For Quick Alerts
  ALLOW NOTIFICATIONS  
  For Daily Alerts

  ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಸಲಹಾ ಸಮಿತಿಗೆ ಅಶ್ವಿನಿ ಪುನೀತ್

  |

  ನಟ ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಅವರ ಅಗಲಿಕೆಯಿಂದ ಕರುನಾಡು ಬಡವಾಗಿದೆ ಎಂದೇ ಹೇಳಬಹುದು. ಅಪ್ಪು ಇಲ್ಲ ಎನ್ನುವ ಕೊರಗೂ ಕೊನೆ ತನಕವೂ ಉಳಿಯಲಿದೆ. ಆದರೆ ಅಪ್ಪು ನೆನಪುಗಳು ಎಂದಿಗೂ ಅಮರ. ಪುನೀತ್ ರಾಜ್‌ಕುಮಾರ್‌ ಅವರ ಸ್ಥಾನದಲ್ಲಿ ನಿಂತು ಕೆಲವೊಂದು ಕಾರ್ಯಗಳನ್ನು ಮಾಡುತ್ತಿದೆ ರಾಜ್ ಕುಟುಂಬ.

  ಅದರಲ್ಲೂ ಪುನೀತ್ ರಾಜ್‌ಕುಮಾರ್‌ ಅವರ ಧರ್ಮ ಪತ್ನಿ ಅಶ್ವಿನಿ ಅವರು ಕೂಡ ನಿಧಾನವಾಗಿ ಸಿನಿಮಾಗೆ ಸಂಬಂಧ ಪಟ್ಟ ಕೆಲಸಗಳನ್ನು ಮಾಡಲು ಆರಂಭಿಸಿದ್ದಾರೆ. ಅಪ್ಪು ನಿಧನದ ಬಳಿಕ ಅವರು ಸಾಮಾಜಿಕ ಜಾಲತಾಣಕ್ಕೆ ಎಂಟ್ರಿ ಕೊಟ್ಟು ಜನರೊಂದಿಗೆ ಕನೆಕ್ಟ್ ಆಗಿದ್ದಾರೆ.

  ಪಿ.ಆರ್‌.ಕೆ ಜವಾಬ್ದಾರಿ ಜೊತೆಗೆ ಅಪ್ಪು ಕನಸುಗಳನ್ನು ಸಾಕಾರಗೊಳಿಸಲು ಅಶ್ವಿನಿ ಅವರು ಮುಂದಾಗಿದ್ದಾರೆ. ಈಗ ಮತ್ತೊಂದು ಹೊಸ ಸಿನಿಮಾ ಜವಾಬ್ದಾರಿಯನ್ನು ತೆಗೆದುಕೊಂಡಿದ್ದಾರೆ. ಅವರು ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದ ಸಲಹಾ ಸಮಿತಿ ಸದಸ್ಯೆ ಆಗಿದ್ದಾರೆ. ಈ ಮೂಲಕ ಅವರು ಹೊಸದೊಂದು ಜವಾಬ್ದಾರಿಯನ್ನು ನಿಭಾಯಿಸಲು ಮುಂದಾಗಿದ್ದಾರೆ.

  ಕೊರೊನಾದಿಂದ ಎಲ್ಲಾ ಕ್ಷೇತ್ರಗಳಿಗೂ ತೊಂದರೆ ಆಗುತ್ತಿದೆ. ಆದರೆ ಸಿನಿಮಾ ಮಂದಿಗೆ ಇದು ಒಂದು ಶಾಪವೇ ಆಗಿ ಬಿಟ್ಟಿದೆ. ಹಾಗಾಗಿ ಸಿನಿಮಾ ರಿಲೀಸ್ ಮಾಡಲಾಗದೆ, ಸರಿಯಾ ಚಿತ್ರೀಕರಣ ಮಾಡಲಾಗದೇ, ಕಾರ್ಯಕ್ರಮಗಳನ್ನು ಮಾಡಲಾಗದೇ ಸಿನಿಮಾ ಮಂದಿ ಒದ್ದಾಡುವಂತಾಗಿದೆ. ಇದರ ಜೊತೆಗೆ ಫಿಲ್ಮ್ ಫೆಸ್ಟಿವಲ್ ಬಗ್ಗೆ ಕೂಡ ಸಾಕಷ್ಟು ಅನುಮಾನಗಳಿದ್ದವು.

  ಬೆಂಗಳೂರು ಅಂರತಾಷ್ಟ್ರೀಯ ಚಲನಚಿತ್ರೋತ್ಸವ ನಡೆಯುತ್ತದೆಯಾ? ಇಲ್ಲವೂ ಎಂಬ ಅನುಮಾನ ಮೂಡಿತ್ತು. ಕೊರೊನಾ ಕಾರಣಕ್ಕೆ ಈ ಬಾರಿ ಫಿಲ್ಮ್ ಫೆಸ್ಟಿವಲ್ ನಡೆಯುವ ಬ್ಗಗೆ ಅನುಮಾನ ಇತ್ತು.ಆದರೆ ಫಿಲ್ಮ್ ಫೆಸ್ಟಿವಲ್ ನಡೆಯುತ್ತದೆ ಇನ್ನುವ ಬಗ್ಗೆ, ಚಲನ ಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ್ ಸ್ಪಷ್ಟ ಪಡಿಸಿದ್ದಾರೆ. ಫೆಬ್ರವರಿ ಮೂರನೇ ವಾರ ಅಥವಾ ಮಾರ್ಚ್ ಮೊದಲ ವಾರದಲ್ಲಿ ಫಿಲ್ಮ್​ ಫೆಸ್ಟ್​ ಆಯೋಜನೆ ಮಾಡುವ ಯೋಜನೆಯಲ್ಲಿದೆ ಚಲನಚಿತ್ರ ಅಕಾಡೆಮಿ.

  ಇದರೊಂದಿಗೆ ಬೆಂಗಳೂರು ಅಂತರರಾಷ್ಟ್ರೀಯ ಚಲನ ಚಿತ್ರೋತ್ಸವದ ಸಲಹಾ ಸಮಿತಿಯಲ್ಲಿ ಪುನೀತ್ ರಾಜ್​ಕುಮಾರ್​ ಪತ್ನಿ ಅಶ್ವಿನಿ ಇದ್ದಾರೆ ಎನ್ನುವುದನ್ನು ಕೂಡ ಸ್ಪಷ್ಟ ಪಡಿಸಿದ್ದಾರೆ.

  English summary
  Puneeth Wife Ashwini Got Membership In Bengaluru International Film Festival Advisory Committee, Know More,
  Thursday, January 20, 2022, 9:44
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X