ದಳಪತಿ ವಿಜಯ್ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ

ನಟಿ ರಶ್ಮಿಕಾ ಮಂದಣ್ಣ ಪುಷ್ಪ ಸಿನಿಮಾದ ಯಶಸ್ಸಿನ ಖುಷಿಯಲ್ಲಿದ್ದಾರೆ. ಪುಷ್ಪ ಸಿನಿಮಾದ ನಂತರದಲ್ಲಿ ಸಾಕಷ್ಟು ಸುದ್ದಿಯಲ್ಲಿರುವ ರಶ್ಮಿಕಾ ಮಂದಣ್ಣ ಸಾಕಷ್ಟು ಟ್ರೋಲ್ ಕೂಡ ಆಗುತ್ತಿದ್ದಾರೆ. ಎಷ್ಟೇ ಟ್ರೋಲ್ ಆದರೂ ಕೂಡ ಆ ಬಗ್ಗೆ ತಲೆ ಕೆಡಿಸಿಕೊಳ್ಳದ ರಶ್ಮಿಕಾ ಮಂದಣ್ಣ ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ.

Recommended Video

ಹೊಸ ಐಡಿಯಾ ಮೂಲಕ ಪೂಜಾ ಹೆಗ್ಡೆಗೆ ಟಾಂಗ್ ಕೊಟ್ಟ ರಶ್ಮಿಕಾ

ರಶ್ಮಿಕಾ ಮಂದಣ್ಣ ಅಭಿನಯದ ತೆಲುಗಿನ ಪುಷ್ಪ ಸಿನಿಮಾ ಕನ್ನಡಿಗರ ವಿರೋಧದ ನಡುವೆಯೂ ಉತ್ತಮ ಪ್ರದರ್ಶನ ಕಂಡು, ಕೋಟಿ ಕೋಟಿ ಕಲೆಕ್ಷನ್ ಬಾಚಿಕೊಂಡಿದೆ. ಈ ಚಿತ್ರದ ಬಳಿಕ ರಶ್ಮಿಕಾ ಮಂದಣ್ಣ ಮುಂದಿನ ಸಿನಿಮಾದ ಬಗ್ಗೆ ಅಭಿಮಾನಿಗಳು ತಲೆಕೆಡಿಸಿಕೊಂಡಿದ್ದಾರೆ. ಯಾವ ಸಿನಿಮಾವನ್ನು ರಶ್ಮಿಕಾ ಒಪ್ಪಿಕೊಳ್ಳುತ್ತಾರೆ. ಯಾವ ಸಿನಿಮಾ ಮೊದಲು ರಿಲೀಸ್ ಆಗುತ್ತದೆ ಎಂಬ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ.

ಈ ನಡುವೆಯೇ ಈಗ ರಶ್ಮಿಕಾ ಮಂದಣ್ಣ ಮತ್ತೊಬ್ಬ ಸ್ಟಾರ್ ನಟರೋಟ್ಟಿಗೆ ತೆರೆ ಹಂಚಿಕೊಳ್ಳುವ ಬಗ್ಗೆ ಮಾತುಗಳು ಕೇಳು ಬರುತ್ತಿದ್ದು, ಸ್ಟಾರ್ ನಟನೊಟ್ಟಿಗೆ ರಶ್ಮಿಕಾ ಮಂದಣ್ಣ ಅಭಿನಯಿಸೋದು ಬಹುತೇಕ ಪಕ್ಕಾ ಅನ್ನುತ್ತಿವೆ ಮೂಲಗಳು. ಹಾಗಿದ್ದರೆ ಆ ಸ್ಟಾರ್ ನಟ ಯಾರು, ರಶ್ಮಿಕಾ ಮಂದಣ್ಣ ಪಾಲಿಗೆ ಒಲಿದಿರೋ ಮತ್ತೊಂದು ಬಂಪರ್ ಆಫರ್ ಯಾವುದು ಮುಂದೆ ಓದಿ.

ಹೆಸರಿಡದ ಚಿತ್ರಕ್ಕೆ ಆಯ್ಕೆ ಆಗಿದ್ದಾರಾ ಕೊಡಗಿನ ಬೆಡಗಿ

ಹೆಸರಿಡದ ಚಿತ್ರಕ್ಕೆ ಆಯ್ಕೆ ಆಗಿದ್ದಾರಾ ಕೊಡಗಿನ ಬೆಡಗಿ

ರಶ್ಮಿಕಾ ಮಂದಣ್ಣ ಎಷ್ಟು ಟ್ರೋಲ್ ಆಗುತ್ತಾರೊ ಹಾಗೇ ಸಿನಿಮಾ ವಿಚಾರದಲ್ಲೂ ಅಷ್ಟೇ ಸುದ್ದಿಯಾಗುತ್ತಾರೆ. ಬ್ಯಾಕ್ ಟು ಬ್ಯಾಕ್ ಹೊಸ ಹೊಸ ಸಿನಿಮಾಗಳ ಬಗ್ಗೆ ಅಪ್‌ಡೇಟ್‌ಗಳು ಹೊರಬರುತ್ತಿದ್ದು, ಸದ್ಯ ರಶ್ಮಿಕಾ ಮಂದಣ್ಣ ಅವರ ಎರಡನೇ ತಮಿಳು ಚಿತ್ರದ ಬಗ್ಗೆ ಮಾಹಿತಿ ಹೊರಬರುತ್ತಿದೆ. ಈ ಹಿಂದೆ ತಮಿಳಿನ ಸುಲ್ತಾನ್ ಸಿನಿಮಾದ ಮೂಲಕ ತಮಿಳು ಚಿತ್ರರಂಗ ಪ್ರವೇಶಿಸಿದ್ದ ನಟಿ ರಶ್ಮಿಕಾ ಮಂದಣ್ಣ ಅವರ ಎರಡನೇ ಚಿತ್ರ ದಳಪತಿ ವಿಜಯ್ ಜೊತೆ ಎಂಬ ಬಗ್ಗೆ ಸುದ್ದಿ ಕೇಳಿ ಬರುತ್ತಿದೆ. ಹೌದು ತಮಿಳಿನ ಸೂಪರ್ ಸ್ಟಾರ್ ದಳಪತಿ ವಿಜಯ್ ಅವರ ತಾತ್ಕಾಲಿಕವಾಗಿ ಹೆಸರಿಟ್ಟಿರುವ 'ದಳಪತಿ 66' ಚಿತ್ರಕ್ಕೆ ರಶ್ಮಿಕಾ ಆಯ್ಕೆ ಆಗಿದ್ದಾರೆ ಎಂಬ ಸುದ್ದಿ ಈಗ ಜೋರಾಗಿ ಸದ್ದು ಮಾಡುತ್ತಿದ್ದು, ಚಿತ್ರರಂಗದಲ್ಲಿ ಈ ಬಗ್ಗೆ ಮಾತುಕತೆ ಜೋರಾಗಿದೆ.

ವಿಜಯ್‌ಗೆ ಜೋಡಿ ಆಗುತ್ತಾರೆ ನಟಿ ರಶ್ಮಿಕಾ ಮಂದಣ್ಣ

ವಿಜಯ್‌ಗೆ ಜೋಡಿ ಆಗುತ್ತಾರೆ ನಟಿ ರಶ್ಮಿಕಾ ಮಂದಣ್ಣ

ಎಲ್ಲರಿಗೂ ತಿಳಿದಿರುವ ಹಾಗೆ ಈಗಾಗಲೇ ತಮಿಳು ಚಿತ್ರರಂಗದಲ್ಲಿ ನಂ 1 ನಟರ ಸಾಲಿನಲ್ಲಿ ನಿಂತಿರುವ ವಿಜಯ್ ಸಿನಿಮಾಗಳು ಒಂದರ ಬಳಿಕ ಮತ್ತೊಂದರಂತೆ ತೆರೆಕಾಣುತ್ತಿದೆ. ಹಾಗೇ ಕೆಲ ತಿಂಗಳ ಹಿಂದಷ್ಟೆ ವಿಜಯ್ ಅವರ ಹೊಸ ಚಿತ್ರ ಬೀಸ್ಟ್ ಸೆಟ್ಟೇರಿದ್ದು, ಈ ಚಿತ್ರದ ಚಿತ್ರೀಕರಣದಲ್ಲಿ ವಿಜಯ್ ತೊಡಗಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ವಿಜಯ್‌ಗೆ ನಟಿ ಪೂಜಾ ಹೆಗ್ಡೆ ಜೋಡಿಯಾಗಿ ಅಭಿನಯಿಸುತ್ತಿದ್ದಾರೆ. ಈ ಚಿತ್ರದ ಬಳಿಕ ಮತ್ತೊಂದು ಚಿತ್ರಕ್ಕೆ ವಿಜಯ್ ಡೇಟ್ಸ್ ನೀಡಿದ್ದು, ಈ ಚಿತ್ರಕ್ಕೆ ನಟಿ ರಶ್ಮಿಕಾ ಮಂದಣ್ಣ ಅವರನ್ನು ಕರೆತರಲು ಚಿತ್ರತಂಡ ಪ್ರಯತ್ನಿಸುತ್ತಿದೆ. ಈ ಬಗ್ಗೆ ಒಂದು ಸುತ್ತಿನ ಮಾತುಕತೆಕೂಡ ನಡೆದಿದೆ ಎಂದು ತಿಳಿದು ಬಂದಿದ್ದು, ಅಧಿಕೃತ ಮಾಹಿತಿ ಇನ್ನಷ್ಟೆ ಹೊರಬರಬೇಕಿದೆ.

ಫ್ಯಾಮಿಲಿ ಎಂಟರ್‌ಟೈನರ್ ಸಿನಿಮಾದಲ್ಲಿ ವಿಜಯ್-ರಶ್ಮಿಕಾ

ಫ್ಯಾಮಿಲಿ ಎಂಟರ್‌ಟೈನರ್ ಸಿನಿಮಾದಲ್ಲಿ ವಿಜಯ್-ರಶ್ಮಿಕಾ

'ದಳಪತಿ 66' ಸಿನಿಮಾದ ಮೇಲೆ ಬಾರಿ ನಿರೀಕ್ಷೆ ಇದೆ. ಯಾಕೆಂದರೆ ಇದೊಂದು ಫ್ಯಾಮಿಲಿ ಎಂಟರ್‌ಟೈನರ್ ಸಿನಿಮಾ ಆಗಿರಲಿದ್ದು, ದೊಡ್ಡ ತಾರಾಗಣವೇ ಸಿನಿಮಾದಲ್ಲಿ ಇರಲಿದೆ ಎಂದು ತಿಳಿದು ಬಂದಿದೆ. ಈ ಚಿತ್ರ ತಮಿಳು ಮತ್ತು ತೆಲುಗಿನಲ್ಲಿ ತೆರೆಕಾಣಲಿದ್ದು, ಸೂಕ್ತ ನಾಯಕಿಯ ಹುಡುಕಾಟದಲ್ಲಿ ಇರುವ ಚಿತ್ರತಂಡದ ಮೊದಲ ಆಯ್ಕೆ ರಶ್ಮಿಕಾ ಮಂದಣ್ಣ ಅಂತೆ. ರಶ್ಮಿಕಾ ಏನಾದರೂ ಕಥೆ ಕೇಳಿ ಗ್ರೀನ್ ಸಿಗ್ನಲ್ ಕೊಟ್ಟರೇ ಅವರನ್ನೇ ಆಯ್ಕೆ ಮಾಡಲಾಗುವುದು. ಹಾಗೂ ಈ ಚಿತ್ರದಲ್ಲಿ ನಾಯಕಿ ಅಪ್ಪಟ್ಟ ಹಳ್ಳಿ ಹುಡುಗಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ರಶ್ಮಿಕಾ ಮಂದಣ್ಣ ಏನಾದರು ಇದಕ್ಕೆ ಒಪ್ಪಿದರೇ ಮತ್ತೊಂದು ಅದೃಷ್ಟವೆ ರಶ್ಮಿಕಾ ಪಾಲಾಗಲಿದೆ. ಆದರೇ ರಶ್ಮಿಕಾ ನಡೆ ಏನು ಅನ್ನೋದನ್ನ ತಿಳಿದುಕೊಳ್ಳಲು ಇನ್ನು ಸ್ವಲ್ಪ ದಿನ ಕಾಯಲೇ ಬೇಕಿದೆ.

ಪುಷ್ಪ ಚಿತ್ರದ ಸಕ್ಸಸ್ ಸಂಭ್ರಮದಲ್ಲಿ ರಶ್ಮಿಕಾ ಮಂದಣ್ಣ !

ಪುಷ್ಪ ಚಿತ್ರದ ಸಕ್ಸಸ್ ಸಂಭ್ರಮದಲ್ಲಿ ರಶ್ಮಿಕಾ ಮಂದಣ್ಣ !

ದಳಪತಿ ವಿಜಯ್ ಅಭಿನಯಿಸಲಿರುವ 'ದಳಪತಿ 66' ಸಿನಿಮಾವನ್ನು ಖ್ಯಾತ ನಿರ್ದೇಶಕ ವಂಶಿ ಪೈಡಿಪಲ್ಲಿ ನಿರ್ದೇಶನ ಮಾಡಲಿದ್ದಾರೆ. ಈ ಬಗ್ಗೆ ಈಗಾಗಲೇ ಅಧಿಕೃತ ಮಾಹಿತಿಯನ್ನು ಚಿತ್ರತಂಡ ಹೊರಹಾಕಿದೆ. ದಳಪತಿ ವಿಜಯ್ ಕೂಡ ಈ ಸಿನಿಮಾಗಾಗಿ ಸಾಕಷ್ಟು ದೇಹ ಹುರಿಗೊಳಿಸಬೇಕಿದೆ. ಬೀಸ್ಟ್ ಸಿನಿಮಾದ ಚಿತ್ರೀಕರಣ ಮುಗಿದ ಬಳಿಕ ಈ ಸಿನಿಮಾಗಾಗಿ ತಯಾರಿ ನಡೆಸಲಿದ್ದಾರೆ ದಳಪತಿ ವಿಜಯ್. ಇನ್ನು ರಶ್ಮಿಕಾ ವಿಚಾರಕ್ಕೆ ಬರೋದಾದರೇ ಪುಷ್ಪ ಚಿತ್ರದ ಸಕ್ಸಸ್ ನಲ್ಲಿರುವ ನಟಿ, ಡಿ ಗ್ಲಾಮ್ ಲುಕ್‌ನಲ್ಲಿ ನಟಿಸಿ ಸೈ ಅನ್ನಿಸಿಕೊಂಡಿದ್ದಾರೆ. ಬಾಲಿವುಡ್, ಟಾಲಿವುಡ್ ಸೇರಿದಂತೆ, ಕಾಲಿವುಡ್‌ನಲ್ಲೂ ಕಮಾಲ್ ಮಾಡಲು ಹೊರಟಿರುವ ರಶ್ಮಿಕಾ ಅದೃಷ್ಟ ಹೇಗೆ ವರ್ಕ್‌ಔಟ್ ಆಗಲಿದೆ ಅನ್ನೋದನ್ನ ಕಾದು ನೋಡಬೇಕಿದೆ.

More from Filmibeat

English summary
National crush Rashmika Mandanna likely to act with Thalapathy Vijays next film
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X