ಅಮೇರಿಕಾದಲ್ಲಿ ರಿಲೀಸ್ ಆಗ್ತಿದೆ ಅಪ್ಪು ನಿರ್ಮಾಣದ ಚಿತ್ರದ ಟೀಸರ್
ನಟ ಪುನೀತ್ ರಾಜ್ ಕುಮಾರ್ ನಿರ್ಮಾಣದ 'ಕವಲುದಾರಿ' ಸಿನಿಮಾದ ಚಿತ್ರೀಕರಣ ಈಗಾಗಲೇ ನಡೆಯುತ್ತಿದೆ. ಇದೀಗ ಈ ಸಿನಿಮಾದ ಟೀಸರ್ ಬಿಡುಗಡೆ ಮಾಡುವ ಸಮಯ ಬಂದಿದೆ.
ಇತ್ತೀಚಿಗಷ್ಟೆ 'ದಿ ವಿಲನ್' ಸಿನಿಮಾದ ಹಾಡುಗಳು ದುಬೈನಲ್ಲಿ ರಿಲೀಸ್ ಆಗಿತ್ತು. ಅದರ ಬಳಿಕ 'ಕವಲುದಾರಿ' ಸಿನಿಮಾದ ಆಡಿಯೋ ಅಮೇರಿಕಾದಲ್ಲಿ ಬಿಡುಗಡೆಯಾಗಲಿದೆ. ಹೌದು, ಅಮೇರಿಕಾದಲ್ಲಿ ನಡೆಯುವ ಅಕ್ಕ ಸಮ್ಮೇಳನದಲ್ಲಿ ಚಿತ್ರದ ಟೀಸರ್ ಲಾಂಚ್ ಆಗಲಿದೆ.

2018ನೇ ಸಾಲಿನ ಅಕ್ಕ ಸಮ್ಮೇಳನ ಆಗಸ್ಟ್ 31 ರಂದು ಅಮೇರಿಕಾದ ಡ್ಯಾಲಸ್ ನಲ್ಲಿ ನಡೆಯಲಿದೆ. ಈ ಬಾರಿ ಈ ಕಾರ್ಯಕ್ರಮಕ್ಕೆ ಪುನೀತ್ ರಾಜ್ ಕುಮಾರ್ ಮುಖ್ಯ ಅತಿಥಿ ಆಗಿದ್ದಾರೆ. ಇದೇ ಕಾರ್ಯಕ್ರಮದಲ್ಲಿ ಅವರ ನಿರ್ಮಾಣದ ಸಿನಿಮಾದ ಟೀಸರ್ ಕೂಡ ಬಿಡುಗಡೆಯಾಗಲಿದೆ.

ಅಂದಹಾಗೆ, 'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಚಿತ್ರ ಖ್ಯಾತಿಯ ನಿರ್ದೇಶಕ ಹೇಮಂತ್ ಕುಮಾರ್ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ರಿಷಿ ಹಾಗೂ ರೋಷಿನಿ ಪ್ರಕಾಶ್ ಸಿನಿಮಾ ನಾಯಕ, ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಅನಂತ್ ನಾಗ್ ಚಿತ್ರದ ಮುಖ್ಯ ಪಾತ್ರವನ್ನು ನಿರ್ವಹಿಸಿದ್ದಾರೆ.


Click it and Unblock the Notifications











