For Quick Alerts
  ALLOW NOTIFICATIONS  
  For Daily Alerts

  ಮತ್ತೊರ್ವ ಪ್ರತಿಭಾನ್ವಿತ ನಿರ್ದೇಶಕನಿಗೆ ಚಾನ್ಸ್ ಕೊಟ್ಟ ಪವರ್ ಸ್ಟಾರ್

  By Pavithra
  |

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿರ್ಮಾಣದ ಸಂಸ್ಥೆ ಅನೇಕ ಪ್ರತಿಭಾನ್ವಿತರಿಗೆ ಅವಕಾಶ ನೀಡುವಲ್ಲಿ ಯಶಸ್ಸು ಕಂಡಿದೆ. ಸದ್ಯ ಪಿ ಆರ್ ಕೆ ಪ್ರೊಡಕ್ಷನ್ಸ್ ಮೂಲಕ 'ಕವಲುದಾರಿ' ಸಿನಿಮಾವನ್ನ ನಿರ್ಮಾಣ ಮಾಡುತ್ತಿರುವ ಅಪ್ಪು ಮತ್ತೊಂದು ಹೊಸ ಸಿನಿಮಾವನ್ನ ಅನೌನ್ಸ್ ಮಾಡಲಿದ್ದಾರೆ.

  ಇದೇ ತಿಂಗಳ (ಜನವರಿ) 24ರಂದು ಪಿ ಆರ್ ಕೆ ಬ್ಯಾನರ್ ನ ಹೊಸ ಚಿತ್ರ ಸೆಟ್ಟೇರಲಿದೆ. ಈಗಾಗಲೇ ನವ ನಿರ್ದೇಶಕ ರಾಧಕೃಷ್ಣ ಅನ್ನುವರಿಗೆ ಅವಕಾಶ ನೀಡುವುದಾಗಿ ಪವರ್ ಸ್ಟಾರ್ ಮಾಧ್ಯಮದವರಿಗೆ ಮಾಹಿತಿ ನೀಡಿದ್ದರು. ಈಗ ಅದೇ ನಿರ್ದೇಶಕ ಅಪ್ಪು ಬ್ಯಾನರ್ ನಲ್ಲಿ ಆಕ್ಷನ್ ಕಟ್ ಹೇಳುತ್ತಿದ್ದಾರೆ.

  'ಹಂಬಲ್ ಪೊಲಿಟಿಷಿಯನ್ ನಾಗರಾಜ್'ನಲ್ಲಿ ಪುನೀತ್ ಪಾತ್ರ ಏನು?'ಹಂಬಲ್ ಪೊಲಿಟಿಷಿಯನ್ ನಾಗರಾಜ್'ನಲ್ಲಿ ಪುನೀತ್ ಪಾತ್ರ ಏನು?

  ಚಿತ್ರದಲ್ಲಿ ವಸಿಷ್ಠ ಸಿಂಹ, ರಾಜ್ ಬಿ ಶೆಟ್ಟಿ ಹಾಗೂ ಅಚ್ಚುತ್ ಕುಮಾರ್ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸುತ್ತಿದ್ದು ಚಿತ್ರತಂಡ ನಾಯಕಿಯ ಹುಡುಕಾಟದಲ್ಲಿ ಬ್ಯುಸಿ ಆಗಿದೆ. ಮಿಧುನ್ ಮುಕುಂದನ್ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡುತ್ತಿದ್ದು ಅಭಿಷೇಕ್ ಕಾಸರಗೋಡು ಕ್ಯಾಮೆರಾ ವರ್ಕ್ ಮಾಡಲಿದ್ದಾರೆ.

  Puneeth Rajkumar's PRK Productions second movie will be launch on January 24th

  ಕಿರುಚಿತ್ರ ನಿರ್ದೇಶನ ಮಾಡಿ ಅನುಭವ ಇರುವ ರಾಧಕೃಷ್ಣ ಪಿ ಆರ್ ಕೆ ಬ್ಯಾನರ್ ಮೂಲಕ ಡೈರೆಕ್ಟರ್ ಆಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಈ ಬಗ್ಗೆ ಫೇಸ್ ಬುಕ್ ನಲ್ಲಿ ಅಧಿಕೃತವಾಗಿ ಅನೌನ್ಸ್ ಮಾಡಿರೋ ಪುನೀತ್ ರಾಜ್ ಕುಮಾರ್ 24 ರಂದೇ ಚಿತ್ರದ ಟೈಟಲ್ ಅನ್ನು ಬಿಡುಗಡೆ ಮಾಡಲಿದ್ದಾರೆ.

  English summary
  Puneeth Rajkumar's PRK Productions second movie will be launch on January 24th. Vasishta, Achuth Kumar and Raj B Shetty are acting in the film. Radha Krishna Reddy will directing the movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X