ಪುನೀತ್ ರಾಜ್‌ಕುಮಾರ್ ಅಭಿಮಾನಿಗಳಿಗೆ ಸಿಹಿಸುದ್ದಿ; ಸಂಭ್ರಮಾಚರಣೆಗೆ ರೆಡಿನಾ?

ಅಭಿಮಾನಿಗಳಲ್ಲಿ ಅಪ್ಪು ಅಗಲಿಕೆ ನೋವು ಇನ್ನು ಕಮ್ಮಿ ಆಗಿಲ್ಲ. ನೆಚ್ಚಿನ ನಟನನ್ನು ನೆನೆಯದ ದಿನವಿಲ್ಲ, ಕ್ಷಣವಿಲ್ಲ. ಅಭಿಮಾನಿಗಳ ಹೃದಯದಲ್ಲಿ ಪುನೀತ್ ರಾಜ್‌ಕುಮಾರ್ ಶಾಶ್ವತ ಸ್ಥಾನ ಗಳಿಸಿಬಿಟ್ಟಿದ್ದಾರೆ. ಸೋಶಿಯಲ್ ಮೀಡಿಯಾ ಓಪನ್ ಮಾಡಿದರೆ ಅಪ್ಪು ಫೋಟೊ, ವೀಡಿಯೋ ಕಣ್ಣಿಗೆ ರಾಚುತ್ತಲೇ ಇರುತ್ತದೆ.

ಪವರ್ ಸ್ಟಾರ್ ಅಭಿಮಾನಿಗಳ ಸಂಭ್ರಮಾಚರಣೆಗೆ ಮತ್ತೊಂದು ನೆಪ ಸಿಗುತ್ತಿದೆ. ಮಾರ್ಚ್ 17ರಂದು ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬ. ಕಳೆದ 3 ವರ್ಷಗಳಿಂದ ಅಭಿಮಾನಿಗಳು ಕಂಠೀರವ ಸ್ಟುಡಿಯೋದಲ್ಲಿರುವ ಅಪ್ಪು ಸಮಾಧಿಗೆ ನಮನ ಸಲ್ಲಿಸಿ ಸಾಮಾಜಿಕ ಕೆಲಸಗಳ ಮೂಲಕ ಆ ದಿನವನ್ನು ಸಾರ್ಥಕಗೊಳಿಸುತ್ತಿದ್ದಾರೆ. ಈ ವರ್ಷ ಅಪ್ಪು ಹುಟ್ಟುಹಬ್ಬಕ್ಕೆ ದಿನಗಣನೆ ಶುರುವಾಗಿದೆ.

Puneeth Rajkumar s birthday All about Appu re-release in theatres

ಕಳೆದ ವರ್ಷ ಪುನೀತ್ ಹುಟ್ಟುಹಬ್ಬದ ದಿನ 'ಜಾಕಿ' ಸಿನಿಮಾ ರೀ ರಿಲೀಸ್ ಆಗಿ ಸಖತ್ ಸದ್ದು ಮಾಡಿತ್ತು. ಅಭಿಮಾನಿಗಳು ಮತ್ತೊಮ್ಮೆ ಮುಗಿಬಿದ್ದು ನೆಚ್ಚಿನ ನಟನನ್ನು ಕಣ್ತುಂಬಿಕೊಂಡಿದ್ದರು. ಕೆಆರ್‌ಜಿ ಸ್ಟುಡಿಯೋಸ್ ಸಂಸ್ಥೆ ಚಿತ್ರವನ್ನು ಡಿಜಿಟಲ್‌ ರೂಪದಲ್ಲಿ ಪ್ರೇಕ್ಷಕರ ಮುಂದೆ ತಂದಿತ್ತು. ನರ್ತಕಿ ಚಿತ್ರಮಂದಿರದಲ್ಲಿ ಸಂಭ್ರಮಾಚರಣೆ ಜೋರಾಗಿತ್ತು. 'ಜಾಕಿ' ರೀ-ರಿಲೀಸ್‌ಗೆ ಸಿಕ್ಕ ಪ್ರತಿಕ್ರಿಯೆ ನೋಡಿ ಮುಂದಿನ ವರ್ಷ 'ಅಪ್ಪು' ಸಿನಿಮಾ ತೆರೆಗೆ ತರುವುದಾಗಿ ಕಾರ್ತಿಕ್ ಗೌಡ ಹೇಳಿದ್ದರು.

ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬ ಹತ್ತಿರವಾಗುತ್ತಿದ್ದಂತೆ 'ಅಪ್ಪು' ರೀ-ರಿಲೀಸ್ ಕೆಲಸಗಳು ಜೋರಾಗಿದೆ. ದೊಡ್ಡ ಸಿನಿಮಾಗಳು ಬಿಡುಗಡೆ ಆಗದೇ ಚಿತ್ರರಂಗ ಸಂಕಷ್ಟಕ್ಕೆ ಸಿಲುಕಿದೆ. ಇಂತಹ ಸಮಯದಲ್ಲಿ 'ಅಪ್ಪು' ರೀ-ರಿಲೀಸ್ ಚಿತ್ರಮಂದಿರಗಳಲ್ಲಿ ಸಂಭ್ರಮ ಮರಳಿ ತರಲಿದೆ. ಇದು ಪುನೀತ್ ರಾಜ್‌ಕುಮಾರ್ ಹೀರೊ ಆಗಿ ನಟಿಸಿದ ಚೊಚ್ಚಲ ಸಿನಿಮಾ.

Puneeth Rajkumar s birthday All about Appu re-release in theatres

ತೆಲುಗಿನ ಪೂರಿ ಜಗನ್ನಾಥ್ 'ಅಪ್ಪು' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರು. ಬಾಲನಟನಾಗಿ ಚಿತ್ರರಂಗಕ್ಕೆ ಬಂದು ಸ್ಟಾರ್ ಪಟ್ಟಕ್ಕೇರಿದವರು ಪುನೀತ್ ರಾಜ್‌ಕುಮಾರ್. ಆದರೆ 'ಪರುಶುರಾಮ' ಸಿನಿಮಾ ಬಳಿಕ ನಟನೆ ನಿಲ್ಲಿಸಿದ್ದರು. ಹೀರೊ ಆಗಿ ಮತ್ತೆ ಪ್ರೇಕ್ಷಕರ ಮುಂದೆ ಬರಬೇಕು ಅಂದಾಗ ಸಾಕಷ್ಟು ಕಥೆ ಕೇಳಿ ಕೊನೆಗೆ ಈ ಸಿನಿಮಾ ಒಪ್ಪಿಕೊಂಡಿದ್ದರು.

ಕಾಲೇಜ್ ವಿದ್ಯಾರ್ಥಿ ಅಪ್ಪು ಆಗಿ ಪುನೀತ್ ನಟಿಸಿದ್ದರು. ನಾಯಕಿಯಾಗಿ ರಕ್ಷಿತಾ ಸಾಥ್ ಸಿಕ್ಕಿತ್ತು. ಆಕೆಗೂ ಅದು ಚೊಚ್ಚಲ ಸಿನಿಮಾ ಆಗಿತ್ತು. ಕಾನ್ಸ್‌ಸ್ಟೇಬಲ್ ವೆಂಟಕಸ್ವಾಮಿ ಮಗ ಅಪ್ಪು(ಪುನೀತ್ ರಾಜ್‌ಕುಮಾರ್) ಬೆಂಗಳೂರಿ ಸಿಟಿ ಕಮಿಷನರ್ ರಾಜಶೇಖರ್(ಅವಿನಾಶ್) ಮಗಳು ಸುಚಿತ್ರಾ(ರಕ್ಷಿತಾ)ಳನ್ನು ಪ್ರೀತಿಸಿ ಮದುವೆ ಆಗುವ ಕಥೆ ಚಿತ್ರದಲ್ಲಿತ್ತು. ಸಿಂಪಲ್ ಕಥೆಗೆ ಪೂರಿ ಜಗನ್ನಾಥ್ ಟ್ರೀಟ್‌ಮೆಂಟ್ ಸೊಗದಾಗಿತ್ತು. ಪುನೀತ್ ಆಕ್ಟಿಂಗ್, ಡ್ಯಾನ್ಸ್, ಆಕ್ಷನ್ ಚಿತ್ರಕ್ಕೆ ಪ್ಲಸ್ ಆಗಿತ್ತು.

ಗುರುಕಿರಣ್ ಸಂಗೀತದಲ್ಲಿ 'ಅಪ್ಪು' ಆಲ್ಬಮ್ ಹಿಟ್ ಚಿತ್ರಕ್ಕೆ ಮತ್ತಷ್ಟು ಬಲ ತುಂಬಿತ್ತು. ಹೀರೊ ಆಗಿ ಮೊದಲ ಪ್ರಯತ್ನದಲ್ಲೇ ಪುನೀತ್ ಭರ್ಜರಿ ಸಕ್ಸಸ್ ಕಂಡಿದ್ದರು. ಸಿನಿಮಾ ಶತದಿನೋತ್ಸವ ಆಚರಿಸಿಕೊಂಡಿತ್ತು. ಯೂಟ್ಯೂಬ್‌ನಿಂದ ಈಗಾಗಲೇ 'ಅಪ್ಪು' ಚಿತ್ರದ ತೆಗೆದು ಹಾಕಲಾಗಿದೆ. ಚಿತ್ರದ ಪೋಸ್ಟರ್‌ಗೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಸಹಿ ಮಾಡುತ್ತಿರುವ ಫೋಟೊ ವೈರಲ್ ಆಗ್ತಿದೆ. ಇದು ರೀ-ರಿಲೀಸ್ ಬಗ್ಗೆ ಸುಳಿವು ನೀಡುತ್ತಿದೆ.

ಮಾರ್ಚ್ 1ರಂದು 'ಅಪ್ಪು' ರೀ-ರಿಲೀಸ್ ದಿನಾಂಕ ಘೋಷಣೆ ಆಗುವ ಸಾಧ್ಯತೆಯಿದೆ. ಶೀಘ್ರದಲ್ಲೇ ಪ್ರಚಾರ ಕೂಡ ಆರಂಭವಾಗಲಿದೆ. ಬಹಳ ದೊಡ್ಡಮಟ್ಟದಲ್ಲಿ ಸಿನಿಮಾ ತೆರೆಗೆ ತರುವ ಪ್ರಯತ್ನ ನಡೀತಿದೆ. ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ 'ಅಪ್ಪು' ಟ್ರೆಂಡ್ ಶುರುವಾಗಿದೆ. ಅಭಿಮಾನಿಗಳು ದೊಡ್ಡಮಟ್ಟದಲ್ಲಿ ಸಿನಿಮಾ ಸ್ವಾಗತಿಸಿ ನೋಡಿ ಹಿಟ್ ಮಾಡುವ ಲೆಕ್ಕಾಚಾರದಲ್ಲಿದ್ದಾರೆ.

ರಾಜ್ಯಾದ್ಯಂತ ನೂರಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ 'ಅಪ್ಪು' ಸಿನಿಮಾ ಅಪ್ಪಳಿಸಲಿದೆ. ಮಾರ್ಚ್‌ 14 ಅಥವಾ 17ರಂದು ಸಿನಿಮಾ ತೆರೆಗೆ ಬರುವ ಸಾಧ್ಯತೆಯಿದೆ. 'ಜಾಕಿ'ಗೆ ಸಿಕ್ಕ ರೆಸ್ಪಾನ್ಸ್ ನೋಡಿದ ಮೇಲೆ 'ಅಪ್ಪು' ಆರ್ಭಟ ಹೇಗಿರುತ್ತದೆ ಕಾದು ನೋಡಬೇಕಿದೆ.

More from Filmibeat

English summary
Appu To Re-Release On Puneeth Rajkumar's Birthday On march 17;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X