For Quick Alerts
  ALLOW NOTIFICATIONS  
  For Daily Alerts

  ರಕ್ಷಿತ್ ತೇಜೋವಧೆ ಮಾಡಿದ ಸುದ್ದಿ ವಾಹಿನಿಗೆ ಪುಷ್ಕರ್ ಬಹಿರಂಗ ಪತ್ರ

  |

  ಕನ್ನಡ ಖಾಸಗಿ ಸುದ್ದಿ ವಾಹಿನಿ ಪಬ್ಲಿಕ್ ಟಿವಿ ರಕ್ಷಿತ್ ಶೆಟ್ಟಿ ವಿರುದ್ಧ ಅವಹೇಳನಕಾರಿ ಸುದ್ದಿ ಪ್ರಕಟಿಸಿದೆ ಎಂದ ಅನೇಕರು ಸುದ್ದಿ ವಾಹಿನಿ ವಿರುದ್ಧ ಅಸಮಾಧಾನ ಹೊರಹಾಕುತ್ತಿದ್ದಾರೆ. ರಕ್ಷಿತ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪರ ವಿರೋಧ ಚರ್ಚೆ ಶುರುವಾಗಿದೆ.

  ಚಿತ್ರರಂಗದ ಅನೇಕರು ರಕ್ಷಿತ್ ಪರ ನಿಂತಿದ್ದು, ಸ್ಟ್ಯಾಂಡ್ ವಿಥ್ ರಕ್ಷಿತ್ ಎಂದು ಟ್ರೆಂಡ್ ಮಾಡುತ್ತಿದ್ದಾರೆ. ಸ್ವತಃ ರಕ್ಷಿತ್ ಶೆಟ್ಟಿ ಈ ಬಗ್ಗೆ ಅಸಮಾಧಾನ ಹೊಹಾಕಿದ್ದು, ಜುಲೈ 11ರಂದು ಈ ಬಗ್ಗೆ ಉತ್ತರ ನೀಡುವುದಾಗಿ ಹೇಳಿದ್ದಾರೆ. ಇದೀಗ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಪ್ರತಿಕ್ರಿಯೆ ನೀಡಿ, ಸುದ್ದಿ ವಾಹಿನಿಗೆ ಬಹಿರಂಗ ಪತ್ರ ಬರೆದಿದ್ದಾರೆ. ಮುಂದೆ ಓದಿ..

  ಪಬ್ಲಿಕ್ ಟಿವಿ ವಿರುದ್ಧ ನಟ ರಕ್ಷಿತ್ ಶೆಟ್ಟಿ ಕೆಂಡಾಮಂಡಲಪಬ್ಲಿಕ್ ಟಿವಿ ವಿರುದ್ಧ ನಟ ರಕ್ಷಿತ್ ಶೆಟ್ಟಿ ಕೆಂಡಾಮಂಡಲ

  ಇದು ಆಘಾತಕಾರಿ ಸಂಗತಿ

  ಇದು ಆಘಾತಕಾರಿ ಸಂಗತಿ

  "ನಮ್ಮ ಚಿತ್ರರಂಗಕ್ಕೆ ಇದು ಪರೀಕ್ಷೆಯ ಕಾಲ. ಪ್ರತಿಯೊಬ್ಬರು ಕಷ್ಟದಲ್ಲಿದ್ದಾರೆ. ಇಂಥ ಸಂದರ್ಭದಲ್ಲಿ ರಕ್ಷಿತ್ ಬಗ್ಗೆ ಪ್ರತಿಷ್ಠಿತ ಸುದ್ದಿವಾಹಿನಿಯಲ್ಲಿ ಈ ರೀತಿ ಪ್ರಸಾರ ಆಗಿರುವುದು ಆಘಾತಕಾರಿ ಸಂಗತಿ. ತಮ್ಮ ಪರಿಶ್ರಮ ಮತ್ತು ಕನ್ನಡ ಚಿತ್ರರಂಗಕ್ಕೆ ಕೊಡುಗೆ ನೀಡಿರುವ ರಕ್ಷಿತ್ ಶೆಟ್ಟಿ ಬಗ್ಗೆ ಈ ರೀತಿ ಸುದ್ದಿ ಮಾಡುವುದು ಸರಿಯಲ್ಲ. ಸುದ್ದಿವಾಹಿನಿಯ ಕಾರ್ಯಕ್ರಮಕ್ಕೆ ಪ್ರತಿಕ್ರಿಯೆ ನೀಡಲು, ನಾವು ಮತ್ತು ರಕ್ಷಿತ್ ಯಾವುದು ಸತ್ಯ ಎಂದು ಸ್ಪಷ್ಟಪಡಿಸಲು ಸೋಶಿಯಲ್ ಮೀಡಿಯಾ ಬಳಸಬೇಕಾಗಿರುವುದು ದುರದೃಷ್ಟಕರ"

  ನನ್ನ ಸಿನಿ ಪಯಣಕ್ಕೆ ಅವರೇ ಸ್ಫೂರ್ತಿ

  ನನ್ನ ಸಿನಿ ಪಯಣಕ್ಕೆ ಅವರೇ ಸ್ಫೂರ್ತಿ

  "ಪ್ರಾರಂಭದಿಂದ ಗೋಧಿಬಣ್ಣ ಸಾಧಾರಣ ಮೈಕಟ್ಟು ಚಿತ್ರದಿಂದ ಅವನೇ ಶ್ರೀಮನ್ನಾರಾಯಣ ಸಿನಿಮಾದವರೆಗೆ 5 ವರ್ಷಗಳಿಂದ ನಾನು ಮತ್ತು ರಕ್ಷಿತ್ ಜೊತೆಯಾಗಿ ಸಾಗಿ ಬಂದಿದ್ದೇವೆ. ಇಬ್ಬರು ಒಟ್ಟಿಗೆ ಅನೇಕ ಅದ್ಭುತ ಸಿನಿಮಾಗಳನ್ನು ನೀಡಿದ್ದೇವೆ. ನನ್ನ ಸಿನಿ ಪಯಣಕ್ಕೆ ಅವರೇ ಸ್ಫೂರ್ತಿ"

  ಏನೇ ಇದ್ದರೂ ಸಾರ್ವಜನಿಕವಾಗಿ ಸ್ಪಷ್ಟಪಡಿಸಬೇಕಿಲ್ಲ

  ಏನೇ ಇದ್ದರೂ ಸಾರ್ವಜನಿಕವಾಗಿ ಸ್ಪಷ್ಟಪಡಿಸಬೇಕಿಲ್ಲ

  "ಅವನೇ ಶ್ರೀಮನ್ನಾರಾಯಣ ಬ್ಯುಸಿನೆಸ್ ಬಗ್ಗೆ ಅನೇಕ ಊಹಾಪೋಹಗಳಿವೆ. ಅದು ನನ್ನ ವೈಯಕ್ತಿಕ. ಲಾಭ-ನಷ್ಟ ಏನೇ ಇದ್ದರೂ ಉತ್ಸಾಹದಲ್ಲಿ ನಾವು ಒಂದು ತಂಡದ ರೀತಿ ಕೆಲಸ ಮಾಡಿದ್ದೇವೆ. ಮುಂದೆಯೂ ಹಾಗೆಯೇ ಮಾಡಲಿದ್ದೇವೆ. ಒಂದು ಸಿನಿಮಾದ ಫಲಿತಾಂಶ, ಸಿನಿಮಾ ಮೇಲಿರುವ ಪ್ರೀತಿ, ಉತ್ಸಾಹ ಕಡಿಮೆ ಆಗುವುದಿಲ್ಲ. ನಮ್ಮ ನಡುವೆ ಏನೆ ಇದ್ದರೂ ಅದನ್ನು ಸಾರ್ವಜನಿಕವಾಗಿ ನಾವು ಸ್ಪಷ್ಟಪಡಿಸಬೇಕಿಲ್ಲ"

  ಬೇರೆಯವರಿಗೆ ಮರ್ಯಾದೆ ಕೊಟ್ರೆ ನಮಗೆ ಮರ್ಯಾದೆ ಸಿಗುತ್ತೆ

  ಬೇರೆಯವರಿಗೆ ಮರ್ಯಾದೆ ಕೊಟ್ರೆ ನಮಗೆ ಮರ್ಯಾದೆ ಸಿಗುತ್ತೆ

  "ರಕ್ಷಿತ್ ಹಾಗೆ ಮತ್ತೊಬ್ಬರ ಬಗ್ಗೆ ಯಾವುದೇ ಸುದ್ದಿ ಸಂಸ್ಥೆ ಈ ರೀತಿಯ ವರದಿ ಪ್ರಸಾರ ಮಾಡುವುದನ್ನು ನಾನು ವಿರೋಧಿಸುತ್ತೇನೆ. ಪ್ರತಿ ಮಾಧ್ಯಮಕ್ಕೂ ಸಾಕಷ್ಟು ಸಾಮಾಜಿಕ ಮತ್ತು ನೈತಿಕ ಜವಾಬ್ದಾರಿ ಇದೆ. ನಾವು ಬೇರೆಯವರಿಗೆ ಮರ್ಯಾದೆ ಕೊಟ್ಟರೆ ಮಾತ್ರ ನಮಗೆ ಮರ್ಯಾದೆ ಸಿಗುತ್ತದೆ. ಮತ್ತೆ ಭವಿಷ್ಯದಲ್ಲಿ ಈ ರೀತಿ ಮಾಡಬಾರದು ಎಂದು ವಿನಂತಿಸುತ್ತೇನೆ" ಎಂದು ದೀರ್ಘವಾದ ಪತ್ರದ ಮೂಲಕ ಉತ್ತರ ಕೊಟ್ಟಿದ್ದಾರೆ.

  ಅಪ್ಪು ಅಭಿಮಾನಿಗಳ ಖುಷಿ ಹೆಚ್ಚಿಸಿದ ವಿಜಯ್ ಕಿರಗಂದೂರ್ | Filmibeat Kannada
  ರಕ್ಷಿತ್ ಪ್ರತಿಕ್ರಿಯೆ

  ರಕ್ಷಿತ್ ಪ್ರತಿಕ್ರಿಯೆ

  ಈ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿರುವ ರಕ್ಷಿತ್ ಶೆಟ್ಟಿ, ''ಪಬ್ಲಿಕ್ ಟಿವಿಯವರು ನನ್ನ ವಿರುದ್ಧ ಕಳೆದ ಎರಡು ವರ್ಷಗಳಲ್ಲಿ ಇಂಥಹಾ ಹಲವಾರು ಕಾರ್ಯಕ್ರಮಗಳನ್ನು ಮಾಡಿದ್ದಾರೆ. ಅವರ ಎಲ್ಲ ತೇಜೋವಧೆ ಯತ್ನಗಳನ್ನು ನಾನು ನಿರ್ಲಕ್ಷಿಸುತ್ತಾ ಬಂದಿದ್ದೆ. ಇದಕ್ಕೆಲ್ಲ ನನ್ನ ಕೆಲಸವೇ ಉತ್ತರ ಕೊಡುತ್ತದೆ ಎಂಬುದು ನನ್ನ ನಂಬಿಕೆ ಆಗಿತ್ತು'' ಎಂದಿದ್ದರು.

  English summary
  Pushkara Mallikarjunaiah reaction to news channel program about Rakshit Shetty and Avane Srimannarayana.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X