ಡಿಸೆಂಬರ್ ನಲ್ಲಿಯೇ ಸೌಂಡು ಮಾಡೋಕೆ ಬರ್ತಿದೆ 'ನಟ ಸಾರ್ವಭೌಮ'
Recommended Video

ಡಿಸೆಂಬರ್ ತಿಂಗಳು ಅಂದ ತಕ್ಷಣ 'ಕೆಜಿಎಫ್' ಸಿನಿಮಾ ನೆನಪಿಗೆ ಬರುತ್ತಿದೆ. ಆದರೆ, ಅದರ ಜೊತೆಗೆ ಈಗ 'ನಟ ಸಾರ್ವಭೌಮ' ಸಿನಿಮಾದ ಹಾಡುಗಳು ಕೂಡ ಅದೇ ತಿಂಗಳು ಸದ್ದು ಮಾಡಲು ಬರುತ್ತಿದೆ.
ಪುನೀತ್ ರಾಜ್ ಕುಮಾರ್ ಅಭಿನಯದ ಈ ಸಿನಿಮಾಗಾಗಿ ಅಭಿಮಾನಿಗಳು ಬಹಳ ತಿಂಗಳಿನಿಂದ ಕಾಯುತ್ತಿದ್ದಾರೆ. ಈ ವರ್ಷದ ಬಹು ನಿರೀಕ್ಷಿತ ಸಿನಿಮಾ ಇದಾಗಿದೆ. ಈ ಚಿತ್ರತಂಡದಿಂದ ಇದೇ ತಿಂಗಳು ಅಪ್ಪು ಅಭಿಮಾನಿಗಳಿಗೆ ಒಂದು ಉಡುಗೊರೆ ಸಿಗಲಿದೆ.
ಸಿನಿಮಾಗಾಗಿ ಕಾಯುತ್ತಿರುವ ಅಭಿಮಾನಿಗಳಿಗೆ ಹಾಡುಗಳನ್ನು ನೀಡುವ ತಯಾರಿಯನ್ನು ಚಿತ್ರತಂಡ ಮಾಡಿಕೊಂಡಿದೆ. ಸಿನಿಮಾದ ಹಾಡುಗಳು ಡಿಸೆಂಬರ್ ನಲ್ಲಿ ರಿಲೀಸ್ ಆಗುತ್ತಿವೆ. ಮುಂದೆ ಓದಿ...

ಡಿಸೆಂಬರ್ 23 ಆಡಿಯೋ
ಪುನೀತ್ ಅವರ 'ನಟ ಸಾರ್ವಭೌಮ' ಸಿನಿಮಾದ ಆಡಿಯೋ ಡಿಸೆಂಬರ್ 23 ರಂದು ಬಿಡುಗಡೆಯಾಗಲಿದೆ. ಪ್ರಾರಂಭದಲ್ಲಿ ಈ ಚಿತ್ರ ಡಿಸೆಂಬರ್ ಬರುತ್ತೆ ಎಂಬ ಮಾತಿತ್ತು. ಆದರೆ, ಈಗ ಹಾಡುಗಳು ಮಾತ್ರ ರಿಲೀಸ್ ಆಗುತ್ತಿವೆ. ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸ ಸದ್ಯಕ್ಕೆ ನಡೆಯುತ್ತಿದೆ.

ಸಿನಿಮಾ ಜನವರಿಗೆ
2019ಕ್ಕೆ 'ನಟ ಸಾರ್ವಭೌಮ' ಪ್ರೇಕ್ಷಕರ ಮುಂದೆ ಬರಲಿದೆ. ಜನವರಿ ತಿಂಗಳ ಕೊನೆ ವಾರ ಸಿನಿಮಾವನ್ನು ತೆರೆಗೆ ತರುವ ಪ್ಲಾನ್ ನಲ್ಲಿದೆ ಚಿತ್ರತಂಡದಾಗಿದೆ. ಜನವರಿಯ ಕೊನೆಯ ಶುಕ್ರವಾರ ಅಂದರೆ, ಈ ವರ್ಷದ ಗಣರಾಜ್ಯೋತ್ಸವದ ವಿಶೇಷವಾಗಿ ಸಿನಿಮಾ ಬರುವ ಸಾಧ್ಯತೆ ಇದೆ.

ನಾಲ್ಕು ಹಾಡುಗಳು
ಸಿನಿಮಾದಲ್ಲಿ ನಾಲ್ಕು ಹಾಡುಗಳು ಇದ್ದು, ಡಿ ಇಮಾನ್ ಸಂಗೀತ ನೀಡಿದ್ದಾರೆ. ನಾಲ್ಕು ಹಾಡುಗಳ ಪೈಕಿ ಒಂದು ಹಾಡನ್ನು (ಟೈಟಲ್ ಸಾಂಗ್) ನಿರ್ದೇಶಕ ಪವನ್ ಒಡೆಯರ್ ಅವರೇ ಬರೆದಿದ್ದಾರೆ. ಉಳಿದಂತೆ, ಜಯಂತ್ ಕಾಯ್ಕಿಣಿ, ಕವಿರಾಜ್ ಹಾಗೂ ಯೋಗರಾಜ್ ಭಟ್ ಸಾಹಿತ್ಯ ಹಾಡುಗಳಲ್ಲಿ ಇದೆ.

ಸಂಚಿತ್ ಹೆಗ್ಡೆ ಮತ್ತು ಅಂಟೋನಿ ದಾಸ್ ಧ್ವನಿ
'ನಟ ಸಾರ್ವಭೌಮ' ಸಿನಿಮಾದ ಇಂಟ್ರೊಡಕ್ಷನ್ ಹಾಡಿಗೆ ಸಂಚಿತ್ ಹೆಗ್ಡೆ ಧ್ವನಿ ನೀಡಿದ್ದಾರೆ. ಜೊತೆಗೆ 'ಟಗರು' ಖ್ಯಾತಿಯ ಅಂಟೋನಿ ದಾಸ್ ಸಹ ಹಾಡನ್ನು ಹಾಡಿದ್ದಾರೆ. ಸಂಚಿತ್ ಹೆಗ್ಡೆ ಹಾಡಿರುವ ರಾಜ್ ಕುಮಾರ್ ಅವರ ಹಾಡಿಗೆ ಈಗಾಗಲೇ ಶಿವರಾಜ್ ಕುಮಾರ್ ಹಾಗೂ ಪುನೀತ್ ರಾಜ್ ಕುಮಾರ್ ಇಬ್ಬರೂ ಫಿದಾ ಆಗಿದ್ದರು.

ಫೋಟೋ ಜರ್ನಲಿಸ್ಟ್ ಪಾತ್ರ
ಪುನೀತ್ ರಾಜ್ ಕುಮಾರ್ ಸಿನಿಮಾದಲ್ಲಿ ಫೋಟೋ ಜರ್ನಲಿಸ್ಟ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮೊದಲ ಬಾರಿಗೆ ಪುನೀತ್ ಈ ಪಾತ್ರವನ್ನು ನಿರ್ವಹಿಸುತ್ತಿದ್ದಾರ. ರಚಿತಾ ರಾಮ್ ಹಾಗೂ ಅನುಪಮ ಪರಮೇಶ್ವರನ್ ಚಿತ್ರದ ನಾಯಕಿಯರಾಗಿದ್ದಾರೆ. ಪವನ್ ಒಡೆಯರ್ ನಿರ್ದೇಶನ, ರಾಕ್ ಲೈನ್ ವೆಂಕಟೇಶ್ ನಿರ್ಮಾಣ ಸಿನಿಮಾಗಿದೆ.


Click it and Unblock the Notifications











