James: ಪುನೀತ್ ರಾಜ್‌ಕುಮಾರ್ ಧ್ವನಿಯಲ್ಲಿ 'ಜೇಮ್ಸ್' ಮರುಬಿಡುಗಡೆ!

'ಜೇಮ್ಸ್' ನಟ ಪುನೀತ್ ರಾಜ್‌ಕುಮಾರ್ ಅಭಿನಯ ಕೊನೆಯ ಸಿನಿಮಾ. ಅಪ್ಪು ನಿಧನಕ್ಕೂ ಮುನ್ನ ಅಭಿನಯಿಸಿದ ಕೊನೆ ಚಿತ್ರ ಇದು. ಹಾಗಾಗಿ ಕನ್ನಡಿಗರಿಗೆ, ಅಪ್ಪು ಅಭಿಮಾನಿಗಳಿಗೆ, ಸಿನಿಮಾ ಪ್ರೇಕ್ಷಕರಿಗೆ ಈ ಚಿತ್ರ ಅತ್ಯಂತ ಆಪ್ತ ಮತ್ತು ಅಚ್ಚು ಮೆಚ್ಚು. ವಿಶ್ವದಾದ್ಯಂತ 'ಜೇಮ್ಸ್' ಚಿತ್ರವನ್ನು ಜನ ನೋಡಿ ಮೆಚ್ಚಿದ್ದಾರೆ.

'ಜೇಮ್ಸ್' ಚಿತ್ರ ಪುನೀತ್ ರಾಜ್‌ಕುಮಾರ್ ಅವರ ಹುಟ್ಟು ಹಬ್ಬದ ಪ್ರಯುಕ್ತ ಮಾರ್ಚ್ 17ರಂದು ರಿಲೀಸ್ ಆಗಿದೆ. ಇನ್ನೂ ಕೆಲವು ಚಿತ್ರಮಂದಿಗಳಲ್ಲಿ 'ಜೇಮ್ಸ್' ಚಿತ್ರ ಪ್ರದರ್ಶನಗೊಳ್ಳುತ್ತಾ ಇದೆ. ಚಿತ್ರ ರಿಲೀಸ್ ಬಳಿಕ ಬಾಕ್ಸಾಫೀಸ್‌ನಲ್ಲಿ ಉತ್ತಮ ಕಲೆಕ್ಷನ್ ಕೂಡ ಮಾಡಿದೆ. ಆದರೆ ಈಗ ಮತ್ತೆ 'ಜೇಮ್ಸ್' ಸುದ್ದಿಯಲ್ಲಿ ಇದೆ.

ನೀವೆಲ್ಲರೂ 'ಜೇಮ್ಸ್' ಚಿತ್ರವನ್ನು ನೋಡಿರುತ್ತೀರಿ. ಅದರಲ್ಲಿ ಎಲ್ಲರೂ ಮಿಸ್ ಮಾಡಿಕೊಂಡ ಅಂಶ ಒಂದಿದೆ. ನಟ ಚಿತ್ರದಲ್ಲಿ ನಟ ಪುನೀತ್ ರಾಜ್‌ಕುಮಾರ್ ಧ್ವನಿ ಇಲ್ಲ. ಅಪ್ಪು ಅಕಾಲಿಕ ನಿಧನದಿಂದ ಈ ಚಿತ್ರಕ್ಕೆ ಅವರು ಡಬ್ ಮಾಡಲು ಸಾಧ್ಯವಾಗಲಿಲ್ಲ. ಈ ಬಗ್ಗೆ ಈಗ ಚಿತ್ರತಂಡ ಸಿಹಿ ಸುದ್ದಿ ಕೊಟ್ಟಿದೆ.

'ಜೇಮ್ಸ್' ಚಿತ್ರದಲ್ಲಿ ಇರಲಿದೆ ಅಪ್ಪು ಧ್ವನಿ!

'ಜೇಮ್ಸ್' ಚಿತ್ರದಲ್ಲಿ ಇರಲಿದೆ ಅಪ್ಪು ಧ್ವನಿ!

'ಜೇಮ್ಸ್' ಚಿತ್ರವನ್ನು ನೋಡಿದ ಪ್ರತಿಯೊಬ್ಬರು ಅಪ್ಪು ಧ್ವನಿಯನ್ನು ಖಂಡಿತವಾಗಿ ಮಿಸ್ ಮಾಡಿಕೊಂಡಿದ್ದಾರೆ. ಪುನೀತ್ ರಾಜ್‌ಕುಮಾರ್ ಪಾತ್ರಕ್ಕೆ ನಟ ಶಿವರಾಜ್‌ಕುಮಾರ್ ಡಬ್ಬಿಂಗ್ ಮಾಡಿದ್ದಾರೆ. ಇದು ಅನಿವಾರ್ಗಿ ಮಾಡಲೇ ಬೇಕಾಗಿತ್ತು. ತೆರೆಯ ಮೇಲೆ ಪುನೀತ್‌ ಪಾತ್ರಕ್ಕೆ ಶಿವಣ್ಣನ ಧ್ವನಿ ಸರಿಯಾಗಿ ಹೊಂದಾಣಿಕೆ ಆಗಿದೆ. ಶಿವಣ್ಣ ಧ್ವನಿಯಲ್ಲಿ ಅಪ್ಪು ಅಭಿನಯ ನೋಡಿದವರು ಮೆಚ್ಚಿಕೊಂಡಿದ್ದಾರೆ. ಆದರೆ ಈಗ ಅಪ್ಪು ಧ್ವನಿ 'ಜೇಮ್ಸ್' ಚಿತ್ರದಲ್ಲಿ ಇರಲಿದೆ.

'ಜೇಮ್ಸ್' ಮುಂದಿನ ವಾರ ರೀ ರಿಲೀಸ್!

'ಜೇಮ್ಸ್' ಮುಂದಿನ ವಾರ ರೀ ರಿಲೀಸ್!

'ಜೇಮ್ಸ್' ಚಿತ್ರ ಕನ್ನಡ ಚಿತ್ರರಂಗದ ಪಾಲಿಗೂ ಕೂಡ ವಿಶೇಷ ಚಿತ್ರ. ಹಾಗಾಗಿ ಈ ಚಿತ್ರವನ್ನು ತೆರೆಗೆ ತರಲು 'ಜೇಮ್ಸ್' ಚಿತ್ರ ತಂಡ ಚಿಕ್ಕಾ ಪಟ್ಟೆ ಕಷ್ಟ ಪಟ್ಟಿದೆ. ಚಿತ್ರ ರಿಲೀಸ್ ಆಗುವ ಬಗ್ಗೆ ನಿರ್ದೇಶಕ ಚೇತನ್ ಕುಮಾರ್ ಫಿಲ್ಮೀ ಬೀಟ್ ಜೊತೆಗೆ ಮಾತನಾಡಿದ್ದಾರೆ. "ಮುಂದಿನ ವಾರ 'ಜೇಮ್ಸ್' ಮರು ಬಿಡುಗಡೆ ಆಗುತ್ತಿದೆ. ಇನ್ನು ಈ ಚಿತ್ರವನ್ನು ಶಿವಣ್ಣ ನೋಡಬೇಕು, ನಾವು ಚಿತ್ರವನ್ನು ನೋಡಿದ್ದೇವೆ. ಈಗ ಇರುವ ಚಿತ್ರಮಂದಿರಗಳಲ್ಲಿ ಅಪ್ಪು ಧ್ವನಿ ಇರುವ ಚಿತ್ರ ಅಪ್ಡೇಟ್ ಆಗುತ್ತದೆ" ಎಂದು ಸ್ಪಷ್ಟ ಪಡಿಸಿದ್ದಾರೆ.

'ಜೇಮ್ಸ್' ತಂಡದ ಪ್ರರಿಶ್ರಮಕ್ಕೆ ಫಲ!

'ಜೇಮ್ಸ್' ತಂಡದ ಪ್ರರಿಶ್ರಮಕ್ಕೆ ಫಲ!

ತಾಂತ್ರಿಕ ವಿಚಾರದ ಬಗ್ಗೆ ಮಾತನಾಡಿದ ಚೇತನ್ ಕುಮಾರ್, "ಜೇಮ್ಸ್ ಚಿತ್ರದಲ್ಲಿ ಅಪ್ಪು ಸರ್ ಧ್ವನಿ ತರಲು ಸಾಕಷ್ಟು ಪ್ರಯತ್ನ ಪಟ್ಟಿದ್ದೇವೆ. ತಾಂತ್ರಿಕ ಸಂಸ್ಥೆ ಒಂದಕ್ಕೆ ಇದರ ಕೆಲಸ ವಹಿಸಿದ್ದೇವು. ಅಪ್ಪು ಅವರ 15 ಗಂಟೆಯ ಧ್ವನಿ ಸಂಗ್ರಣೆಯಿಂದ, ಈ ಸಂಸ್ಥೆ ಜೇಮ್ಸ್ ಚಿತ್ರದಲ್ಲಿ ಅಪ್ಪು ಧ್ವನಿ ಉಳಿಸಿದೆ. ಮೂರು ವರ್ಷಗಳ ಪ್ರಯತ್ನದಲ್ಲಿ ಇದು ಈ ಸಂಸ್ಥೆಗೆ ಸಿಕ್ಕ ಮೊದಲ ಯಶಸ್ಸು" ಎಂದು ಹೇಳಿದ್ದಾರೆ.

Ott ಯಲ್ಲಿ 'ಜೇಮ್ಸ್' ರಿಲೀಸ್!

Ott ಯಲ್ಲಿ 'ಜೇಮ್ಸ್' ರಿಲೀಸ್!

'ಜೇಮ್ಸ್' ಓಟಿಟಿಯಲ್ಲಿ ರಿಲೀಸ್ ಆಗಿದೆ. ಏಪ್ರಿಲ್ 14ಕ್ಕೆ ಜೇಮ್ಸ್ ಸೋನಿ ಲೈವ್‌ನಲ್ಲಿ ತೆರೆಗೆ ಬಂದಿದೆ. ಮಾರ್ಚ್ 17ರಂದು ಪುನೀತ್‌ ರಾಜ್‌ಕುಮರ್ ಹುಟ್ಟು ಹಬ್ಬಕ್ಕೆ ಅದ್ಧೂರಿಯಾಗಿ ರಿಲೀಸ್ ಆಗಿತ್ತು. ಕನ್ನಡ ಪ್ರೇಕ್ಷಕರು ತಮ್ಮ ನೆಚ್ಚಿನ ಸ್ಟಾರ್‌ಗೆ ಗೌರವ ಸಲ್ಲಿಸುವ ಮೂಲಕ ಚಿತ್ರವನ್ನು ಗಲ್ಲಾಪೆಟ್ಟಿಗೆಯಲ್ಲಿ ಗೆಲ್ಲಿಸಿದ್ದಾರೆ. ಚೇತನ್ ಕುಮಾರ್, ನಿರ್ದೇಶನದ ಈ ಚಿತ್ರದಲ್ಲಿ ಪ್ರಿಯಾ ಆನಂದ್, ಪುನೀತ್ ರಾಜ್ ಕುಮಾರ್‌ಗೆ ನಾಯಕಿಯಾಗಿ ನಟಿಸಿದ್ದಾರೆ.

More from Filmibeat

English summary
Puneeth Rajumar Starrer James Movie Will Re release With Puneeth Rajkumar Voice From Next Week, Say's Director Chethan Kumar
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X