ಟಾಲಿವುಡ್ ಮಾರುಕಟ್ಟೆಯಲ್ಲಿ ಖಾತೆ ತೆರೆದ ಪುನೀತ್ ರಾಜ್ ಕುಮಾರ್
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕನ್ನಡ ಬಿಟ್ಟು ಬೇರೆ ಭಾಷೆಗಳಲ್ಲಿ ಇದುವರೆಗೆ ಸಿನಿಮಾ ಮಾಡಿಲ್ಲ. ಆದರೆ ಈಗ ಟಾಲಿವುಡ್ ಮಾರುಕಟ್ಟೆಯಲ್ಲಿ ಪುನೀತ್ ಖಾತೆ ತೆರೆದಿದ್ದಾರೆ.
ಹೌದು, ಪುನೀತ್ ರಾಜ್ ಕುಮಾರ್ ಈಗ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಹಾಗಂತ ಅವರು ತೆಲುಗಿನಲ್ಲಿ ಯಾವುದೇ ಸಿನಿಮಾ ಮಾಡುತ್ತಿಲ್ಲ. ಬದಲಿಗೆ ಅವರ ಪಿ ಆರ್ ಕೆ ಆಡಿಯೋ ಟಾಲಿವುಡ್ ನಲ್ಲಿ ಬಿಜಿನೆಸ್ ಶುರು ಮಾಡಿದೆ.
ಕನ್ನಡದ 'ಎಂ ಎಂ ಸಿ ಹೆಚ್' ಸಿನಿಮಾ ತೆಲುಗಿನಲ್ಲಿ 'ರಿಯಲ್ ದಂಡುಪಾಳ್ಯ' ಎಂಬ ಹೆಸರಿನಲ್ಲಿ ಡಬ್ ಆಗಿದೆ. ಈ ಚಿತ್ರದ ಹಾಡುಗಳು ಪುನೀತ್ ಒಡೆತನದ ಪಿ ಆರ್ ಕೆ ಆಡಿಯೋ ಮೂಲಕ ಹೊರ ಬಂದಿವೆ. ಸೋ, ಈ ಚಿತ್ರದ ತೆಲುಗು ಡಬ್ ಹಾಡುಗಳು ಹಾಗೂ ಟ್ರೇಲರ್ ಪಿ ಆರ್ ಕೆ ಆಡಿಯೋ ದಲ್ಲಿಯೇ ರಿಲೀಸ್ ಆಗಲಿದೆ.

ಅಂದಹಾಗೆ, 'ಎಂ ಎಂ ಸಿ ಹೆಚ್' ಮುಸ್ಸಂಜೆ ಮಹೇಶ್ ನಿರ್ದೇಶನದ ಚಿತ್ರವಾಗಿದೆ. ಸಿನಿಮಾದಲ್ಲಿ ನಟಿ ರಾಗಿಣಿ ದ್ವಿವೇದಿ, ಮೇಘನಾ ರಾಜ್ ನಕ್ಷತ್ರ, ಸಂಯುಕ್ತ ಬೆಳವಾಡಿ ಮತ್ತು ಪ್ರಾರ್ಥನಾ ಪ್ರಕಾಶ್ ಅಭಿನಯಿಸಿದ್ದಾರೆ.
English summary
Kannada actor Puneeth Rajkumar's PRK audio company enters Tollywood.
puneeth rajkumar sandalwood kannada movies tollywood ಪುನೀತ್ ರಾಜ್ ಕುಮಾರ್ ಕನ್ನಡ ಸಿನಿಮಾ ಸ್ಯಾಂಡಲ್ ವುಡ್ ಟಾಲಿವುಡ್


Click it and Unblock the Notifications