ಅಮೆರಿಕಾದ ನಂ 1 ಕಾಲೇಜ್‌ನಲ್ಲಿ ಪದವಿ ಪೂರ್ಣಗೊಳಿಸಿದ ಪುನೀತ್ ರಾಜ್ ಕುಮಾರ್ ಹಿರಿಯ ಪುತ್ರಿ, ಧೃತಿ ಓದಿದ್ದೇನು ?
ಪುನೀತ್ ರಾಜ್ ಕುಮಾರ್ ಅವರ ವ್ಯಕ್ತಿತ್ವವನ್ನ ಕೇವಲ ಪದಗಳಲ್ಲಿ ಬಣ್ಣಿಸಲು ಸಾಧ್ಯವಿಲ್ಲ.ಯಾಕಂದರೆ .. ಪುನೀತ್ ಅವ್ರದ್ದು ನಿಲುಕದ ವ್ಯಕ್ತಿತ್ವ. ಇಂತಹ ಪುನೀತ್ ರಾಜ್ ಕುಮಾರ್ ಅವರಿಗೆ ಇಬ್ಬರು ಮಕ್ಕಳು. ಹಿರಿಯ ಮಗಳು ಹೆಸರು ಧೃತಿ ಆದರೆ ಎರಡನೇ ಮಗಳ ಹೆಸರು ವಂದಿತಾ. ಆ ಪೈಕಿ ಧೃತಿ ಬೆಂಗಳೂರಿನ ಪ್ರತಿಷ್ಠಿತ ಸೋಫಿಯಾ ಹೈ ಸ್ಕೂಲ್‌ನಲ್ಲಿ ಶಿಕ್ಷಣ ಪಡೆದಿದ್ದರು.
ಆ ನಂತರ ವಿದ್ಯಾಶಿಲ್ಪ್‌ನಲ್ಲಿ ಕೂಡ ವಿದ್ಯಾಭ್ಯಾಸ ಮಾಡಿದ್ದರು. ಇಲ್ಲಿ ಶಿಕ್ಷಣ ಪಡೆದ ನಂತರ ಹಲವು ವರ್ಷಗಳಿಂದ ವಿದೇಶದಲ್ಲಿ ಉನ್ನತ ಶಿಕ್ಷಣವನ್ನು ಧೃತಿ ಪಡೆಯುತ್ತಿದ್ದರು. 128 ವರ್ಷಗಳ ಇತಿಹಾಸವನ್ನು ಹೊಂದಿರುವ ನ್ಯೂಯಾರ್ಕ್‌ನ ಪಾರ್ಸನ್ಸ್ ಸ್ಕೂಲ್ ಆಫ್ ಡಿಸೈನ್- ದಿ ನ್ಯೂ ಸ್ಕೂಲ್‌ನಲ್ಲಿ Illustrator ಮತ್ತು ಡಿಸೈನರ್ ಕೋರ್ಸ್ ಮಾಡುತ್ತಿದ್ದರು.

ಸದ್ಯ ಈ ವಿಷಯದಲ್ಲಿ ಧೃತಿ ತಮ್ಮ ಪದವಿಯನ್ನು ಪೂರ್ಣಗೊಳಿಸಿದ್ಧಾರೆ. ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಸಂಭ್ರಮಿಸಿದ್ದಾರೆ. ಇನ್ನು ನ್ಯೂಯಾರ್ಕ್‌ನಲ್ಲಿರುವ ಕಲೆ ಮತ್ತು ವಿನ್ಯಾಸದ ಸಂಸ್ಥೆಯಲ್ಲಿ ಒಂದಾದ ಪಾರ್ಸನ್ಸ್ ಸ್ಕೂಲ್ ಆಫ್ ಡಿಸೈನ್ -ದಿ ನ್ಯೂ ಸ್ಕೂಲ್ 2021ರಲ್ಲಿ QS ವರ್ಲ್ಡ್ ರ್ಯಾಂಕಿಂಗ್‌ನಲ್ಲಿ ಮೊದಲ ಸ್ಥಾನ ಪಡೆದಿತ್ತು.
ಇನ್ನು 1896ರಲ್ಲಿ ಸ್ಥಾಪನೆಯಾದ ಈ ಸಂಸ್ಥೆ ಫ್ಯಾಷನ್ ಡಿಸೈನ್, ಇಂಟೀರಿಯರ್ ಡಿಸೈನ್, ಗ್ರಾಫಿಕ್ ಡಿಸೈನ್, ಟ್ರಾನ್ಸ್‌ಡಿಸಿಪ್ಲಿನರಿ ಡಿಸೈನ್, ಬೆಳಕಿನ ವಿನ್ಯಾಸ ಮುಂತಾದ ಕೋರ್ಸ್‌ಗಳನ್ನು ಕಲಿಸಿದ ಮೊದಲ ಶಾಲೆ ಎನ್ನುವ ಹೆಗ್ಗಳಿಕೆಗೆ ಕೂಡ ಪಾತ್ರವಾಗಿದೆ.
ಅಂದ್ಹಾಗೇ 2018-19ರಲ್ಲಿಯೇ ಈ ಶಾಲೆಯ ಫೀಸ್ ಅಂದಾಜು 46,960USD ಇತ್ತು. ಅಂದರೆ ಹೆಚ್ಚು ಕಡಿಮೆ 40 ಲಕ್ಷ ರೂಪಾಯಿ. ಇಂತಹ ದುಬಾರಿ ಮತ್ತು ಪ್ರತಿಷ್ಠಿತ ಸಂಸ್ಥೆಯಲ್ಲಿ ಸದ್ಯ ಧೃತಿ ತಮ್ಮ ಪದವಿಯನ್ನು ಪೂರ್ಣಗೊಳಿಸಿದ್ಧಾರೆ. ಪುನೀತ್ ರಾಜ್ ಕುಮಾರ್ ಇಂದು ನಮ್ಮ ನಡುವೆ ಇದ್ದಿದ್ದರೆ ಮಗಳ ಈ ಸಾಧನೆಯನ್ನು ನೋಡಿ ಖಂಡಿತ ಖುಷಿ ಪಡುತ್ತಿದ್ದರು. ಹೆಮ್ಮೆ ಪಡುತ್ತಿದ್ದರು.


Click it and Unblock the Notifications










