»   » ಹೊಸ ವಿವಾದದಲ್ಲಿ ಪುನೀತ್ ತಮಿಳು ಜಾಹೀರಾತು

ಹೊಸ ವಿವಾದದಲ್ಲಿ ಪುನೀತ್ ತಮಿಳು ಜಾಹೀರಾತು

By: ಉದಯರವಿ
Subscribe to Filmibeat Kannada

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಜಾಹೀರಾತು ಒಂದು ಹೊಸ ವಿವಾದಕ್ಕೆ ಕಾರಣವಾಗಿದೆ. ಇತ್ತೀಚೆಗೆ ಕನ್ನಡ ದಿನ ಪತ್ರಿಕೆಯೊಂದರಲ್ಲಿ ಪ್ರಕಟವಾಗಿರುವ ಈ ಜಾಹೀರಾತು ನೋಡಿದ ಅಭಿಮಾನಿಗಳು ಚಕಿತರಾದರು.

ಕನ್ನಡ ದಿನಪತ್ರಿಕೆಯೊಂದರ ಮುಖಪುಟದಲ್ಲೇ ಪ್ರಕಟವಾದ ಈ ಜಾಹೀರಾತು ತಮಿಳು ಭಾಷೆಯಲ್ಲಿದ್ದು ಕನ್ನಡ ಲಿಪಿ ಬಳಸಲಾಗಿದೆ. ಕನ್ನಡ ಚಿತ್ರೋದ್ಯಮದಲ್ಲಿ ಇದು ಹೊಸ ವಿವಾದ ಹಾಗೂ ಚರ್ಚೆಯನ್ನು ಒಟ್ಟಿಗೆ ಹುಟ್ಟುಹಾಕಿದೆ. [ಪುನೀತ್ ದೂಕುಡು ರೀಮೇಕ್ ಗೆ ಹೊಸ ಟೈಟಲ್]

puneeth rajkumar

ಈ ಜಾಹೀರಾತನ್ನು ನೋಡಿದರೆ ಬಹುಶಃ ಇದು ಪುನೀತ್ ಅವರ ಅರಿವಿಗೆ ಬಾರದಂತೆ ನಡೆದಿರುವ ಸಾಧ್ಯತೆಗಳಿರಬಹುದು. ಜಾಹೀರಾತುದಾರರ ಕಣ್ತಪ್ಪಿನಿಂದಲೂ ಆಗಿರಬಹುದು. ಇಲ್ಲಾ ಜಾಹೀರಾತಿನ ಹೊಸ ತಂತ್ರ ಇರಲೂಬಹುದು! ಯಾವೋನಿಗ್ ಗೊತ್ತು?

ಅದು ಏನೇ ಇರಲಿ ಭಾಷೆಯ ವಿಚಾರ ಬಂದಾಗ ಅತ್ತ ಜಾಹೀರಾತುದಾರರು ಇತ್ತ ಪುನೀತ್ ಇಬ್ಬರು ಜಾಗ್ರತೆ ವಹಿಸಬೇಕಾಗಿತ್ತು. ಯಾರ ತಪ್ಪೋ ಏನೋ ಒಟ್ಟಾರೆಯಾಗಿ ಕನ್ನಡ ಪ್ರ್ರೇಮಿಗಳನ್ನು ಕೆಣಕಿದೆ ಈ ಒಳಉಡುಪು ಜಾಹೀರಾತು.

"ಉಳ್ಳೆ ಹೆನಕ್ಕುಳ್ಳೆ" ಎಂಬ ತಮಿಳು ಭಾಷೆಯ ಪದಜಾಲ ಕನ್ನಡ ಲಿಪಿಯಲ್ಲಿರುವುದು "ಅಕ್ಕಿ ಮೇಲೆ ಆಸೆ ನೆಂಟರ ಮೇಲೆ ಪ್ರೀತಿ" ಎಂಬಂತೆ ತಮಿಳು ಮೇಲೆ ಆಸೆ ಕನ್ನಡದ ಮೇಲೆ ಪ್ರೀತಿಯಲ್ಲದೆ ಇನ್ನೇನು? ಪುನೀತ್ ಅವರ ಈ ಜಾಹೀರಾತು ಅಭಿಮಾನಿಗಳ ಬಾಯನ್ನೂ ಕಟ್ಟಿಹಾಕಿದಂತಾಗಿದೆ. ಒಳಉಡುಪು ಜಾಹೀರಾತಿನ ಒಳಮರ್ಮ ಯಾರು ಬಲ್ಲರು.

English summary
Why is Power Star Puneeth Rajkumar saying Tamil slogan "uLLe henakkuLLe" of Dixcy baniyan in Kannada? It's creates new controversy in Sandalwood as well as debatable issue. What would you say about this ad?
Please Wait while comments are loading...