ಪುನೀತ್ 'ಫೇಕ್ ಅಕೌಂಟ್' ಬಗ್ಗೆ ಅಭಿಮಾನಿಗಳಿಂದ ಜಾಗೃತಿ

By Bharath Kumar

Recommended Video

ಪುನೀತ್ ಫ್ಯಾನ್ಸ್ ಹುಷಾರ್ ಆಗಿರಿ...! | Puneeth Rajkumar fans be little carefull | Filmibeat Kananda

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹೆಸರಲ್ಲಿ ಒಂದು ಟ್ವಿಟ್ಟರ್ ಖಾತೆ ಇದೆ. ''ಹಾಯ್ ಇದು ಪುನೀತ್ ರಾಜ್ ಕುಮಾರ್ ಅವರ ಅಧಿಕೃತ ಖಾತೆ, ನಾನು ಮತ್ತು ನನ್ನ ತಂಡ ಇದನ್ನ ನಿಯಂತ್ರಿಸುತ್ತೇವೆ. ಹೆಚ್ಚಿನ ಮಾಹಿತಿಗಾಗಿ ನನ್ನ ಫೇಸ್ ಬುಕ್ ಖಾತೆಯನ್ನ ಫಾಲೋ ಮಾಡಿ'' ಎಂದು ಅಡಿ ಬರಹ ಹೊಂದಿದೆ.

ಪುನೀತ್ ಅವರ ಬಗ್ಗೆ ಈ ಟ್ವಿಟ್ಟರ್ ಖಾತೆಯಲ್ಲಿ ಬಹುತೇಕ ವಿಷ್ಯಗಳು ಪೋಸ್ಟ್ ಆಗಿವೆ, ಆಗುತ್ತಿದೆ. ಈ ಖಾತೆಯನ್ನ ಸುಮಾರು 10 ಸಾವಿರಕ್ಕೂ ಹೆಚ್ಚು ಜನ ಫಾಲೋ ಮಾಡ್ತಿದ್ದಾರೆ. ಆದ್ರೆ, ಇದು ಪುನೀತ್ ಅವರ ಟ್ವಿಟ್ಟರ್ ಖಾತೆಯಲ್ಲ ಎಂದು ಅವರ ಅಭಿಮಾನಿಗಳು ಖಚಿತ ಪಡಿಸಿದ್ದಾರೆ.

Puneeth rajkumars Fake Twitter account

ಕೇವಲ ಅಭಿಮಾನಿಗಳು ಮಾತ್ರವಲ್ಲ, ಪುನೀತ್ ಅವರ ಆಪ್ತರು ಕೂಡ ಇದು ಫೇಕ್ ಅಕೌಂಟ್ ಎಂದು ಬಹಿರಂಗಪಡಿಸಿದ್ದಾರೆ. ದಯವಿಟ್ಟು ಯಾರೂ ಈ ಖಾತೆಯನ್ನ ಫಾಲೋ ಮಾಡಬೇಡಿ. ಇದು ಪುನೀತ್ ಅವರ ಅಧಿಕೃತ ಟ್ವಿಟ್ಟರ್ ಖಾತೆಯಲ್ಲ'' ಎಂದು ಪ್ರಕಟಿಸಿದ್ದಾರೆ.

ಪುನೀತ್ ರಾಜ್ ಕುಮಾರ್ ಜೊತೆ 'ನಟಸಾರ್ವಭೌಮ' ಚಿತ್ರವನ್ನ ನಿರ್ದೇಶನ ಮಾಡುತ್ತಿರುವ ಪವನ್ ಒಡೆಯರ್ ಕೂಡ ಈ ಬಗ್ಗೆ ಟ್ವೀಟ್ ಮಾಡಿದ್ದಾರೆ.

ಅಂದ್ಹಾಗೆ, ಪುನೀತ್ ರಾಜ್ ಕುಮಾರ್ ಅವರ ಹೆಸರಲ್ಲಿ ಇನ್ನೊಂದು ಅಕೌಂಟ್ ಖಾತೆ ಇದೆ. ಈ ಪೇಜ್ ನಲ್ಲಿ ಸುಮಾರು 54 ಸಾವಿರ ಫಾಲೋವರ್ಸ್ ಇದ್ದಾರೆ. ಆದ್ರೆ, ಈ ಖಾತರ ಬಗ್ಗೆಯೂ ಖಚಿತವಾದ ಮಾಹಿತಿ ಇಲ್ಲ. ಆದ್ರೆ, ಫೇಸ್ ಬುಕ್ ನಲ್ಲಿ ಪುನೀತ್ ರಾಜ್ ಕುಮಾರ್ ಅವರ ಅಕೌಂಟ್ ಇದೆ. ಇದನ್ನ ಸ್ವತಃ ಅಪ್ಪು ಅವರೇ ಸ್ಪಷ್ಟಪಡಿಸಿದ್ದರು.

More from Filmibeat

English summary
Fan clubs of Puneeth Rajkumar have called out a fake account in the actor's name. However many fans and fan clubs online have started posting that it is a fake account and fans should not follow it.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X