ಹೇಗಿದೆ 'ಯುವರತ್ನ' ಚಿತ್ರದ ಟೈಟಲ್ ಡಿಸೈನ್ ?
'ರಾಜರತ್ನ' ಈಗ 'ಯುವರತ್ನ'ನಾಗಿದ್ದಾರೆ. 'ಯುವರತ್ನ' ನಟ ಪುನೀತ್ ರಾಜ್ ಕುಮಾರ್ ಅವರ ಬಹು ನಿರೀಕ್ಷಿತ ಸಿನಿಮಾವಾಗಿದೆ. ಈ ಚಿತ್ರದ ಟೈಟಲ್ ಡಿಸೈನ್ ಈಗ ಹೊರಬಂದಿದೆ.
ಸಿನಿಮಾದ ಟೈಟಲ್ ಡಿಸೈನ್ ಸಿದ್ಧವಾಗಿದ್ದು, ಚಿತ್ರದ ನಿರ್ದೇಶಕ ಸಂತೋಷ್ ಆನಂದ್ ರಾಮ್ ಅದನ್ನು ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ಹಂಚಿಕೊಂಡಿದ್ದಾರೆ. 'ಯುವರತ್ನ The Power Of Youth' ಎಂಬ ಟೈಟಲ್ ಗಮನ ಸೆಳೆಯುತ್ತಿದೆ.

ಅಭಿಮಾನಿಗಳಿಗೆ ಈ ಟೈಟಲ್ ಡಿಸೈನ್ ಮೆಚ್ಚುಗೆಯಾಗಿದೆ. ಈಗಾಗಲೇ ಸಾಕಷ್ಟು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಅದರ ಬಗ್ಗೆ ಬರೆದುಕೊಳ್ಳುತ್ತಿದ್ದಾರೆ. ಒಂದೇ ಮಾತಿನಲ್ಲಿ ಹೇಳುವುದಾದರೆ ಟೈಟಲ್ ಡಿಸೈನ್ ಸರಳ ಮತ್ತು ಸುಂದರವಾಗಿದೆ.

ಅಂದಹಾಗೆ, ಹೊಂಬಾಳೆ ಪ್ರೊಡಕ್ಷನ್ಸ್ ನಲ್ಲಿ ಈ ಚಿತ್ರ ನಿರ್ಮಾಣ ಆಗುತ್ತಿದೆ. ಇದು ಸಂತೋಷ್ ಹಾಗೂ ಅಪ್ಪು ಕಾಂಬಿನೇಶನ್ ನ ಎರಡನೇ ಸಿನಿಮಾವಾಗಿದೆ. ತಮನ್ನಾ ಭಾಟಿಯಾ ಸಿನಿಮಾದ ನಾಯಕಿ ಆಗುವ ಸಾಧ್ಯತೆ ಹೆಚ್ಚಿದೆ.
More from Filmibeat
English summary
Kannada actor Puneeth Rajkumar's 'Yuvaratna' movie title design out. The movie is directing by Santhosh Ananddram and producing by Hombale Films.
yuvaratna puneeth rajkumar santhosh ananddram sandalwood ಯುವರತ್ನ ಪುನೀತ್ ರಾಜ್ ಕುಮಾರ್ ಸಂತೋಷ್ ಆನಂದ್ ರಾಮ್ ಸ್ಯಾಂಡಲ್ ವುಡ್


Click it and Unblock the Notifications











