ಈ ಪುಟ್ಟ ಕಂದ ಪುನೀತ್ ರನ್ನ ಗುರುತಿಸಿದ್ದು ನೋಡಿದರೆ ಬೆರಗಾಗುತ್ತೀರಾ
Recommended Video

ಪುನೀತ್ ರಾಜ್ ಕುಮಾರ್ ಮಕ್ಕಳಿಗೆ ತುಂಬ ಇಷ್ಟ ಆಗುವ ನಟ. ಮಾಸ್ ಕ್ಲಾಸ್ ಎರಡು ರೀತಿ ಸಿನಿಮಾಗಳನ್ನು ಮಾಡುವ ಪುನೀತ್ ಅಭಿಮಾನಿ ಬಳಗದಲ್ಲಿ ಮಕ್ಕಳ ಸಂಖ್ಯೆ ದೊಡ್ಡದಿದೆ. ಅದೇ ಕಾರಣಕ್ಕೆ 'ರಾಜಕುಮಾರ' ಸಿನಿಮಾದಲ್ಲಿ 'ಅಪ್ಪು ಡ್ಯಾನ್ಸ್..' ಹಾಡನ್ನು ಮಾಡಲಾಗಿತ್ತು.
ಪುನೀತ್ ಅವರನ್ನು ಸಣ್ಣ ಮಕ್ಕಳು ಎಷ್ಟೊಂದು ಇಷ್ಟ ಪಡುತ್ತಾರೆ ಎನ್ನುವುದಕ್ಕೆ ಒಂದು ತಾಜಾ ಉದಾಹರಣೆ ಇದೀಗ ಸಿಕ್ಕಿದೆ. ನಂದಿನಿ ಹಾಲಿಗೆ ಪುನೀತ್ ರಾಯಬಾರಿ ಆಗಿದ್ದು, ಸಾಮಾನ್ಯವಾಗಿ ಅವರ ಆ ಫೋಟೋಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಹಾಕಲಾಗಿರುತ್ತದೆ. ಅದೇ ರೀತಿ ಪುನೀತ್ ಅವರ ಒಂದು ಫೋಟೋ ಒಂದು ಸಣ್ಣ ಮಗುವಿನ ಆಕರ್ಷಣೆಗೆ ಕಾರಣ ಆಗಿದೆ.

ಇನ್ನು ಏನು ತಿಳಿಯದ ಒಂದು ಮಗು ಪುನೀತ್ ಫೋಟೋವನ್ನು ಮಾತ್ರ ಗುರುತಿಸುತ್ತಿದೆ. ಮಗುವಿನ ಪೋಷಕರು 'ಅಪ್ಪು ಎಲ್ಲಿ?' ಅಂದರೆ 'ಇಲ್ಲಿ ಅಪ್ಪು' ಎಂದು ಆ ಕಂದಮ್ಮ ತನ್ನ ತೊದಲು ಮಾತಿನಲ್ಲಿ ಫೋಟೋವನ್ನು ಗುರುತಿಸಿದೆ.
ಪುನೀತ್ ಅಭಿಮಾನಿಗಳು ಈ ಅಪರೂಪದ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಈಗ ವೈರಲ್ ಆಗುತ್ತಿದೆ. ಪುನೀತ್ ಅಭಿಮಾನಿಗಳಿಗೆ ಈ ವಿಡಿಯೋ ಸಖತ್ ಖುಷಿ ನೀಡಿದ್ದು, ಸ್ವತಃ ಪುನೀತ್ ಈ ವಿಡಿಯೋ ನೋಡಿದರೆ ನಿಜಕ್ಕೂ ಸಿಕ್ಕಾಪಟ್ಟೆ ಸಂತಸ ಪಡುತ್ತಾರೆ.


Click it and Unblock the Notifications











