ಪುಷ್ಪ 2 ಪೋಸ್ಟರ್ ಕಾಂತಾರ ಅಲ್ಲ 9 ವರ್ಷಗಳ ಹಿಂದಿನ ದುನಿಯಾ ವಿಜಿ ಚಿತ್ರದ ಕಾಪಿ ಎಂದ ನೆಟ್ಟಿಗರು!

ಹಿಟ್ ಚಿತ್ರವೊಂದರ ಮಾದರಿಯಲ್ಲಿ ಮತ್ತೊಂದು ಚಿತ್ರದ ಪಾತ್ರಗಳನ್ನು ‌ಹಾಗೂ ಅವುಗಳ‌ ವೇಷಭೂಷಣಗಳನ್ನು ಕಾಪಿ ಮಾಡುವುದು ಕಾಮನ್. ಇದನ್ನು ಕೆಲವರು ಕದ್ದಿದ್ದಲ್ಲ ಸ್ಪೂರ್ತಿಯಾಗಿ ತಯಾರಿಸಿದ್ದು ಎಂದೂ ಸಹ ಹೇಳಿಕೊಳ್ತಾರೆ. ಕೆಲ ನಿರ್ದೇಶಕರು ಇದನ್ನು ನೇರವಾಗಿ ಆ ಚಿತ್ರದ ಪಾತ್ರಗಳಿಂದ ಸ್ಪೂರ್ತಿ ಪಡೆದು ಅದೇ ರೀತಿ ಸಿದ್ಧಪಡಿಸಿದ್ದೇವೆ ಎಂದರೆ ಇನ್ನೂ ಕೆಲ ನಿರ್ದೇಶಕರು ಎಲ್ಲಿಯೂ ಸುಳಿವನ್ನು ನೀಡದೇ ಕೊನೆಗೆ ಚಿತ್ರ ಬಿಡುಗಡೆಗೊಂಡ ಬಳಿಕ ಅದು ಬೇರೆ ಚಿತ್ರದಿಂದ ಕದಿಯಲಾದ ಅಂಶ ಎಂದು ಟ್ರೋಲ್ ಆದ ಉದಾಹರಣೆಗಳು ಸಾಕಷ್ಟಿವೆ.

ಈ ಹಿಂದೆ ಎಲ್ಲಾ ಈ ರೀತಿಯ ಕಾಪಿ ಹಾಗೂ ಇನ್ಸ್ಪಿರೇಷನ್ ಎಂಬ ಚರ್ಚೆಗಳೇನೂ ಇರಲಿಲ್ಲ. ಆದರೆ ಈಗಿನ ಸೋಷಿಯಲ್ ಮೀಡಿಯಾ ಯುಗದಲ್ಲಿ ಸಿನಿ ರಸಿಕರನ್ನು ಯಾಮಾರಿಸಿ ಕಾಪಿ ಮಾಡುವುದು ಕಷ್ಟ. ಹಾಡೊಂದು ಬಿಡುಗಡೆಯಾಗುತ್ತಿದ್ದಂತೆ ಈ ಹಾಡಿನ ಟ್ಯೂನ್ ಯಾವ ಚಿತ್ರದ್ದು ಎಂಬುದನ್ನು ಥಟ್ಟನೆ ಕಾಮೆಂಟ್ ಮಾಡಿ ತಿಳಿಸಿಬಿಡ್ತಾರೆ. ಇಷ್ಟರ ಮಟ್ಟಿಗೆ ಅಪ್‌ಡೇಟ್ ಆಗಿರುವ ಸಿನಿ ರಸಿಕರು ತೃಪ್ತಿಯಾಗುವಂತಹ ಕೆಲಸಗಳನ್ನು ಮಾಡುವುದು ನಿರ್ದೇಶಕರಿಗೆ ಸವಾಲೇ ಸರಿ.

Pushpa 2 first look poster is copied from Duniya Vijays Jayammana Maga says netizens

ಇನ್ನು ಪ್ರತಿ ಹೊಸ ಸ್ಟಾರ್ ಸಿನಿಮಾಗಳ ಅಪ್‌ಡೇಟ್ ಬಂದಾಗಲೂ ಅದನ್ನು ಹಳೆ ಸಿನಿಮಾಗಳ ಜತೆ ಹೋಲಿಸಿ ಕಾಪಿ ಎಂದು ಟ್ರೋಲ್ ಮಾಡುವ ಕೆಲ ನೆಟ್ಟಿಗರಿದ್ದಾರೆ. ಅವುಗಳಲ್ಲಿ ಕೆಲ ವಾದಗಳು ಸರಿ ಎನಿಸಿದರೆ, ಇನ್ನೂ ಕೆಲವು ಸತ್ಯಾಂಶಕ್ಕೆ ತದ್ವಿರುದ್ಧವಾಗಿರುತ್ತವೆ. ಇದೀಗ ಇಂತಹದ್ದೇ ಟ್ರೋಲ್‌ಗೆ ಒಳಗಾಗಿದೆ ಅಲ್ಲು ಅರ್ಜುನ್ ಹಾಗು ಸುಕುಮಾರ್ ಕಾಂಬಿನೇಶನ್‌ನ ಬಹು ನಿರೀಕ್ಷಿತ ಪುಷ್ಪ ದ ರೂಲ್ ಚಿತ್ರದ ಫಸ್ಟ್ ಲುಕ್ ಪೋಸ್ಟರ್.

ಹೌದು, ಇಂದು ( ಏಪ್ರಿಲ್ 8 ) ನಟ ಅಲ್ಲು ಅರ್ಜುನ್ ಹುಟ್ಟುಹಬ್ಬ ಇರುವುದರಿಂದ ವಿಶೇಷ ಪೋಸ್ಟರ್ ಹಾಗೂ ವಿಡಿಯೊ ಗ್ಲಿಂಪ್ಸ್ ಒಂದನ್ನು ಚಿತ್ರತಂಡ ಬಿಡುಗಡೆಗೊಳಿಸಿದೆ. ಇಂದು ಬಿಡುಗಡೆಯಾಗಬೇಕಿದ್ದ ಅಲ್ಲು ಅರ್ಜುನ್ ಫಸ್ಟ್ ಲುಕ್ ಪೋಸ್ಟರ್ ಲೀಕ್ ಆದ ಕಾರಣದಿಂದಾಗಿ ನಿನ್ನೆಯೇ ಬಿಡುಗಡೆಗೊಂಡಿದೆ. ಮೊದಲಿಗೆ ಈ ಪೋಸ್ಟರ್ ಕಂಡ ಸಿನಿ ರಸಿಕರು ಅಭಿಮಾನಿಳು ಮಾಡಿರುವ ಪೋಸ್ಟರ್ ಇರಬಹುದು ಎಂದು ಊಹಿಸಿದ್ದರು. ಆದರೆ ಚಿತ್ರತಂಡದ ಸದಸ್ಯರು ಟ್ವೀಟ್ ಮಾಡಿದ ಬೆನ್ನಲ್ಲೇ ಇದು ಅಧಿಕೃತ ಪೋಸ್ಟರ್ ಎಂಬುದು ಬಹಿರಂಗಗೊಂಡಿದೆ.

Pushpa 2 first look poster is copied from Duniya Vijays Jayammana Maga says netizens

ಹೀಗೆ ಭಾರೀ ಚರ್ಚೆಗೆ ಒಳಗಾಗಿದ್ದ ಈ ಪೋಸ್ಟರ್ ಅಧಿಕೃತ ಎಂದು ತಿಳಿಯುತ್ತಿದ್ದಂತೆ ಈ ಪೋಸ್ಟರ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅನೇಕರು ಪೋಸ್ಟರ್ ಸೂಪರ್ ಎಂದು ಮೆಚ್ಚಿಕೊಂಡರೆ, ಇನ್ನೂ ಕೆಲವರು ಈ ಪೋಸ್ಟರ್ ಕನ್ನಡದ ಸೂಪರ್ ಹಿಟ್ ಚಿತ್ರ ಕಾಂತಾರದ ಕಾಪಿ ಎಂದಿದ್ದರು. ಆದರೆ ಕಾಂತಾರಗೂ ಇದಕ್ಕೂ ಹೋಲಿಕೆಯೇ ಇಲ್ಲ ಎಂದು ಕೆಲವರು ವಾದಿಸಿದರು. ಹೀಗೆ ವಾದ ವಿವಾದ ನಡೆಯುತ್ತಲೇ ಇರುವಾಗಲೇ ಇದು ಕಾಂತಾರ ಚಿತ್ರದ ಕಾಪಿ ಅಲ್ಲ, ಇದು ಒಂಬತ್ತು ವರ್ಷಗಳ ಹಿಂದೆ ತೆರೆಗೆ ಬಂದಿದ್ದ ದುನಿಯಾ ವಿಜಯ್ ನಟನೆಯ ಚಿತ್ರದ ಕಾಪಿ ಎಂಬ ಆಪಾದನೆ ಕೇಳಿಬಂದಿದೆ.

ಹೌದು, 2013ರಲ್ಲಿ ಬಿಡುಗಡೆಗೊಂಡಿದ್ದ ಜಯಮ್ಮನ ಮಗ ಚಿತ್ರದಲ್ಲಿ ದುನಿಯಾ ವಿಜಯ್ ಕ್ಲೈಮ್ಯಾಕ್ಸ್‌ನಲ್ಲಿ ಧರಿಸುವ ವೇಷಭೂಷಣಕ್ಕೂ ಹಾಗೂ ಪುಷ್ಪ 2 ಚಿತ್ರದ ಫಸ್ಟ್ ಲುಕ್ ಪೋಸ್ಟರ್‌ನಲ್ಲಿ ಇರುವ ವೇ‍ಷಭೂಷಣಕ್ಕೂ ಅಪಾರವಾದ ಸಾಮ್ಯತೆ ಇದೆ ಎಂದು ನೆಟ್ಟಿಗರು ಟ್ರೋಲ್ ಮಾಡಿದ್ದಾರೆ. ಆದರೆ ತೆಲುಗು ರಾಜ್ಯಗಳ ಸಿನಿ ರಸಿಕರು ಮಾತ್ರ ಈ ಯಾವುದೇ ವಾದವನ್ನೂ ಸಹ ಒಪ್ಪಲು ತಯಾರಿಲ್ಲ. ಏಕೆಂದರೆ ಚಿತ್ತೂರಿನ ಗಂಗಮ್ಮ ಜಾತ್ರೆಯಲ್ಲಿ ಗಂಗಮ್ಮ ದೇವತೆಯನ್ನು ಸಿಂಗಾರಗೊಳಿಸುವ ರೀತಿಯಿಂದ ಪುಷ್ಪ ದ ರೈಸ್ ಚಿತ್ರದ ಫಸ್ಟ್ ಲುಕ್ ಅನ್ನು ತಯಾರಿಸಲಾಗಿದೆ ಎಂದು ತೆಲುಗು ಸಿನಿ ರಸಿಕರು ಬರೆದುಕೊಂಡಿದ್ದಾರೆ. ಅನೇಕ ವರ್ಷಗಳಿಂದ ಇರುವ ದೇವತೆಯ ಅವತಾರವನ್ನು ಕಾಪಿ ಮಾಡಲಾಗಿದೆಯೇ ಹೊರತು ಈ ಇದು ಯಾವುದೇ ಚಿತ್ರದ ಪಾತ್ರಗಳ ಕಾಪಿ ಅಲ್ಲ ಎಂದು ತೆಲುಗು ಸಿನಿ ಪ್ರೇಮಿಗಳು ಪುಷ್ಪ ಚಿತ್ರತಂಡ ಪರವಾಗಿ ಬ್ಯಾಟ್ ಬೀಸಿದ್ದಾರೆ.

More from Filmibeat

English summary
Pushpa 2 first look poster is copied from Duniya Vijay's Jayammana Maga says netizens. Read on
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X