Don't Miss!
- News
ಪಂಜಾಬ್ನಲ್ಲಿ 400 ಮೊಹಲ್ಲಾ ಕ್ಲಿನಿಕ್ಗಳ ಲೋಕಾರ್ಪಣೆ
- Sports
KCC Cup 2023: ಯಾವ ತಂಡಕ್ಕೆ ಯಾರು ನಾಯಕ?; ಸುದೀಪ್ ತಂಡದಲ್ಲಿ ಯೂನಿವರ್ಸಲ್ ಬಾಸ್!
- Finance
LIC plan: ದಿನಕ್ಕೆ 83 ರೂ ಹೂಡಿಕೆ ಮಾಡಿ, ಮೆಚ್ಯೂರಿಟಿ ವೇಳೆ 10 ಲಕ್ಷ ರೂ ಪಡೆಯಿರಿ!
- Technology
ವಾಟ್ಸಾಪ್ನ ಈ ಹೊಸ ಫೀಚರ್ಸ್ನಲ್ಲಿ ಏನೆಲ್ಲಾ ಅನುಕೂಲ ಇದೆ ಗೊತ್ತಾ!?
- Automobiles
ಭಾರತದಲ್ಲಿ ದಾಖಲೆ ಮಟ್ಟದ ಬುಕ್ಕಿಂಗ್ ಪಡೆದುಕೊಳ್ಳುತ್ತಿವೆ ಮಾರುತಿ ಜಿಮ್ನಿ, ಫ್ರಾಂಕ್ಸ್
- Lifestyle
ಸಂಗಾತಿ ಸುಮ್-ಸಮ್ಮನೇ ಸಂಶಯ ಪಡುತ್ತಾರಾ? ಅವರ ಸಂಶಯ ಹೋಗಲಾಡಿಸಲು ಏನು ಮಾಡಬೇಕು?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ವರ್ಷದ ನಂತರ 'ಚಕ್ರವ್ಯೂಹ' ಬೇಧಿಸಲು ಸಜ್ಜಾದ ಪವರ್ ಸ್ಟಾರ್
ಪವರ್ ಸ್ಟಾರ್ ಅಭಿಮಾನಿಗಳಿಗೆ ನಾಳೆ ಹಬ್ಬದ ವಾತಾವರಣ. ಅಂತೂ ಬಹಳ ದಿನಗಳಿಂದ ಕಾಯುತ್ತಿದ್ದ ದಿನ ಹತ್ತಿರ ಬಂದಿದೆ. ಹೌದು ನಾಳೆ (ಏಪ್ರಿಲ್ 29) ಪುನೀತ್ ರಾಜ್ ಕುಮಾರ್ ಹಾಗೂ ಗುಳಿಕೆನ್ನೆ ಬೆಡಗಿ ರಚಿತಾ ರಾಮ್ ಕಾಣಿಸಿಕೊಂಡಿರುವ 'ಚಕ್ರವ್ಯೂಹ' ಸಿನಿಮಾ ಅದ್ದೂರಿಯಾಗಿ ತೆರೆ ಕಾಣುತ್ತಿದೆ.
ಈಗಾಗಲೇ ಚಿತ್ರಕ್ಕೆ ಯಾವುದೇ ಕತ್ತರಿ ಹಾಕದೇ ಸೆನ್ಸಾರ್ ಮಂಡಳಿ ಯು/ಎ ಪ್ರಮಾಣ ಪತ್ರ ನೀಡಿದೆ. ತಮಿಳು ನಿರ್ದೇಶಕ ಎಮ್ ಸರವಣನ್ ಆಕ್ಷನ್-ಕಟ್ ಹೇಳುತ್ತಿರುವ 'ಚಕ್ರವ್ಯೂಹ' ಸಿನಿಮಾ ಕರ್ನಾಟಕದಲ್ಲಿ ಸುಮಾರು 300 ಚಿತ್ರಮಂದಿರಗಳಲ್ಲಿ ಗ್ರ್ಯಾಂಡ್ ಆಗಿ ತೆರೆ ಕಾಣುತ್ತಿದೆ.
ಇನ್ನು ಇಡೀ ವಿಶ್ವದಾದ್ಯಂತ ಏಕಕಾಲಕ್ಕೆ 'ಚಕ್ರವ್ಯೂಹ' ಸಿನಿಮಾ ತೆರೆ ಕಾಣಲಿದ್ದು, ವಿದೇಶಗಳಲ್ಲಿ ಎಲ್ಲಾ ಚಿತ್ರಮಂದಿರಗಳಲ್ಲಿ ಈಗಾಗಲೇ ಟಿಕೆಟ್ ಗಳು ಸೋಲ್ಡ್ ಔಟ್ ಆಗಿವೆ. ಮಾತ್ರವಲ್ಲದೇ ರಾಜ್ಯದಲ್ಲಿ ಕೂಡ ಮಂಗಳವಾರದಿಂದಲೇ ಬುಕ್ಕಿಂಗ್ ಸೆಂಟರ್ ತರೆದಿದ್ದು, ಬಹುತೇಕ ಎಲ್ಲಾ ಕಡೆ ಟಿಕೆಟ್ ಗಳು ಸೋಲ್ಡ್ ಔಟ್ ಆಗಿವೆ.[ಪುನೀತ್ ಅವರು ಸಖತ್ ಡ್ಯಾನ್ಸರ್ ಅಂತ ಮತ್ತೆ ಪ್ರೂವ್ ಆಯ್ತು]
ಬೆಂಗಳೂರಿನ ತಾವರೆಕೆರೆಯ ಬಾಲಾಜಿ ಚಿತ್ರಮಂದಿರಗಳಲ್ಲಿ ಬೆಳ್ಳಂಬೆಳಗ್ಗೆ ಶೋ ಆರಂಭವಾಗಲಿದ್ದು, ಬಹುತೇಕ ಟಿಕೆಟ್ ಸೋಲ್ಡ್ ಔಟ್ ಆಗಿವೆ. ಬೆಂಗಳೂರಿನ ನರ್ತಕಿ ಚಿತ್ರಮಂದಿರ 'ಚಕ್ರವ್ಯೂಹ' ಬಿಡುಗಡೆಗೆ ಮುಖ್ಯ ಚಿತ್ರಮಂದಿರವಾಗಿದ್ದು, ಅಭಿಮಾನಿಗಳು ಈಗಾಗಲೇ ಚಿತ್ರಮಂದಿರವನ್ನು ಸಿಂಗರಿಸಿ ಪುನೀತ್ ಅವರ ಬೃಹತ್ ಕಟೌಟ್ ಹಾಕುವ ಮೂಲಕ ಅಲಂಕಾರ ಶುರು ಹಚ್ಚಿಕೊಂಡಿದ್ದಾರೆ.
ಅಂದಹಾಗೆ ಇಂದು (ಏಪ್ರಿಲ್ 28) ವಿದೇಶಗಳಲ್ಲಿ 'ಚಕ್ರವ್ಯೂಹ' ಚಿತ್ರದ ಪ್ರೀಮಿಯರ್ ಶೋ ನಡೆಯಲಿದ್ದು, ಕಾರ್ಯಕ್ರಮದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಭಾಗವಹಿಸುತ್ತಿದ್ದಾರೆ. ಚಿತ್ರದ ಪ್ರೀಮಿಯರ್ ಶೋನ ಟಿಕೆಟ್ ಗಳು ಈಗಾಗಲೇ ಸೋಲ್ಡ್ ಔಟ್ ಆಗಿವೆ.[ಅಪ್ಪು ಅವರ 'ಚಕ್ರವ್ಯೂಹ' ಬಿಡುಗಡೆ ಮುಂದಕ್ಕೆ ಹೋಗಿದ್ದೇಕೆ?]
ಈಗಾಗಲೇ 'ರಾಜಕುಮಾರ' ಚಿತ್ರದ ಶೂಟಿಂಗ್ ಗಾಗಿ ಆಸ್ಟ್ರೇಲಿಯಾದಲ್ಲಿ ಬೀಡು ಬಿಟ್ಟಿರುವ ಪುನೀತ್ ರಾಜ್ ಕುಮಾರ್ ಅವರು ಪ್ರೀಮಿಯರ್ ಶೋನಲ್ಲಿ ಭಾಗವಹಿಸಿ ಅಭಿಮಾನಿಗಳ ಜೊತೆ ಸಿನಿಮಾ ನೋಡಲಿದ್ದಾರೆ.
ಇದೇ ಮೊದಲ ಬಾರಿಗೆ ತಮಿಳು ನಿರ್ದೇಶಕ ಎಮ್ ಸರವಣನ್ ಆಕ್ಷನ್-ಕಟ್ ಹೇಳಿರುವ, ತೆಲುಗು ನಿರ್ಮಾಪಕ ಎನ್.ಕೆ ಲೋಹಿತ್ ಬಂಡವಾಳ ಹೂಡಿರುವ, ತಮಿಳು ನಟ ಅರುಣ್ ವಿಜಯ್ ವಿಲನ್ ರೋಲ್ ನಲ್ಲಿ ಮಿಂಚಿರುವ, ತೆಲುಗು ನಟ ಎನ್.ಟಿ.ಆರ್ ಮತ್ತು ನಟಿ ಕಾಜಲ್ ಅಗರ್ ವಾಲ್ ಹಾಡಿರುವ 'ಚಕ್ರವ್ಯೂಹ' ಚಿತ್ರದ ಬಗ್ಗೆ ಅಭಿಮಾನಿಗಳು ಮಾತ್ರವಲ್ಲದೇ, ಕನ್ನಡ ಸಿನಿ ರಸಿಕರು ಕೂಡ ಭಾರಿ ಕುತೂಹಲ ಇಟ್ಟುಕೊಂಡಿದ್ದಾರೆ.[ಪುನೀತ್ ಅಭಿಮಾನಿಗಳ, ಅಭಿಮಾನಕ್ಕೆ ಕಿಚ್ಚು ಹಚ್ಚೋ ಸುದ್ದಿ]
ಚಿತ್ರದ ಸಂಪೂರ್ಣ ಥಿಯೇಟರ್ ಲಿಸ್ಟ್ ಮತ್ತು ವಿದೇಶದಲ್ಲಿ ಸಿನಿಮಾ ಪ್ರದರ್ಶನಗೊಳ್ಳುವ ಸಮಯದ ಸಂಪೂರ್ಣ ಮಾಹಿತಿ ಕೆಳಗಿನ ಸ್ಲೈಡುಗಳಲ್ಲಿ...(ಚಿತ್ರ ಕೃಪೆ: ಫೇಸ್ ಬುಕ್)