ಮಂಕಿ ಸೀನನಿಗೆ ಸಾಥ್ ನೀಡಿದ ಪುಷ್ಕರ್ ಫಿಲ್ಮ್ಸ್
Recommended Video
Popcorn Monkey Tiger : ಮಂಕಿ ಸೀನನಿಗೆ ಸಾಥ್ ನೀಡಿದ ಪುಷ್ಕರ್ ಫಿಲ್ಮ್ಸ್ | PMT | Daali Dhananjaya | Suri
ಧನಂಜಯ್ ನಟನೆಯ 'ಪಾಪ್ ಕಾರ್ನ್ ಮಂಕಿ ಸೀನ' ಸಿನಿಮಾ ಇದೇ ತಿಂಗಳ ಬಿಡುಗಡೆ ಆಗುತ್ತಿದೆ. ಈ ಸಿನಿಮಾದ ವಿತರಣೆಯನ್ನು ಪುಷ್ಕರ್ ಫಿಲ್ಮ್ಸ್ ಮಾಡುತ್ತಿದೆ.
ಪುಷ್ಕರ್ ಫಿಲ್ಮ್ಸ್ ಹಾಗೂ ಮೋಹನ್ ಫಿಲ್ಮ್ಸ್ ಬ್ಯಾನರ್ ನಲ್ಲಿ ಸಿನಿಮಾ ವಿತರಣೆ ಮಾಡಲಾಗುತ್ತಿದೆ. ಈ ವಿಷಯವನ್ನು ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಇದೇ ಮೊದಲ ಬಾರಿಗೆ ಸೂರಿ ನಿರ್ದೇಶಕನ ಸಿನಿಮಾವನ್ನು ಪುಷ್ಕರ್ ಫಿಲ್ಮ್ಸ್ ನಿರ್ಮಾಣ ಮಾಡುತ್ತಿದೆ. 'ಅವನೇ ಶ್ರೀಮನ್ನಾರಾಯಣ' ಚಿತ್ರದ ನಂತರ ಈ ಸಿನಿಮಾಗೆ ಪುಷ್ಕರ್ ಕೈ ಹಾಕಿದ್ದಾರೆ.

'ಪಾಪ್ ಕಾರ್ನ್ ಮಂಕಿ ಸೀನ' ಫೆಬ್ರವರಿ 21 ರಂದು ಬಿಡುಗಡೆ ಆಗುತ್ತಿದೆ. ಈಗಾಗಲೇ ಸಿನಿಮಾ ಟೀಸರ್ ಹಾಗೂ ಹಾಡು ದೊಡ್ಡ ಕುತೂಹಲವನ್ನು ಹುಟ್ಟುಹಾಕಿದೆ. ಶಿವರಾತ್ರಿ ಹಬ್ಬದ ವಿಶೇಷವಾಗಿ ಸಿನಿಮಾ ಪ್ರೇಕ್ಷಕರ ಮುಂದೆ ಬರುತ್ತಿದೆ.
ನಟಿ ಅಮೃತ ಅಯ್ಯಂಗಾರ್, ನಿವೇದಿತಾ ಹಾಗೂ ಸಪ್ತಮಿ ಸಿನಿಮಾದ ನಾಯಕಿಯರಾಗಿದ್ದಾರೆ. ಚರಣ್ ರಾಜ್ ಸಂಗೀತ ನೀಡಿದ್ದಾರೆ. ಸುಧೀರ್ ನಿರ್ಮಾಣ ಮಾಡಿದ್ದಾರೆ.
More from Filmibeat
English summary
Producer Pushkar Films will be distributing Popcorn Monkey Tiger movie. The movie will be releasing on february 21st.


Click it and Unblock the Notifications











