚಿತ್ರದ ಆಡಿಯೋವನ್ನ ಸ್ವತಃ ಮಹೇಶ್ ಬಾಬು ಅವರೇ ಆಗಮಿಸಿ ಬಿಡುಗಡೆಗೊಳಿಸಿದ್ದರು.

ಅಪ್ಪು ಅಂದ್ರೆ ಅಲ್ಲುಗೆ ಇಷ್ಟ
ಪುನೀತ್ ರಾಜ್ ಕುಮಾರ್ ಅವರ ಡ್ಯಾನ್ಸ್, ಫೈಟ್ ಅಂದರೆ ತೆಲುಗು ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಗೆ ಬಹಳ ಇಷ್ಟ. ಇದನ್ನು ಅವರೇ ಅನೇಕ ಬಾರಿ ಹೇಳಿಕೊಂಡಿದ್ದಾರೆ. ಇನ್ನು ಪುನೀತ್ ರಾಜ್ ಕುಮಾರ್ ಅಭಿನಯದ 'ಜಾಕಿ' ಸಿನಿಮಾದ ತೆಲುಗು ಆಡಿಯೋ ಬಿಡುಗಡೆ ಮಾಡಿದ್ದು ಸಹ ಅಲ್ಲು ಅರ್ಜುನ್. ಇನ್ನು ಅಲ್ಲು ಅರ್ಜುನ್ ಮದುವೆಗೆ ಸ್ವತಃ ತಾವೇ ಡಾ ರಾಜ್ ಮನೆಗೆ ಬಂದು ಎಲ್ಲರನ್ನ ಆಹ್ವಾನಿಸಿದ್ದರು.

ವಿಜಯ್ ಮತ್ತು ಪುನೀತ್
ಕನ್ನಡ ಪುನೀತ್ ರಾಜ್ ಕುಮಾರ್ ಅವರ ಜೊತೆ ತಮಿಳು ನಟ ವಿಜಯ್ ಅವರ ಸ್ನೇಹ ಉತ್ತಮವಾಗಿದೆ. ಕರ್ನಾಟಕಕ್ಕೆ ಬಂದರೇ ಅಪ್ಪು ಅವರನ್ನ ಭೇಟಿ ಮಾಡುತ್ತಾರೆ ವಿಜಯ್. ಇನ್ನು ತಮಿಳಿನಲ್ಲಿ ವಿಜಯ್ ಅಭಿನಯಿಸಿದ್ದ ಗಿಲ್ಲಿ ಚಿತ್ರವನ್ನ ಕನ್ನಡದಲ್ಲಿ ಪುನೀತ್ ಮಾಡಿದ್ದರು. ಅಷ್ಟೇ ಅಲ್ಲದೇ, ತಮಿಳುನಾಡಿನ ಕೆಲ ಕಾರ್ಯಕ್ರಮಗಳಲ್ಲಿ ವಿಜಯ್ ಮತ್ತು ಪುನೀತ್ ವೇದಿಕೆ ಹಂಚಿಕೊಂಡಿದ್ದಾರೆ. ಶಿವಣ್ಣ ಅಭಿನಯದ ಜೋಗಯ್ಯ ಸಿನಿಮಾದ ಮುಹೂರ್ತ ವೇಳೆ ಕೂಡ ವಿಜಯ್ ಆಗಮಿಸಿದ್ದರು.

ಎನ್.ಟಿ.ಆರ್ ಗೆಳೆಯ ಪುನೀತ್
ಇನ್ನು ತೆಲುಗು ಯಂಗ್ ಟೈಗರ್ ಎನ್.ಟಿ.ಆರ್ ಮತ್ತು ಪುನೀತ್ ರಾಜ್ ಕುಮಾರ್ ಬೆಸ್ಟ್ ಫ್ರೆಂಡ್ಸ್. ಪುನೀತ್ ಅಭಿನಯದ 'ಚಕ್ರವ್ಯೂಹ' ಚಿತ್ರದ ಹಾಡೊಂದನ್ನ ಎನ್.ಟಿ.ಆರ್ ಹಾಡಿದ್ದರು. ತೆಲುಗಿನ ಎನ್.ಟಿ.ಆರ್ ಕುಟುಂಬ ಮತ್ತು ರಾಜ್ ಕುಟುಂಬದ ನಡುವೆ ಉತ್ತಮ ಬಾಂಧವ್ಯ ಇದೆ. ಹೀಗಾಗಿ, ಇವರಿಬ್ಬರು ಮಧ್ಯೆ ಸ್ನೇಹ ಚೆನ್ನಾಗಿದೆ. ಬಹುಶಃ ಈ ಸ್ನೇಹ ಮುಂದಿನ ದಿನಗಳಲ್ಲಿ ತೆರೆಮೇಲೆ ಬಂದರೂ ಅಚ್ಚರಿಯಿಲ್ಲ.

ಮೆಗಾಸ್ಟಾರ್ ಜೊತೆ ಪವರ್ ಸ್ಟಾರ್
ತೆಲುಗು ಮೆಗಾಸ್ಟಾರ್ ಚಿರಂಜೀವಿ ಅವರಂದ್ರೆ ಪುನೀತ್ ಗೆ ಒಂದು ರೀತಿಯ ಗೌರವ. ಅದೇ ರೀತಿ ಮೆಗಾಸ್ಟಾರ್ ಗೆ ಡಾ ರಾಜ್ ಕುಮಾರ್ ಅವರಂದ್ರೆ ಅಪಾರ ಗೌರವ. ಹೀಗಾಗಿ, ಚಿರಂಜೀವಿ ಮತ್ತು ಪುನೀತ್ ನಡುವೆ ಕೂಡ ಉತ್ತಮ ಬಾಂಧವ್ಯವಿದೆ. ಇತ್ತೀಚಿಗೆ ಕನ್ನಡ ಕಲಾವಿದರ ಭವನ ನೋಡಲು ಬಂದಿದ್ದ ಚಿರು ಜೊತೆ ಪುನೀತ್ ಬಹಳ ಆತ್ಮೀಯವಾಗಿ ಕಾಣಿಸಿಕೊಂಡಿದ್ದರು. ಚಿರುಗೆ ನಾನು ಅಭಿಮಾನಿ ಎಂದು ಪುನೀತ್ ಕೂಡ ಹೇಳಿಕೊಂಡಿದ್ದಾರೆ.

ಸಿಂಗಂ ಸೂರ್ಯ ಮತ್ತು ಪುನೀತ್
ತಮಿಳು ನಟ ಸೂರ್ಯ ಮತ್ತು ಪುನೀತ್ ರಾಜ್ ಕುಮಾರ್ ನಡುವೆ ಕೂಡ ಉತ್ತಮ ಬಾಂಧವ್ಯ ಇದೆ. ಸೂರ್ಯ ಅವರ ಚಿತ್ರದ ಆಡಿಯೋ ಸಮಾರಂಭಕ್ಕಾಗಿ ಪುನೀತ್ ಗೆ ತಮಿಳುನಾಡಿಗೆ ಹೋಗಿದ್ದಾರೆ. ಇನ್ನು ಬೆಂಗಳೂರಿಗೆ ಬಂದಾದ ಸೂರ್ಯ ಕೂಡ ಪುನೀತ್ ಬಗ್ಗೆ ಮೆಚ್ಚುಗೆ ಮಾತಗಳನ್ನಾಡಿದ್ದಾರೆ.
ಅಪ್ಪು ಬರ್ತಡೇಗೆ ಪೋಸ್ಟರ್ ರಿಲೀಸ್ ಮಾಡಿದ ಸಂತೋಷ್ ಆನಂದ್ ರಾಮ್

ಅಕ್ಷಯ್ ಕುಮಾರ್ ಮತ್ತು ಅಪ್ಪು
ಬಾಲಿವುಡ್ ನಟ ಅಕ್ಷಯ್ ಕುಮಾರ್ ಮತ್ತು ಪುನೀತ್ ರಾಜ್ ಕುಮಾರ್ ಅವರು ಒಂದೇ ಸಿನಿಮಾದಲ್ಲಿ ಅಭಿನಯಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿತ್ತು. ಅದಕ್ಕೆ ಸಾಕ್ಷಿ ಎಂಬಂತೆ ಅಕ್ಷಯ್ ಮತ್ತು ಪುನೀತ್ ಭೇಟಿ ಮಾಡಿದ್ದ ಫೋಟೋಗಳು. ಆದ್ರೆ, ಅಕ್ಷಯ್ ಕುಮಾರ್ ಮತ್ತು ಅಪ್ಪು ಇಬ್ಬರು ಸ್ನೇಹಿತರು. ಹೀಗಾಗಿ ಬೆಂಗಳೂರಿಗೆ ಬಂದಾಗ ಅಪ್ಪುವನ್ನ ಅಕ್ಷಯ್ ಭೇಟಿ ಮಾಡಿದ್ದರು.

ರಜನಿಕಾಂತ್ ಮತ್ತು ಅಪ್ಪು
ಸೂಪರ್ ಸ್ಟಾರ್ ರಜನಿಕಾಂತ್ ಅಂದ್ರೆ ಪುನೀತ್ ಗೆ ಅಚ್ಚುಮೆಚ್ಚು. ಪುನೀತ್ ನಾಯಕನಾಗಿ ಅಭಿನಯದ ಚೊಚ್ಚಲ ಚಿತ್ರವನ್ನ ನೋಡಿದ ರಜನಿಕಾಂತ್ ಪವರ್ ಸ್ಟಾರ್ ಬಗ್ಗೆ ಭವಿಷ್ಯ ನುಡಿದಿದ್ದರು. ಇನ್ನು ರಾಜ್ ಕುಟುಂಬದ ಜೊತೆ ಉತ್ತಮ ಬಾಂಧವ್ಯ ಹೊಂದಿರುವ ರಜನಿಗೆ ಪುನೀತ್ ಅಂದ್ರೆ ಇಷ್ಟ.

ತೆಲುಗಿನ ಎ.ಎನ್.ಆರ್ ಜೊತೆ ಪುನೀತ್
ತೆಲುಗು ಸಿನಿ ಲೋಕದ ದಿಗ್ಗಜ ನಟ ಅಕ್ಕಿನೇನಿ ನಾಗೇಶ್ವರ್ ರಾವ್ ಅವರು ಜೊತೆಯಲ್ಲಿ ಪುನೀತ್ ಇರುವ ಫೋಟೋವೊಂದು ಗಮನ ಸೆಳೆಯುತ್ತಿದೆ. ತೆಲುಗು ನಟ ನಾಗಾರ್ಜುನ ಅವರ ತಂದೆ ಎ.ಎನ್.ಆರ್.