ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಪುನೀತ್ 'ರಾಜಕುಮಾರ'
Recommended Video

ಧರ್ಮಸ್ಥಳದಲ್ಲಿ ರಾಯರ ನೆನೆದ ಪುನೀತ್ ರಾಜ್‌ಕುಮಾರ್..! | Filmibeat Kannada
ನಟ ಪುನೀತ್ ರಾಜ್ ಕುಮಾರ್ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿದ್ದಾರೆ. ನಿನ್ನೆ ಧರ್ಮಸ್ಥಳಕ್ಕೆ ಅಪ್ಪು ಹೋಗಿದ್ದು, ಅದರ ಫೋಟೊಗಳನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಮಂಜುನಾಥ ಸ್ವಾಮಿಯ ದರ್ಶನ ಪಡೆದು ಪುನೀತ್ ಪುನೀತರಾಗಿದ್ದಾರೆ. ಧರ್ಮಸ್ಥಳದಲ್ಲಿ ನಡೆಯುತ್ತಿದ್ದ ಭಜನಾ ತರಬೇತಿ ಕಮ್ಮಟದ ಸಮಾರೂಪ ಸಮಾರಂಭದಲ್ಲಿ ಪುನೀತ್ ಅತಿಥಿಯಾಗಿದ್ದರು. ಸಪ್ಟೆಂಬರ್ 23 ರಂದು ಈ ಕಾರ್ಯಕ್ರಮ ನಡೆದಿದ್ದು ಅದರ ಕೊನೆಯ ದಿನದ ಕಾರ್ಯಕ್ರಮ ನಿನ್ನೆ ನಡೆಯಿತು.
ಈ ಭಜನಾ ಕಾರ್ಯಕ್ರಮದಲ್ಲಿ 3000 ಸಾವಿರಕ್ಕು ಅಧಿಕ ಕಾರ್ಯಕರ್ತರು ಭಾಗಿಯಾಗಿದ್ದರು. ಪುನೀತ್ ಈ ಕಾರ್ಯಕ್ರಮದ ಆಕರ್ಷಣೆ ಆಗಿದ್ದು, ದೇವಸ್ಥಾನಕ್ಕೆ ಬಂದ ಭಕ್ತಾದಿಗಳು ಪುನೀತ್ ರನ್ನು ನೋಡಿ ಖುಷಿಪಟ್ಟರು.

ಪುನೀತ್ ಆಗಾಗ ಧರ್ಮಸ್ಥಳಕ್ಕೆ ಭೇಟಿ ನೀಡುತ್ತಿರುತ್ತಾರೆ. ಇದೀಗ ಸಿನಿಮಾದ ಕೆಲಸಗಳ ನಡುವೆ ಈ ಮಂಗಳ ಕಾರ್ಯಕ್ರಮದಲ್ಲಿ ಅವರು ಭಾಗಿಯಾಗಿದ್ದರು. ಪುನೀತ್ ಸದ್ಯ 'ನಟ ಸಾರ್ವಭೌಮ' ಚಿತ್ರದ ಶೂಟಿಂಗ್ ಕೊಲ್ಕತ್ತಾದಲ್ಲಿ ಮುಗಿಸಿಕೊಂಡು ಬಂದಿದ್ದಾರೆ.
English summary
Kannada actor Punneth Rajkumar visited dharmastala temple yesterday (September 30th).


Click it and Unblock the Notifications