For Quick Alerts
  ALLOW NOTIFICATIONS  
  For Daily Alerts

  'ನಟ ಸಾರ್ವಭೌಮ' ಚಿತ್ರದ ಇಂಟ್ರೊಡಕ್ಷನ್ ಸೀನ್ ಶೂಟಿಂಗ್

  By Naveen
  |
  'ನಟ ಸಾರ್ವಭೌಮ' ಚಿತ್ರದ ಇಂಟ್ರೊಡಕ್ಷನ್ ಸೀನ್ ಶೂಟಿಂಗ್ | Filmibeat Kannada

  ಪುನೀತ್ ರಾಜ್ ಕುಮಾರ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಭಾಗಿಯಾಗಿದ್ದ 'ನಟ ಸಾರ್ವಭೌಮ' ಚಿತ್ರತಂಡ ಈಗ ಮತ್ತೆ ಸಿನಿಮಾದ ಶೂಟಿಂಗ್ ಶುರು ಮಾಡಿದೆ. ಚಿತ್ರದ ಚಿತ್ರೀಕರಣ ಈಗ ಮೈಸೂರಿನಲ್ಲಿ ನಡೆಯುತ್ತಿದೆ. ನಟ ರವಿಶಂಕರ್ ಅವರ ಭಾಗದ ಚಿತ್ರೀಕರಣ ಸದ್ಯ ಆಗುತ್ತಿದೆ.

  200 ಜೂನಿಯರ್ ಆರ್ಟಿರ್ಸ್ ಗಳ ಜೊತೆಗೆ ಚಿತ್ರದ ಶೂಟಿಂಗ್ ನಡೆಯುತ್ತಿದೆ. ನಟ ರವಿಶಂಕರ್ ಸಿನಿಮಾದ ಮುಖ್ಯ ಪಾತ್ರದಲ್ಲಿ ನಟಿಸಿದ್ದು ಅವರ ಇಂಟ್ರೊಡಕ್ಷನ್ ಸೀನ್ ಇದಾಗಿದೆ. ಶೂಟಿಂಗ್ ಸೆಟ್ ನಲ್ಲಿ ತೆಗೆದ ಕೆಲವು ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಈ ಫೋಟೋ ನೋಡಿದರೆ ಪ್ರತಿಭಟನೆ ನಡೆಸುತ್ತಿರುವ ದೃಶ್ಯ ಇದಾಗಿದೆ ಎನ್ನುಸುತ್ತದೆ. 'ದ್ರೋಹಿ ಮಂತ್ರಿ ಫನ್ ಶಾಮ್ ಯಾದವ್ ಗೆ ದಿಕ್ಕಾರ' ಎಂಬ ಬೋರ್ಡ್ ಹಿಡಿದು ಪ್ರತಿಭಟನೆ ಮಾಡುತ್ತಿದ್ದಾರೆ.

  ರಾಜಕುಮಾರನನ್ನ ನೋಡಲು '400 ಕಿ.ಮೀ'ನಿಂದ ಬಂದ ಅಭಿಮಾನಿ

  ಅಂದಹಾಗೆ, ಪುನೀತ್ ರಾಜ್ ಕುಮಾರ್ ಅವರ ಈ ಸಿನಿಮಾವನ್ನು ನಿರ್ದೇಶಕ ಪವನ್ ಒಡೆಯರ್ ನಿರ್ದೇಶನ ಮಾಡುತ್ತಿದ್ದಾರೆ. ರಾಕ್ ಲೈನ್ ವೆಂಕಟೇಶ್ ನಿರ್ಮಾಣದಲ್ಲಿ ಸಿನಿಮಾ ಮೂಡಿ ಬರುತ್ತದೆ. ಚಕ್ರವ್ಯೂಹ ನಂತರ ಮತ್ತೆ ಪುನೀತ್ ಜೋಡಿಯಾಗಿ ಹೊಸ ಪದ್ಮಾವತಿ ರಚಿತಾ ರಾಮ್ ಕಾಣಿಸಿಕೊಂಡಿದ್ದಾರೆ. ಹಿರಿಯ ನಟಿ ಬಿ ಸರೋಜ ದೇವಿ ಸಿನಿಮಾದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇನ್ನು ಪುನೀತ್ ಹುಟ್ಟುಹಬ್ಬಕ್ಕೆ ಚಿತ್ರದ 'ನಟ ಸಾರ್ವಭೌಮ' ಫಸ್ಟ್ ಲುಕ್ ರಿಲೀಸ್ ಆಗಿದ್ದು ದೊಡ್ಡ ಕ್ರೇಜ್ ಸೃಷ್ಟಿ ಮಾಡಿದೆ.

  'ಅಪ್ಪು' ಚಿತ್ರದಿಂದ ಹೋದವರನ್ನ ಬಿಟ್ಟು, ಬಂದವರಿಗೆ ಟೀಕೆ.! ಇದು ಸರಿನಾ.?

  English summary
  Actor Puneeth Rajkumar's 'Nata Sarvabhouma' kannada movie Ravishankar Introduction scene pic out. The movie directed by pawan wodeyar and produced by rockline venkatesh.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X