ಪುನೀತ್ ಚಿತ್ರದ ಟೈಟಲ್ ಬಗ್ಗೆ ಸಂತೋಷ್ ಆನಂದ್ ರಾಮ್ ಮಾತು
Recommended Video

ಪುನೀತ್ ಮುಂದಿನ ಸಿನಿಮಾದ ಟೈಟಲ್ ಏನಿರಬಹುದು..!? | Filmibeat Kannada
ನಟ ಪುನೀತ್ ರಾಜ್ ಕುಮಾರ್ ಹಾಗೂ ನಿರ್ದೇಶಕ ಸಂತೋಷ್ ಆನಂದ್ ರಾಮ್ ಜೋಡಿ ಮತ್ತೆ ಒಂದಾಗುತ್ತಿರುವ ವಿಷಯ ಎಲ್ಲರಿಗೂ ತಿಳಿದಿದೆ. 'ರಾಜಕುಮಾರ' ಚಿತ್ರದ ನಂತರ ಮತ್ತೆ ಪುನೀತ್ ಗಾಗಿ ಸಂತೋಷ್ ಹೊಸ ಚಿತ್ರ ಮಾಡುತ್ತಿದ್ದಾರೆ.

ಈ ಸಿನಿಮಾದ ಟೈಟಲ್ ಏನು? ಎಂಬುದು ಅನೇಕ ದಿನಗಳಿಂದ ಎಲ್ಲರ ಕುತೂಹಲವಾಗಿತ್ತು. 'ದೇವತಾ ಮನುಷ್ಯ' ಹಾಗೂ 'ಪರಶುರಾಮ' ಎಂಬ ಹೆಸರುಗಳು ಕೇಳಿ ಬಂದಿದ್ದವು. ಆದರೆ ಈ ರೀತಿಯ ಸಿನಿಮಾದ ಎಲ್ಲ ಪ್ರಶ್ನೆಗಳಿಗೆ ಸದ್ಯದಲ್ಲಿಯೇ ಉತ್ತರ ಸಿಗಲಿದೆ.
ಈ ಚಿತ್ರದ ಟೈಟಲ್ ರಿಲೀಸ್ ಡೇಟ್ ಅನ್ನು ಅಕ್ಟೋಬರ್ 10 ರಂದು ಸಂತೋಷ್ ಆನಂದ್ ರಾಮ್ ಅನೌನ್ಸ್ ಮಾಡಲಿದ್ದಾರಂತೆ. ಜೊತೆಗೆ ಇನ್ನು ಮುಂದೆ ಚಿತ್ರದ ವಿಷಯಗಳನ್ನು ಹಂಚಿಕೊಳ್ಳುತ್ತಾರಂತೆ.

ಅಂದಹಾಗೆ, ಇದು ಹೊಂಬಾಳೆ ಪ್ರೊಡಕ್ಷನ್ಸ್ ನ 6ನೇ, ಸಂತೋಷ್ ಆನಂದ್ ರಾಮ್ ಅವರ 3ನೇ ಹಾಗೂ ಪುನೀತ್ ರಾಜ್ ಕುಮಾರ್ ಅವರ 29ನೇ ಚಿತ್ರವಾಗಿದೆ.
More from Filmibeat
English summary
Kannada actor Puneeth Rajkumar and Santhosh Ananddram's new movie title launch date will be announcing on october 10th. The movie will producing by Hombale Films.


Click it and Unblock the Notifications











