ಗೆಳೆಯರನ್ನು ನಂಬಿ 100 ಕೋಟಿ ಕಳೆದುಕೊಂಡ ಪುರಿ ಜಗನ್ನಾಥ್
ಪುರಿ ಜಗನ್ನಾಥ್ ದಕ್ಷಿಣ ಭಾರತದ ಖ್ಯಾತ ಸಿನಿಮಾ ನಿರ್ದೇಶಕರು. ಕನ್ನಡಲ್ಲೂ ಕೆಲವು ಸಿನಿಮಾಗಳನ್ನು ನಿರ್ದೇಶಿಸಿರುವ ಇವರು, ಪುನೀತ್ ರಾಜ್‌ಕುಮಾರ್ ಅನ್ನು ಹೀರೋ ಆಗಿ ಬೆಳ್ಳಿತೆರೆಗೆ ಪರಿಚಯಿಸಿದವರು.
Recommended Video
ಸಿನಿಮಾ ಉದ್ಯಮಕ್ಕೆ ಬಂದು 20 ವರ್ಷವಾದರೂ ಪುರಿ ಜಗನ್ನಾಥ್ ಚಾರ್ಮ್ ಕಡಿಮೆಯಾಗಿಲ್ಲ. ದೊಡ್ಡ ನಟರಿಂದ ಹಿಡಿದು ಹೊಸ ನಟರವರೆಗೂ ಪುರಿ ಜಗನ್ನಾಥ್ ಅವರೊಂದಿಗೆ ಕೆಲಸ ಮಾಡಲು ಈಗಲೂ ತುದಿಗಾಲಲ್ಲಿ ನಿಂತಿದ್ದಾರೆ.
ಪುರಿ ಜಗನ್ನಾಥ್ ಅವರಿಗೆ ಸಾಮಾನ್ಯ ಕತೆಯನ್ನೂ ಸಹ ಹೇಗೆ ಆಸಕ್ತಿದಾಯಕವಾಗಿ, ಹೊಸದಾಗಿ ತೆರೆಯ ಮೇಲೆ ತರಬೇಕೆನ್ನುವ ಕಲೆ ಗೊತ್ತಿದೆ. ದಕ್ಷಿಣ ಭಾರತದಲ್ಲಿ ಬಹು ಬುದ್ಧಿವಂತ ನಿರ್ದೇಶಕ ಎಂದೇ ಪುರಿ ಜಗನ್ನಾಥ್ ಖ್ಯಾತರು ಆದರೆ ಅವರೂ ಸಹ ಮೋಸ ಹೋಗಿದ್ದಾರಂತೆ. ಅದೂ ತಾವು ನಂಬಿದ ಗೆಳೆಯರಿಂದಲೇ ಜಗನ್ನಾಥ್ ಅವರಿಗೆ ಮೋಸವಾಗಿದೆಯಂತೆ.

ಹಿಟ್ ಮೇಲೆ ಹಿಟ್ ಸಿನಿಮಾ ಕೊಟ್ಟಿದ್ದ ನಿರ್ದೇಶಕ
ಪುರಿ ಜಗನ್ನಾಥ್ ಮೊದಲಗೆ ಸಿನಿಮಾ ರಂಗಕ್ಕೆ ಪ್ರವೇಶಿಸಿದಾಗ ಹಿಟ್ ಮೇಲೆ ಹಿಟ್ ಸಿನಿಮಾಗಳನ್ನು ಕೊಟ್ಟರು. ಕೆಲವೇ ತಿಂಗಳಲ್ಲಿ ಸಿನಿಮಾ ಮುಗಿಸಿ ಹಿಟ್ ಆಗಿಸುತ್ತಿದ್ದ ಅವರೆಂದರೆ ನಿರ್ಮಾಪಕರಿಗಂತೂ ಅಚ್ಚು ಮೆಚ್ಚಾಗಿತ್ತು. ಸಾಲು-ಸಾಲು ಸಿನಿಮಾಗಳಿಗೆ ಅವರು ಆಗ ಕೆಲಸ ಮಾಡಿದ್ದರು.

ಕೋಟ್ಯಂತರ ರೂಪಾಯಿ ಗಳಿಸಿದ್ದರಂತೆ ಪುರಿ ಜಗನ್ನಾಥ್
ಅದೇ ಸಮಯದಲ್ಲಿ ಕೋಟ್ಯಂತರ ರೂಪಾಯಿ ಹಣವನ್ನು ಪುರಿ ಜಗನ್ನಾಥ್ ಗಳಿಸಿದ್ದರಂತೆ. ಆಗಿನ ಸಮಯದಲ್ಲಿ ಹಿರಿಯ ನಿರ್ದೇಶಕರೇ ಗಳಿಸದಿದ್ದಷ್ಟು ಹಣವನ್ನು ನಾನು ಗಳಿಸಿದ್ದೆ. ಎಷ್ಟು ಹಣ ಗಳಿಸಿದ್ದೆ ಎಂಬ ಲೆಕ್ಕ ಸಹ ನನಗೆ ಇರಲಿಲ್ಲ, ಅಷ್ಟೋಂದು ಹಣವನ್ನು ನಾನಾಗ ದುಡಿದಿದ್ದೆ ಎಂದು ಸ್ವತಃ ಪುರಿ ಜಗನ್ನಾಥ್ ಹೇಳಿದ್ದಾರೆ.

''ಯಾವುದರ ಮೇಲೆ ಬಂಡವಾಳ ಹೂಡಬೇಕು ಗೊತ್ತಿರಲಿಲ್ಲ''
ಆದರೆ ನನಗೆ ಹಣವನ್ನು ಯಾವುದರ ಮೇಲೆ ಇನ್ವೆಸ್ಟ್ ಮಾಡಬೇಕು, ಗಳಿಸಿದ ಹಣದಲ್ಲಿ ಏನು ಮಾಡಬೇಕು ಎಂಬ ಐಡಿಯಾ ಆಗ ಇರಲಿಲ್ಲ. ಹಾಗಾಗಿ ನನ್ನ ಹಣವನ್ನು ನನ್ನ ಗೆಳೆಯರಿಗೆ ಬಂಡವಾಳ ಹೂಡಲೆಂದು ಕೊಟ್ಟು ಬಿಟ್ಟೆ, ಆದರೆ ಹಲವರು ಮೋಸ ಮಾಡಿಬಿಟ್ಟರು ಎಂದು ಪುರಿ ಹೇಳಿದ್ದಾರೆ.

ನಂಬಿದವರೇ ನನಗೆ ಮೋಸ ಮಾಡಿದರು: ಪುರಿ
ಸುಮಾರು ನೂರು ಕೋಟಿ ರೂಪಾಯಿ ಹಣ ನನಗೆ ಮೋಸ ಮಾಡಿದರು. ನಂಬಿದವರಿಂದಲೇ ನನಗೆ ಮೋಸವಾಯಿತು. ಗಳಿಸಿದ್ದದ ಬಹುತೇಕವನ್ನು ನಾನು ಕಳೆದುಕೊಂಡೆ ಎಂದು ಪುರಿ ಹಳೆಯ ದಿನಗಳನ್ನು ಸಂದರ್ಶನವೊಂದರಲ್ಲಿ ನೆನಪಿಸಿಕೊಂಡಿದ್ದಾರೆ.

ಈಗ ಜಾಗೃತವಾಗಿದ್ದೀನಿ: ಪುರಿ ಜಗನ್ನಾಥ್
ಆದರೆ ಒಮ್ಮೆ ಹಣ ಕಳೆದುಕೊಂಡ ಬಳಿಕ ಬುದ್ಧಿ ಬಂದಿತು. ಕಳೆದು ಕೊಂಡ ಹಣವನ್ನು ಮತ್ತೆ ಸಂಪಾದನೆ ಮಾಡಿದೆ, ಮತ್ತೆ ಎದ್ದು ನಿಂತೆ, ಈಗ ಜಾಗೃತೆಯಾಗಿದ್ದೇನೆ ಎಂದು ಪುರಿ ಜಗನ್ನಾಥ್ ಹೇಳಿದ್ದಾರೆ.


Click it and Unblock the Notifications











