ಅಣ್ಣಾವ್ರ ಸಿನಿಮಾ ಬಿಟ್ಟರೆ 'ಪುಷ್ಪ-2' ಎಂದು ಪೋಸ್ಟ್ ಮಾಡಿ ಡಿಲೀಟ್ ಮಾಡಿದ್ದೇಕೆ?

ಅಲ್ಲು ಅರ್ಜುನ್ ನಟನೆಯ 'ಪುಷ್ಪ'-2 ಸಿನಿಮಾ ಹವಾ ಜೋರಾಗಿದೆ. ಇದೇ ಗುರುವಾರ(ಡಿಸೆಂಬರ್ 5) ಸಿನಿಮಾ ತೆರೆಗೆ ಬರ್ತಿದೆ. ಈಗಾಗಲೇ ಅಡ್ವಾನ್ಸ್ ಬುಕ್ಕಿಂಗ್ ಶುರುವಾಗಿದೆ. ಕರ್ನಾಟಕದಲ್ಲಿ ಕೂಡ ದೊಡ್ಡಮಟ್ಟದಲ್ಲಿ ಸಿನಿಮಾ ಬಿಡುಗಡೆ ಆಗುತ್ತಿದೆ.

ಭಾರೀ ಮೊತ್ತಕ್ಕೆ ಕರ್ನಾಟಕ ವಿತರಣೆ ಹಕ್ಕು ಮಾರಾಟವಾಗಿದೆ. ಕೆಜಿ ರಸ್ತೆಯ 3 ಚಿತ್ರಮಂದಿರಗಳಲ್ಲಿ 'ಪುಷ್ಪ'-2 ಸಿನಿಮಾ ರಿಲೀಸ್ ಆಗಿ ಸದ್ದು ಮಾಡ್ತಿದೆ. ಕರ್ನಾಟಕದಲ್ಲಿ 'KGF-2' ದಾಖಲೆಯನ್ನು 'ಪುಷ್ಪ'-2 ಚಿತ್ರದಿಂದ ಮುರಿಯುತ್ತೇವೆ ಎಂದು ವಿತರಕರು ಹಿಂದೆ ಹೇಳಿದ್ದರು. ಈಗಾಗಲೇ 'ಪುಷ್ಪ'-2 ಸಿನಿಮಾ ಬಗ್ಗೆ ಕನ್ನಡಿಗರಿಂದ ಅಸಮಾಧಾನ ವ್ಯಕ್ತವಾಗುತ್ತಿದೆ. ಬಾಯ್ಕಾಟ್ ಮಾಡುವುದಾಗಿ ಹೇಳುತ್ತಿದ್ದಾರೆ.

Pushpa-2 Team delete post comparison with Dr Rajkumar films after backlash

ಪ್ಯಾನ್ ಇಂಡಿಯಾ ಸಿನಿಮಾಗಳ ಟ್ರೆಂಡ್ ಶುರುವಾದ ಬಳಿಕ ಸಣ್ಣ ಚಿತ್ರಗಳು ಲೆಕ್ಕಕ್ಕಿಲ್ಲ ಎನ್ನುವಂತಾಗಿದೆ. ಪ್ರೇಕ್ಷಕರು ಚಿಕ್ಕ ಸಿನಿಮಾಗಳನ್ನು ನೋಡಲು ಚಿತ್ರಮಂದಿರಕ್ಕೆ ಬರುತ್ತಿಲ್ಲ. ಹಾಗಾಗಿ ದೊಡ್ಡ ಸಿನಿಮಾಗಳನ್ನು ಒಮ್ಮೆಲೆ ದೊಡ್ಡಮಟ್ಟದಲ್ಲಿ ರಿಲೀಸ್ ಮಾಡುವ ಲೆಕ್ಕಾಚಾರ ನಡೀತಿದೆ. ಪರಭಾಷಾ ಸಿನಿಮಾಗಳನ್ನು ಕನ್ನಡಕ್ಕೂ ಡಬ್ ಮಾಡಿ ನೂರಾರು ಚಿತ್ರಮಂದಿರಗಳಲ್ಲಿ ರಿಲೀಸ್ ಮಾಡಲಾಗುತ್ತಿದೆ.

ಪರಭಾಷೆಯ ದೊಡ್ಡ ಸಿನಿಮಾಗಳು ಬರುವಾಗ ಕನ್ನಡ ಸಿನಿಮಾಗಳು ತೆರೆಗೆ ಬರಲು ಹಿಂದೇಟು ಹಾಕುತ್ತವೆ. ಇದೀಗ 'ಪುಷ್ಪ'-2 ರಿಲೀಸ್ ವೇಳೆಯೂ ಅದೇ ವಾತಾವರಣ ಕಂಡುಬರುತ್ತಿದೆ. ಕೆಜಿ ರಸ್ತೆಯ 3 ಚಿತ್ರಮಂದಿರಗಳಲ್ಲಿ ಪುಷ್ಪರಾಜ್ ಆರ್ಭಟ ಶುರುವಾಗುತ್ತಿದೆ. ಅನುಪಮಾ ಚಿತ್ರಮಂದಿರಲ್ಲಿ ಕನ್ನಡ ವರ್ಷನ್, ಪಕ್ಕದ ತ್ರಿವೇಣಿಯಲ್ಲಿ ತೆಲುಗು ಹಾಗೂ ಸಂತೋಷ್ ಚಿತ್ರಮಂದಿರದಲ್ಲಿ ಹಿಂದಿ ವರ್ಷನ್ ತೆರಗಪ್ಪಳಿಸಲಿದೆ.

ಡಾ. ರಾಜ್‌ಕುಮಾರ್ ಸಿನಿಮಾಗಳನ್ನು ಬಿಟ್ಟರೆ ಬೆಂಗಳೂರಿನ ಮೆಜೆಸ್ಟಿಕ್ ಭಾಗದ 3 ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುತ್ತಿರುವ ಮೊದಲ ಸಿನಿಮಾ 'ಪುಷ್ಪ'-2 ಎನ್ನುವ ಪೋಸ್ಟ್ ವೈರಲ್ ಆಗುತ್ತಿದೆ. ಇದೇ ಪೋಸ್ಟ್ ಅನ್ನು 'ಪುಷ್ಪ' ತಂಡದ ಅಧಿಕೃತ ಖಾತೆಯಲ್ಲಿ ಹಂಚಿಕೊಳ್ಳಲಾಗಿತ್ತು. ಈ ಬಗ್ಗೆ ಕನ್ನಡ ಸಿನಿರಸಿಕರು ತಿರುಗೇಟು ನೀಡಿದ್ದಾರೆ. 'KGF'-2 ಸಿನಿಮಾ ಇದಕ್ಕಿಂತ ದೊಡ್ಡಮಟ್ಟದಲ್ಲಿ ಬಿಡುಗಡೆ ಆಗಿತ್ತು. ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

Pushpa-2 Team delete post comparison with Dr Rajkumar films after backlash

ಸದ್ಯ 'ಪುಷ್ಪ' ಚಿತ್ರತಂಡದ ಅಧಿಕೃತ ಖಾತೆಯಿಂದ ಆ ಪೋಸ್ಟ್ ಡಿಲೀಟ್ ಆಗಿದೆ. ಆದರೂ ಸ್ಕ್ರೀನ್‌ ಶಾಟ್ ವೈರಲ್ ಆಗುತ್ತಿದೆ. ಅಂದಹಾಗೆ ಕೆಜಿ ರಸ್ತೆಯ 3 ಚಿತ್ರಮಂದಿರಗಳಲ್ಲಿ 'ಪುಷ್ಪ'-2 ಚಿತ್ರಕ್ಕೂ ಮುನ್ನ 'RRR' ಸಿನಿಮಾ ರಿಲೀಸ್ ಆಗಿತ್ತು. ಪ್ರಭಾಸ್ ನಟನೆಯ 'ಸಲಾರ್' ಸಿನಿಮಾ ಕೂಡ 3 ಸ್ಕ್ರೀನ್‌ಗಳನ್ನು ಪಡೆದಿತ್ತು.

ಗುರುವಾರ ಬೆಳ್ಳಂ ಬೆಳಗ್ಗೆ 4 ಗಂಟೆಗೆ 'ಪುಷ್ಪ'-2 ಸಿನಿಮಾ ಕರ್ನಾಟಕದಲ್ಲಿ ತೆರೆಗಪ್ಪಳಿಸಲಿದೆ. ಮುಂಜಾನೆ ಶೋಗಳ ಟಿಕೆಟ್ ಬುಕ್ಕಿಂಗ್ ಜೋರಾಗಿದೆ. 4 ಗಂಟೆ ಶೋಗಳ ಟಿಕೆಟ್ ದರ 4 ಪಟ್ಟು ಹೆಚ್ಚಿಸಲಾಗಿದೆ. ಸಾವಿರ ರೂಪಾಯಿಗೆ ಒಂದು ಟಿಕೆಟ್ ಬಿಕರಿ ಆಗುತ್ತಿದೆ. ಕೆಲ ಮಾಲ್‌ಗಳಲ್ಲಿ ಒಂದು ಟಿಕೆಟ್ ಬೆಲೆ 2000 ರೂಪಾಯಿ ಇದೆ.

3 ವರ್ಷಗಳ ಹಿಂದೆ 'ಪುಷ್ಪ' ಸಿನಿಮಾ ತೆರೆಗೆ ಬಂದು ಸೂಪರ್ ಹಿಟ್ ಆಗಿತ್ತು. ಪ್ಯಾನ್ ಇಂಡಿಯಾ ಮಟ್ಟದಲ್ಲಿ 300 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿತ್ತು. ಅದೇ ಕಾರಣಕ್ಕೆ ಸೀಕ್ವೆಲ್ ಸಖತ್ ನಿರೀಕ್ಷೆ ಹುಟ್ಟಾಕ್ಕಿದೆ. ಈಗಾಗಲೇ ಚಿತ್ರದ ಟೀಸರ್, ಸಾಂಗ್ಸ್, ಟ್ರೈಲರ್ ರಿಲೀಸ್ ಆಗಿ ಸದ್ದು ಮಾಡ್ತಿದೆ. ಮೊದಲ ಭಾಗಕ್ಕಿಂತ ಹಲವು ಪಟ್ಟು ದೊಡ್ಡದಾಗಿ ಸಿನಿಮಾ ಮೂಡಿ ಬಂದಿದೆ.

ಸುಕುಮಾರ್ ನಿರ್ದೇಶನದ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ಮಿಂಚಿದ್ದಾರೆ. ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ ಯು/ಎ ಸರ್ಟಿಫಿಕೇಟ್ ಸಿಕ್ಕಿದೆ. ಸದ್ಯ ಚಿತ್ರತಂಡ ಭರ್ಜರಿ ಪ್ರಚಾರದಲ್ಲಿ ಬ್ಯುಸಿಯಾಗಿದೆ. ಸಿನಿಮಾ 1000 ಕೋಟಿ ರೂ. ಕಲೆಕ್ಷನ್ ಮಾಡುವ ಲೆಕ್ಕಾಚಾರ ನಡೀತಿದೆ. ವಿಶ್ವದಾದ್ಯಂತ 12 ಸಾವಿರ ಸ್ಕ್ರೀನ್‌ಗಳಲ್ಲಿ ಪುಷ್ಪರಾಜ್ ಆರ್ಭಟ ಶುರುವಾಗುತ್ತಿದೆ.

More from Filmibeat

English summary
Allu Arjun Starrer Pushpa-2 release in all the three theatres of the Majestic;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X