»   » ಬರಪೀಡಿತ ಜನರ ದಾಹ ತೀರಿಸಲು ಮುಂದಾದ 'ಚಕ್ರವ್ಯೂಹ' ಚಿತ್ರತಂಡ

ಬರಪೀಡಿತ ಜನರ ದಾಹ ತೀರಿಸಲು ಮುಂದಾದ 'ಚಕ್ರವ್ಯೂಹ' ಚಿತ್ರತಂಡ

Posted By:
Subscribe to Filmibeat Kannada

ಮೊನ್ನೆ ಮೊನ್ನೆ ರಾಕಿಂಗ್ ಸ್ಟಾರ್ ಯಶ್ ಅವರು ಉತ್ತರ ಕರ್ನಾಟಕದ 25 ಬರಪೀಡಿತ ಪ್ರದೇಶಗಳ ಹಳ್ಳಿಗಳಿಗೆ ಯಶೋಮಾರ್ಗ ಫೌಂಡೇಶನ್ ನಿಂದ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಿ ಎಲ್ಲರಿಗೂ ಮಾದರಿಯಾದ ಬೆನ್ನಲ್ಲೇ ಇದೀಗ 'ಚಕ್ರವ್ಯೂಹ' [ವಿಮರ್ಶೆ; 'ಚಕ್ರವ್ಯೂಹ'ದೊಳ್ ಜನನಾಯಕ ಪುನೀತ್ ಗೆ ಜೈ.!] ಚಿತ್ರತಂಡ ಬರಪೀಡಿತ ಜನರ ಸಹಾಯಕ್ಕೆ ಮುಂದಾಗಿದೆ.

ಹೌದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮತ್ತು ರಚಿತಾ ರಾಮ್ ಮುಖ್ಯ ಭೂಮಿಕೆಯಲ್ಲಿ ಮಿಂಚಿರುವ 'ಚಕ್ರವ್ಯೂಹ' ಚಿತ್ರತಂಡ ಉತ್ತರ ಕರ್ನಾಟಕದ ಬರಪೀಡಿತ ಹಳ್ಳಿಗಳಿಗೆ ಸಹಾಯ ಮಾಡುವ ಉದ್ದೇಶದಿಂದ ಭಾನುವಾರದ ಎಲ್ಲಾ ಪ್ರದರ್ಶನಗಳ ಟಿಕೆಟ್ ಬೆಲೆಯಲ್ಲಿ 10 ರೂಪಾಯಿ ಹೆಚ್ಚಳ ಮಾಡಿ ಕಲೆಕ್ಷನ್ ಆದ ಹಣವನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡಲು ನಿರ್ಧಾರ ಮಾಡಿದ್ದಾರೆ.[ದಾಹ ತೀರಿಸಿ ಉತ್ತರ ಕರ್ನಾಟಕ ಜನತೆಯ ಹೃದಯ ಗೆದ್ದ ಯಶ್]


Puneeth's 'Chakravyuha' movie team helps to drought hit area people

ಈ ಮೂಲಕ ಸುಮಾರು 50 ಲಕ್ಷ ಹಣ ಹೂಡಿಕೆಯಾಗಬಹುದು ಎಂದು ಚಿತ್ರತಂಡದವರು ಅಂದಾಜಿಸಿದ್ದು, ಆ ಪೂರ್ತಿ ಹಣವನ್ನು ಪರಿಹಾರ ನಿಧಿಗೆ ನೀಡಲಿದ್ದಾರೆ. ಮಾತ್ರವಲ್ಲದೇ 'ಚಕ್ರವ್ಯೂಹ' ಚಿತ್ರದ ನಿರ್ಮಾಪಕರಾದ ಎನ್.ಕೆ ಲೋಹಿತ್ ಅವರು ಪ್ರತ್ಯೇಕವಾಗಿ ಸುಮಾರು 3 ಲಕ್ಷ ರೂಪಾಯಿಯನ್ನು ಬರಪೀಡಿತ ಹಳ್ಳಿಗಳಿಗೆ ದೇಣಿಗೆಯಾಗಿ ನೀಡಿದ್ದಾರೆ.[ಅಬ್ಬಬ್ಬಾ.! 'ಚಕ್ರವ್ಯೂಹ' ಮೊದಲ ದಿನದ ಕಲೆಕ್ಷನ್ ಇಷ್ಟಾ.?]


Puneeth's 'Chakravyuha' movie team helps to drought hit area people

ತಮಿಳು ನಿರ್ದೇಶಕ ಎಮ್.ಸರವಣನ್ ಆಕ್ಷನ್-ಕಟ್ ಹೇಳಿರುವ 'ಚಕ್ರವ್ಯೂಹ' ಚಿತ್ರ ಎಲ್ಲಾ ಕಡೆ ಅದ್ಭುತ ಓಪನಿಂಗ್ ಪಡೆದುಕೊಂಡು ಕೇವಲ ಒಂದು ದಿನದಲ್ಲಿ ಸುಮಾರು 11 ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ಬಾಕ್ಸಾಫೀಸ್ ನಲ್ಲಿ ಧೂಳೆಬ್ಬಿಸಿತ್ತು.

English summary
Kannada Actor Puneeth Rajkumar and Actress Rachita Ram starrer Kannada Movie 'Chakravyuha' team has helps to north karnataka drought hit areas people.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada