»   » 'ಯ್ಯೂಟ್ಯೂಬ್'ನಲ್ಲಿ 'ರಾಜಕುಮಾರ' ನಂಬರ್-1

'ಯ್ಯೂಟ್ಯೂಬ್'ನಲ್ಲಿ 'ರಾಜಕುಮಾರ' ನಂಬರ್-1

Posted By:
Subscribe to Filmibeat Kannada

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ, ಬಹುನಿರೀಕ್ಷಿತ 'ರಾಜಕುಮಾರ' ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಯ್ಯೂಟ್ಯೂಬ್ ಟ್ರೆಂಡಿಂಗ್ ನಲ್ಲಿ ನಂಬರ್ 1 ಸ್ಥಾನದಲ್ಲಿದೆ.

ಮಾರ್ಚ್ 6 ರಂದು ಬಿಡುಗಡೆಯಾಗಿದ್ದ 'ರಾಜಕುಮಾರ' ಟ್ರೈಲರ್ ನ್ನ ಮೊದಲ ದಿನ 3 ಲಕ್ಷ ಜನ ವೀಕ್ಷಿಸಿದ್ದರು. ಈಗ ವೀಕ್ಷಕರ ಸಂಖ್ಯೆ ಈಗ 5 ಲಕ್ಷ ದಾಟಿದೆ.[ವಿಡಿಯೋ: 'ರಾಜಕುಮಾರ'ನ ಟ್ರೈಲರ್ ಮತ್ತು ಆಡಿಯೋ ಬಿಡುಗಡೆ]

Puneeth Rajkumars 'Rajakumara' is Trending No 1 on YouTube.

'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಚಿತ್ರದ ಮೂಲಕ ಗಾಂಧಿನಗರದಲ್ಲಿ ಟ್ರೆಂಡ್ ಕ್ರಿಯೆಟ್ ಮಾಡಿದ ನಿರ್ದೇಶಕ ಸಂತೋಷ್ ಆನಂದ್ ರಾಮ್, ಪುನೀತ್ ಅವರ 'ರಾಜಕುಮಾರ' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಇನ್ನೂ ಹರಿಕೃಷ್ಣ ಸಂಗೀತವಿದ್ದು, ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಮಾಡಿದ್ದಾರೆ.[ಎಕ್ಸ್ ಕ್ಲೂಸಿವ್: 'ರಾಜಕುಮಾರ' ಚಿತ್ರದ 'ರಾಜರ ರಾಜ' ಹಾಡು ರಿಲೀಸ್]

ಪುನೀತ್ ರಾಜ್ ಕುಮಾರ್ ಗೆ ಬಹುಭಾಷಾ ನಟಿ ಪ್ರಿಯಾ ಆನಂದ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಸಾಧುಕೋಕಿಲಾ, ಚಿಕ್ಕಣ್ಣ, ರಂಗಾಯಣ ರಘು, ದತ್ತಣ್ಣರ ಹಾಸ್ಯ ಚಟಾಕಿ ಈ ಚಿತ್ರದಲ್ಲಿದೆ.[ಬಿಡುಗಡೆಯಾದ ಮೊದಲ ದಿನವೇ ದಾಖಲೆ ಬರೆದ 'ರಾಜಕುಮಾರ' ಹಾಡು!]

ಸದ್ಯ, ಹಾಡುಗಳು ಮತ್ತು ಟ್ರೈಲರ್ ಮೂಲಕ ಅಬ್ಬರಿಸುತ್ತಿರುವ 'ರಾಜಕುಮಾರ', ಮಾರ್ಚ್ 24 ರಂದು ತೆರೆಗೆ ಬರುವ ಯೋಚನೆಯಲ್ಲಿದೆ. ಎಲ್ಲ ಅಂದುಕೊಂಡಂತೆ ಆದ್ರೆ, ಈ ಬಾರಿಯ ಯುಗಾದಿ ಹಬ್ಬವನ್ನ 'ರಾಜಕುಮಾರ'ನ ಜೊತೆ ಆಚರಣೆ ಮಾಡಬಹುದು.

English summary
Kannada Actor Puneeth Rajkumar starrer Kannada Movie 'Rajakumara' Trailer release. and is trending number 1 on YouTube.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada