ಪುನೀತ್ 'ರಣವಿಕ್ರಮ' ಚಿತ್ರದ ರಿಲೀಸ್ ಡೇಟ್ ನಿಗದಿ
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಭರ್ಜರಿ ಚಿತ್ರ 'ರಣವಿಕ್ರಮ' ಬಿಡುಗಡೆ ಯಾವಾಗ ಎಂದು ಎದುರು ನೋಡುತ್ತಿರುವ ಅಭಿಮಾನಿಗಳ ಕುತೂಹಲಕ್ಕೆ ತೆರೆಬಿದ್ದಿದೆ. ಇಂದು (ಏಪ್ರಿಲ್ 1) ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ ಸದಸ್ಯರು ಚಿತ್ರಕ್ಕೆ ಯು/ಎ ಸರ್ಟಿಫಿಕೇಟ್ ನೀಡಿದ್ದಾರೆ.
ಪವನ್ ಒಡೆಯರ್ ಅವರು ಆಕ್ಷನ್ ಕಟ್ ಹೇಳಿರುವ ಚಿತ್ರ ಇದೇ ಏಪ್ರಿಲ್ 10ರ ಶುಕ್ರವಾರ ತೆರೆಕಾಣುತ್ತಿದೆ. ಈ ಚಿತ್ರದ ಕಾಲಾವಧಿ 2 ಗಂಟೆ 29 ನಿಮಿಷಗಳು. ಜಯಣ್ಣ ಮತ್ತು ಭೋಗೇಂದ್ರ ನಿರ್ಮಾಣದ ಚಿತ್ರ ಇದಾಗಿದ್ದು ಸ್ಯಾಂಡಲ್ ವುಡ್ ನಲ್ಲಿ ಅಪಾರ ನಿರೀಕ್ಷೆ ಮೂಡಿಸಿದೆ. ['ರಣವಿಕ್ರಮ'ನಿಗೆ ಗುರು ರಾಯರ ಕೃಪಾ ಕಟಾಕ್ಷ]

ಪುನೀತ್ ರಾಜ್ ಕುಮಾರ್ ಚಿತ್ರ ಎಂದರೆ ನಿರೀಕ್ಷೆಗಳು ಹೆಚ್ಚಾಗಿಯೇ ಇರುತ್ತವೆ. ಆ ಎಲ್ಲಾ ನಿರೀಕ್ಷೆಗಳನ್ನು ಪವನ್ ಒಡೆಯರ್ ನಿಜ ಮಾಡುತ್ತಾರಾ ಎಂಬುದನ್ನು ಕಾದುನೋಡಬೇಕು. ಪುನೀತ್ ಅಭಿನಯದ 'ಮೈತ್ರಿ' ಚಿತ್ರದ ಬಳಿಕ ಬರುತ್ತಿರುವ ಚಿತ್ರ ಇದಾಗಿದ್ದು, ಅಭಿಮಾನಿಗಳು ಭರ್ಜರಿ ಆಕ್ಷನ್ ನಿರೀಕ್ಷಿಸಿದ್ದಾರೆ.
ಪೊಲೀಸ್ ಪಾತ್ರದ ಜೊತೆಗೆ ಫ್ಯಾಮಿಲಿ ಹೀರೋ ಪುನೀತ್ ಸಿನಿಮಾ ಅಂದಮೇಲೆ ಅಲ್ಲೊಂದು ಪ್ಯೂರ್ ಲವ್, ಒಂಚೂರು ಸೆಂಟಿಮೆಂಟ್ ಇರಲೇಬೇಕು. ಅದೆಲ್ಲವನ್ನೂ ಕೊಂಚ ಕೊಂಚ ಬೆರೆಸಿರೋ ಪವನ್ ಒಡೆಯರ್ ಹದವಾದ ಪಾಕ ತಯಾರಿ ಪ್ರೇಕ್ಷಕರ ಮುಂದಿಡುತ್ತಿದ್ದಾರೆ. [ಫಿಲ್ಮಿಬೀಟ್ ಕನ್ನಡ ಉಚಿತ ಸುದ್ದಿಸಾರಂಗಿ]
ಅಂಜಲಿ ಹಾಗೂ ಆದಾ ಶರ್ಮಾ ಚಿತ್ರದ ನಾಯಕಿಯರಾಗಿದ್ದು ವಿ ಹರಿಕೃಷ್ಣ ಸಂಗೀತ ಚಿತ್ರಕ್ಕಿದೆ. ಸರಿಸುಮಾರು ರು.18 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಚಿತ್ರ ಇದಾಗಿದೆ. ಇದೇ ಮೊದಲ ಬಾರಿಗೆ ಖಾಕಿ ಖದರ್ ತೋರಿಸಲಿದ್ದಾರೆ ಪುನೀತ್ ರಾಜ್ ಕುಮಾರ್. (ಏಜೆನ್ಸಿಸ್)


Click it and Unblock the Notifications