'ಯುವರತ್ನ' ಚಿತ್ರೀಕರಣ ಮುಕ್ತಾಯ: ಅಪ್ಪು ಎಂಟ್ರಿಗೆ ಅಭಿಮಾನಿಗಳು ರೆಡಿಯಾಗಿ

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ ಯುವರತ್ನ ಸಿನಿಮಾ ಚಿತ್ರೀಕರಣ ಮುಗಿಸಿದೆ. ಲಾಕ್‌ಡೌನ್‌ನಿಂದ ಕೊನೆಯ ಹಂತದ ಶೂಟಿಂಗ್ ಸ್ಥಗಿತಗೊಳಿಸಿದ್ದ ಚಿತ್ರತಂಡ ಈಗ ಸಂಪೂರ್ಣವಾಗಿ ಮುಗಿಸಿ ಕುಂಬಳಕಾಯಿ ಹೊಡೆದಿದೆ.

ಕೊನೆಯ ದಿನದ ಚಿತ್ರೀಕರಣದಲ್ಲಿ ನಟ ಪುನೀತ್ ರಾಜ್ ಕುಮಾರ್ ಮತ್ತು ನಾಯಕಿ ಸಯೇಶಾ ಸೈಗಲ್ ಭಾಗಿಯಾಗಿದ್ದರು.

ಈ ವೇಳೆ ಚಿತ್ರದ ನಿರ್ಮಾಪಕ ವಿಜಯ್ ಕಿರಗಂದೂರ್, ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್ ಗೌಡ ಸಹ ಪಾಲ್ಗೊಂಡಿದ್ದರು. ಈ ಸಂತಸವನ್ನು ನಿರ್ದೇಶಕ ಸಂತೋಷ್ ಆನಂದ್‌ರಾಮ್ ತಮ್ಮ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ.

Puneeth Rajkumars Yuvarathna Movie Shooting Completed

''ಯುವರತ್ನ ಚಿತ್ರೀಕರಣ ನಿನ್ನೆ ಮುಕ್ತಾಯವಾಯಿತು. ನನ್ನ ಬೆನ್ನು ತಟ್ಟಿ ಸಿನಿಮಾವನ್ನ ಯಶಸ್ವಿ ಆಗಿ ಮುಗಿಸಿಕೊಟ್ಟ ಪುನೀತ್ ಸರ್ ಗೆ, ವಿಜಯ್ ಸರ್ ಗೆ, ವೆಂಕಟ್ ಸರ್ ಗೆ, ಶಿವು ಸರ್ ಗೆ ನನ್ನ ಡೈರೆಕ್ಷನ್ ತಂಡಕ್ಕೆ ಹಾಗು ಹೊಂಬಾಳೆ ಕುಟುಂಬಕ್ಕೆ ನನ್ನ ಹೃದಯ ಪೂರ್ವಕ ಧನ್ಯವಾದಗಳು ನನ್ನ ತಂಡ ನನ್ನ ಶಕ್ತಿ'' ಎಂದು ಟ್ವೀಟ್ ಮಾಡಿದ್ದಾರೆ.

ಟಾಕಿ ಪೋಷನ್, ಬಾಕಿಯಿದ್ದ ಹಾಡುಗಳ ಚಿತ್ರೀಕರಣ ಎಲ್ಲವೂ ಮುಗಿದಿದೆ. ಈಗ ಪೋಸ್ಟ್ ಪ್ರೊಡಕ್ಷನ್ ಕೆಲಸ ಮಾತ್ರ ಬಾಕಿಯಿದ್ದು, ಆದಷ್ಟೂ ಬೇಗ ಮುಗಿಸಿ ತೆರೆಮೇಲೆ ಬರಲು ಸಜ್ಜಾಗಲಿದೆ.

Puneeth Rajkumars Yuvarathna Movie Shooting Completed

ಅಂದ್ಹಾಗೆ, ಅಕ್ಟೋಬರ್ 15 ರಿಂದ ಚಿತ್ರಮಂದಿರಗಳ ತೆರೆಯಲಿದ್ದು, ಸದ್ಯಕ್ಕೆ ಯಾವುದೇ ಹೊಸ ಸಿನಿಮಾಗಳು ರಿಲೀಸ್ ಆಗುವುದಿಲ್ಲ. ಹಳೆಯ ಹಿಟ್ ಚಿತ್ರಗಳು ಮತ್ತೆ ರಿ-ರಿಲೀಸ್ ಆಗುತ್ತಿದೆ.

More from Filmibeat

English summary
Kannada actor Puneeth Rajkumar's Yuvarathna Movie Shooting Completed.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X