For Quick Alerts
  ALLOW NOTIFICATIONS  
  For Daily Alerts

  'ಅವನೇ ಶ್ರೀಮನ್ನಾರಾಯಣ' ಬಜೆಟ್ ಎಷ್ಟು?, ಏನಂದ್ರು ನಿರ್ಮಾಪಕರು?

  |
  Avane Srimannarayana's budget was disclosed by the producer Pushkar | FILMIBEAT KANNADA

  'ಅವನೇ ಶ್ರೀಮನ್ನಾರಾಯಣ' ಸಿನಿಮಾ ಕನ್ನಡ ಚಿತ್ರರಂಗದಲ್ಲಿ ನಿರ್ಮಾಣವಾದ ದೊಡ್ಡ ಬಜೆಟ್ ಸಿನಿಮಾಗಳ ಪೈಕಿ ಒಂದು ಎನ್ನುವುದು ಎಲ್ಲರಿಗೂ ತಿಳಿದಿರುವ ಸಂಗತಿ. ಹಾಗಿದ್ದ ಮೇಲೆ ಸಿನಿಮಾ ಬಜೆಟ್ ಎಷ್ಟಾಗಿರಬಹುದು ಎನ್ನುವ ಕುತೂಹಲ ಅನೇಕರಿಗೆ ಇರುತ್ತದೆ.

  ಈ ಬಗ್ಗೆ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಮಾತನಾಡಿದ್ದಾರೆ. ಸಿನಿಮಾ ಬಜೆಟ್ ಮೊತ್ತವನ್ನು ಬಹಿರಂಗ ಪಡಿಸದ ಅವರು, ಸಿನಿಮಾದ ಬಜೆಟ್ ಹೇಗೆ ಹೆಚ್ಚಾಯ್ತು ಎಂದು ಹೇಳಿದರು. ಮೊದಲು ಸಿನಿಮಾವನ್ನು 10 ಕೋಟಿ ಒಳಗೆ ಮುಗಿಸಬೇಕು ಎನ್ನುವುದು ಅವರ ಪ್ಲಾನ್ ಆಗಿತಂತೆ. ಆದರೆ, ಬರುಬರುತ್ತಾ ಆ ಬಜೆಟ್ ಹೆಚ್ಚಾಗುತ್ತಾ ಹೋಗಿದೆ.

  'ಅವನೇ ಶ್ರೀಮನ್ನಾರಾಯಣ' ಟ್ರೈಲರ್ ನೋಡಿ ಸ್ಟಾರ್ ನಟರು ಹೇಳಿದ್ದೇನು?'ಅವನೇ ಶ್ರೀಮನ್ನಾರಾಯಣ' ಟ್ರೈಲರ್ ನೋಡಿ ಸ್ಟಾರ್ ನಟರು ಹೇಳಿದ್ದೇನು?

  ಪುಷ್ಕರ್ ಅವರೇ ಹೇಳುವ ಹಾಗೆ, ಸಿನಿಮಾದ ಬಜೆಟ್ ಅಂದುಕೊಂಡ ಮಟ್ಟಕ್ಕಿಂತ ಹತ್ತರಷ್ಟು ಹೆಚ್ಚಾಗಿದೆ. ಅವರ ಮಾತಿನಂತೆ ಅಂದಾಜಿಗೆ ಲೆಕ್ಕ ಹಾಕಿದರೆ, ಸಿನಿಮಾದ ಬಜೆಟ್ 100 ಹತ್ತಿರ ಬರುತ್ತದೆ. ಇಷ್ಟೊಂದು ದೊಡ್ಡ ಬಂಡವಾಳ ಹಾಕಿ, ಈ ಪ್ಯಾನ್ ಇಂಡಿಯಾ ಸಿನಿಮಾ ಸಿದ್ಧವಾಗಿದೆ.

  ಕನ್ನಡ, ತೆಲುಗು, ತಮಿಳು, ಮಲೆಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಬಿಡುಗಡೆ ಆಗುತ್ತಿದೆ. ಎಲ್ಲ ಭಾಷೆಯ ಟಿವಿ ರೈಟ್ಸ್, ಹಿಂದಿ ಡಬ್ಬಿಂಗ್ ರೈಟ್ ಹೀಗೆ ಅನೇಕ ಮಾರ್ಗಗಳ ಮೂಲಕ ಸಿನಿಮಾದ ಬಂಡವಾಳ ವಾಪಸ್ ತೆಗೆಯಲು ಯೋಜನೆ ಹಾಕಿಕೊಳ್ಳಲಾಗಿದೆಯಂತೆ. ಇವುಗಳ ಜೊತೆಗೆ ಜನ ಸಿನಿಮಾಗೆ ನೀಡುವ ಹಣ ನಿರ್ಮಾಪಕ ಖಾತೆಗೆ ಸೇರುತ್ತದೆ.

  ರಜನಿಗೆ ವಿಲನ್ ಆಗುವ ಆಫರ್ ರಿಜೆಕ್ಟ್ ಮಾಡಿದ್ರು ರಕ್ಷಿತ್ರಜನಿಗೆ ವಿಲನ್ ಆಗುವ ಆಫರ್ ರಿಜೆಕ್ಟ್ ಮಾಡಿದ್ರು ರಕ್ಷಿತ್

  ಅಂದಹಾಗೆ, 'ಅವನೇ ಶ್ರೀಮನ್ನಾರಾಯಣ' ಸಿನಿಮಾ ಡಿಸೆಂಬರ್ 27 ರಂದು ಬಿಡುಗಡೆ ಆಗುತ್ತಿದೆ. ರಕ್ಷಿತ್ ಶೆಟ್ಟಿ, ಶಾನ್ವಿ ಶ್ರೀವಾತ್ಸವ್ ಈ ಸಿನಿಮಾದ ನಾಯಕ, ನಾಯಕಿ. ಸಚಿನ್ ಸಿನಿಮಾದ ನಿರ್ದೇಶನ ಮಾಡಿದ್ದಾರೆ.

  English summary
  Producer Pushkara Mallikarjunaiah spoke about Avane Srimannarayana budget.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X