'ದೇವಕಿ' ಟೀಸರ್ ನೋಡಿ ಮೆಚ್ಚಿದ ಪೂರಿ ಜಗನ್ನಾಥ್
'ದೇವಕಿ..ದೇವಕಿ..ದೇವಕಿ..' ಸ್ಯಾಂಡಲ್ ವುಡ್ ತುಂಬ ಇದೀಗ ಈ ಸಿನಿಮಾದ್ದೇ ಸುದ್ದಿ. ಕನ್ನಡ ಚಿತ್ರರಂಗದವರ ಗಮನ ಸೆಳೆದ ಈ ಸಿನಿಮಾದ ಟೀಸರ್ ಈಗ ಟಾಲಿವುಡ್ ಮಂದಿಯ ಮನ್ನಣೆ ಪಡೆದಿದೆ.
ಸೌತ್ ಚಿತ್ರರಂಗದ ಖ್ಯಾತ ನಿರ್ದೇಶಕ ಪೂರಿ ಜಗನ್ನಾಥ್ ಸಿನಿಮಾ ಟೀಸರ್ ನೋಡಿ ಮೆಚ್ಚಿಗೆ ವ್ಯಕ್ತಪಡಿಸಿದ್ದಾರೆ. ಟೀಸರ್ ಅನ್ನು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿರುವ ಅವರು ಸಿನಿಮಾದ ಟೀಸರ್ ತುಂಬ ಪ್ರಾಮಿಸಿಂಗ್ ಆಗಿದೆ ಎಂದಿದ್ದಾರೆ.
ಪೂರಿ ಜಗನ್ನಾಥ್ ರಂತಹ ದೊಡ್ಡ ನಿರ್ದೇಶಕರು ದಿನಕ್ಕೆ ಎಷ್ಟೋ ಚಿತ್ರದ ಟೀಸರ್ ಗಳನ್ನು ನೋಡುತ್ತಿರುತ್ತಾರೆ. ಆದರೆ, ಅಂತಹ ನಿರ್ದೇಶಕರು ಒಂದು ಸಿನಿಮಾ ಬಗ್ಗೆ ಅದರಲ್ಲಿಯೂ, ಕನ್ನಡ ಚಿತ್ರದ ಟೀಸರ್ ಬಗ್ಗೆ ಬರೆದಿದ್ದಾರೆ ಎಂದರೆ ಮೆಚ್ಚುವ ವಿಷಯ.
ಹಾಗೆ ನೋಡಿದರೆ, ಪೂರಿ ಜಗನ್ನಾಥ್ ಕನ್ನಡ ಸಿನಿಮಾಗಳ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದು ತೀರ ಕಡಿಮೆಯೇ. ಮೂರು ಕನ್ನಡ ಸಿನಿಮಾ ಮಾಡಿರುವ ಅವರು ಬೇರೆ ಬೇರೆ ಚಿತ್ರಗಳ ಬಗ್ಗೆ ಹೆಚ್ಚು ಮಾತನಾಡಿಲ್ಲ.

ಆದರೆ, ಇದೀಗ 'ದೇವಕಿ' ಬಗ್ಗೆ ಪೂರಿ ಮೆಚ್ಚುಗೆ ಸೂಚಿಸಿದ್ದಾರೆ. ಸಿನಿಮಾದ ಕ್ವಾಲಿಟಿ ಇಷ್ಟ ಪಟ್ಟ ಅವರು ಇನ್ನಷ್ಟು ಜನರಿಗ ಟೀಸರ್ ಮುಟ್ಟಿಸುವ ಪ್ರಯತ್ನಕ್ಕೆ ಕೈ ಜೋಡಿಸಿದ್ದಾರೆ.
'ದೇವಕಿ' ಪ್ರಿಯಾಂಕ ಉಪೇಂದ್ರ ನಟನೆಯ ಹೊಸ ಸಿನಿಮಾವಾಗಿದೆ. ಉಪೇಂದ್ರ ಪುತ್ರಿ ಈ ಸಿನಿಮಾದ ಮೂಲಕ ಲಾಂಚ್ ಆಗುತ್ತಿದ್ದಾರೆ. 'ಮಮ್ಮಿ' ಖ್ಯಾತಿಯ ಲೋಹಿತ್ ಈ ಸಿನಿಮಾದ ನಿರ್ದೇಶನ ಮಾಡಿದ್ದಾರೆ. ಕಳೆದ ಬುಧವಾರ ರಿಲೀಸ್ ಆದ ಈ ಟೀಸರ್ ದೊಡ್ಡ ಪ್ರಶಂಸೆ ಪಡೆದಿದೆ.


Click it and Unblock the Notifications











