For Quick Alerts
  ALLOW NOTIFICATIONS  
  For Daily Alerts

  'ಕುದುರೆ ರೇಸಿಂಗ್'ನಲ್ಲಿ ಡಿ ಬಾಸ್ ದರ್ಶನ್: ನಿರ್ಮಾಪಕ ಪುಷ್ಕರ್ ಹೇಳಿದ್ದೇನು?

  |
  Pushkara Mallikarjunaiah wants to make a horse racing film with Darshan | Filmibeat Kannada

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಇದುವರೆಗೂ ಸಾಕಷ್ಟು ಪಾತ್ರಗಳ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದಾರೆ. ತರಹೇವಾರಿ ಪಾತ್ರಗಳನ್ನು ನಿಭಾಯಿಸಿರುವ ದರ್ಶನ್ ಜಾಕಿಯಾಗಿ ಕಾಣಿಸಿಕೊಂಡರೆ ಹೇಗಿರುತ್ತೆ? ಎನ್ನುವ ಕನಸನ್ನು ಕಂಡಿದ್ದಾರೆ ಸ್ಯಾಂಡಲ್ ವುಡ್ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ.

  ವಿಡಿಯೋ: ನಂಜಿ ಮೇಲೆ 'ಒಡೆಯ'ನಿಗೆ ಶಾನೆ ಲವ್ ಆಗಿದೆವಿಡಿಯೋ: ನಂಜಿ ಮೇಲೆ 'ಒಡೆಯ'ನಿಗೆ ಶಾನೆ ಲವ್ ಆಗಿದೆ

  ಪುಷ್ಕರ್ ಗೆ ಯಾಕೆ ದಿಢೀರನೆ ಈ ಬಗ್ಗೆ ಆಲೋಚನೆ ಬಂತು ಎನ್ನುವುದು ಗೊತ್ತಿಲ್ಲ. ಆದರೆ ಸಾಮಾಜಿಕ ಜಾಲತಾಣದಲ್ಲಿ ಆಸೆಯನ್ನು ವ್ಯಕ್ತಪಡಿಸಿದ್ದಾರೆ. ಅಂದರೆ ದರ್ಶನ್ ಜೊತೆ ಸಿನಿಮಾ ಮಾಡುತ್ತಿದ್ದಾರಾ ಎನ್ನುವ ಕುತೂಹಲ ಕೂಡ ಅಭಿಮಾನಿಗಳಲ್ಲಿ ಮನೆ ಮಾಡಿದೆ. ಆದರೆ ಪುಷ್ಕರ್ ಇಲ್ಲಿ ತನ್ನ ಕನಸನ್ನು ಹೇಳಿಕೊಂಡಿದ್ದಾರೆ ಅಷ್ಟೆ. ದರ್ಶನ್ ಜೊತೆ ಇನ್ನು ಮಾತುಕತೆ ನಡೆಸಿಲ್ಲ. ಹಾಗಾದರೆ ಪುಷ್ಕರ್ ಹೇಳಿದ್ದೇನು? ಮುಂದೆ ಓದಿ..

  ಆಸೆ ಹೇಳಿಕೊಂಡ ನಿರ್ಮಾಪಕ ಪುಷ್ಕರ್

  ಆಸೆ ಹೇಳಿಕೊಂಡ ನಿರ್ಮಾಪಕ ಪುಷ್ಕರ್

  ನಿರ್ಮಾಪಕ ಪುಷ್ಕರ್ ಕುದುರೆ ರೇಸಿಂಗ್ ಫೋಟೋವನ್ನು ಶೇರ್ ಮಾಡಿ "ಒಂದು ವೇಳೆ ಡಿ ಬಾಸ್ ಕ್ರೀಡಾ ಆಧಾರಿತ ಕುದುರೆ ರೇಸಿಂಗ್ ಸಿನಿಮಾದಲ್ಲಿ ಅಭಿನಯಿಸಲು ಒಪ್ಪಿಕೊಂಡರೆ ಸ್ಯಾಂಡಲ್ ವುಡ್ ನಲ್ಲಿ ಅತಿ ದೊಡ್ಡ ಕ್ರೀಡಾ ಆಧಾರಿತ ಚಿತ್ರವಾಗಲಿದೆ. ದರ್ಶನ್ ಸರ್ ನಿಮ್ಮ ಜೊತೆ ಈ ತರ ಸಿನಿಮಾ ಮಾಡಬೇಕು ಅಂತ ಒಂದು ದೊಡ್ಡ ಕನಸಿದೆ" ಎಂದು ಬರೆದುಕೊಂಡು ತನ್ನ ಆಸೆಯನ್ನು ಹೊರಹಾಕಿದ್ದಾರೆ.

  ಕ್ರೀಡಾ ಆಧಾರಿತ ಚಿತ್ರಗಳು ಸಂಖ್ಯೆ ಕಡಿಮೆ

  ಕ್ರೀಡಾ ಆಧಾರಿತ ಚಿತ್ರಗಳು ಸಂಖ್ಯೆ ಕಡಿಮೆ

  ಸ್ಯಾಂಡಲ್ ವುಡ್ ನಲ್ಲಿ ಕ್ರೀಡಾ ಆಧಾರಿತ ಸಿನಿಮಾಗಳ ಸಂಖ್ಯೆ ತೀರಾ ಕಡಿಮೆ. ಅದರಲ್ಲೂ ಸಂಪೂರ್ಣವಾಗಿ ಹಾರ್ಸ್ ರೇಸಿಂಗ್ ಬಗ್ಗೆ ಸಿನಿಮಾಗಳು ಬಂದಿಲ್ಲ. ಹಾಗಾಗಿ ಇಂತಹ ಒಂದು ಕ್ರೀಡಾ ಆಧಾರಿತ ಸಿನಿಮಾ ಮಾಡಿದರೆ ಚಿತ್ರಾಭಿಮಾನಿಗಳಿಗೆ ಇಷ್ಟವಾಗುವುದರಲ್ಲಿ ಯಾವುದೆ ಅನುಮಾನವಿಲ್ಲ. ಪುಷ್ಕರ್ ಆಸೆಯಂತೆ ದರ್ಶನ್ ಕುದುರೆ ರೇಸಿಂಗ್ ಸಿನಿಮಾ ಮಾಡಲು ಒಪ್ಪಿಕೊಳ್ಳುತ್ತಾರಾ ಎನ್ನುವುದು ಅಭಿಮಾನಿಗಳ ಕುತೂಹಲ.

  ಸೆಂಚುರಿ ಬಾರಿಸಿದ 'ಕುರುಕ್ಷೇತ್ರ': 'ಚಕ್ರವ್ಯೂಹ'ದಲ್ಲಿ ನಿರ್ಮಾಪಕ ಮುನಿರತ್ನ!ಸೆಂಚುರಿ ಬಾರಿಸಿದ 'ಕುರುಕ್ಷೇತ್ರ': 'ಚಕ್ರವ್ಯೂಹ'ದಲ್ಲಿ ನಿರ್ಮಾಪಕ ಮುನಿರತ್ನ!

  ಜಾಕಿ ದರ್ಶನ್

  ಜಾಕಿ ದರ್ಶನ್

  ಹೇಳಿಕೇಳಿ ದರ್ಶನ್ ಅದ್ಭುತ ಜಾಕಿ. ಹಾರ್ಸ್ ರೈಡಿಂಗ್ ಮಾಡುತ್ತಿರುತ್ತಾರೆ. ದರ್ಶನ್ ಫಾರ್ಮ್ ಹೌಸ್ ನಲ್ಲಿಯೆ ಸಾಕಷ್ಟು ಕುದುರೆಗಳನ್ನು ಸಾಕಿದ್ದಾರೆ. ಬಿಡುವಿನ ವೇಳೆ ಪ್ರಾಣಿಗಳ ಜೊತೆ ಸಮಯ ಕಳೆಯುತ್ತಾರೆ. ಇದನ್ನೆ ನೋಡಿ ಪುಷ್ಕರ್, ದರ್ಶನ್ ಹಾರ್ಸ್ ರೇಸಿಂಗ್ ಚಿತ್ರದಲ್ಲಿ ಕಾಣಿಸಿಕೊಂಡರೆ ಚೆನ್ನಾಗಿರುತ್ತೆ ಎನ್ನುವುದು ಅವರ ಆಲೋಚನೆ ಬಂದಿರಬಹುದು.

  ದರ್ಶನ್ ಜೊತೆ ನಟಿಸಿದ್ದ ಈ ನಟಿ ಯಾರು? ಸುಳಿವು ಇಲ್ಲಿದೆ ಊಹಿಸಿ?ದರ್ಶನ್ ಜೊತೆ ನಟಿಸಿದ್ದ ಈ ನಟಿ ಯಾರು? ಸುಳಿವು ಇಲ್ಲಿದೆ ಊಹಿಸಿ?

  ಅಭಿಮಾನಿಗಳ ಸಾಥ್

  ಅಭಿಮಾನಿಗಳ ಸಾಥ್

  ಪುಷ್ಕರ್ ಆಸೆಗೆ ಸಾಕಷ್ಟು ಜನ ಅಭಿಮಾನಿಗಳು ಸಾಥ್ ನೀಡುತ್ತಿದ್ದಾರೆ. ದರ್ಶನ್ ಅವರನ್ನು ಕುದುರೆ ರೇಸಿಂಗ್ ಚಿತ್ರದಲ್ಲಿ ನೋಡುವ ಆಸೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಸದ್ಯ "ಅವನೇ ಶ್ರೀಮನ್ನಾರಾಯಣ" ಚಿತ್ರದ ರಿಲೀಸ್ ನಲ್ಲಿ ಬ್ಯುಸಿ ಇರುವ ಪುಷ್ಕರ್, ಸಿನಿಮಾ ರಿಲೀಸ್ ಆದಮೇಲೆ ಈ ಬಗ್ಗೆ ದರ್ಶನ್ ಜೊತೆ ಮಾತನಾಡುವ ಸಾಧ್ಯತೆಯು ಇದೆ.

  Read more about: darshan ದರ್ಶನ್
  English summary
  Kannada producer Pushkara Mallikarjunaiah wants to make a horse racing film with Darshan.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X