»   » 100ರ ಸಂಭ್ರಮದಲ್ಲಿ ತೇಲಾಡುತ್ತಿರುವ ರಮೇಶ್ ಅರವಿಂದ್

100ರ ಸಂಭ್ರಮದಲ್ಲಿ ತೇಲಾಡುತ್ತಿರುವ ರಮೇಶ್ ಅರವಿಂದ್

Posted By:
Subscribe to Filmibeat Kannada

'ಸುಂದರ ಸ್ವಪ್ನಗಳು' ಚಿತ್ರದ ಮೂಲಕ ಚಂದನವನಕ್ಕೆ ಕಾಲಿಟ್ಟ ಚೆಂದದ ನಟ ಕಮ್ ನಿರ್ದೇಶಕ ರಮೇಶ್ ಅರವಿಂದ್ ಅವರು ಭರ್ಜರಿ ಸೆಂಚುರಿ ಬಾರಿಸಿದ ಸಂಭ್ರಮದಲ್ಲಿ ತೇಲಾಡುತ್ತಿದ್ದಾರೆ.

ಹೌದು ನಟ-ನಿರ್ದೇಶಕ ಕಮ್ ನಿರೂಪಕ ರಮೇಶ್ ಅರವಿಂದ್ ಅವರಿಗೆ ಕನ್ನಡದಲ್ಲಿ 'ಪುಷ್ಪಕ ವಿಮಾನ' ಭರ್ಜರಿ 100ನೇ ಸಿನಿಮಾ. ಬರೀ ಕನ್ನಡ ಭಾಷೆಯ ಚಿತ್ರಗಳಲ್ಲಿ ನಟಿಸಿ 100 ರ ಗಡಿ ತಲುಪಿರುವ ರಮೇಶ್ ಅರವಿಂದ್ ಅವರು ಕನ್ನಡೇತರ ಭಾಷೆಗಳ ಚಿತ್ರಗಳಲ್ಲಿ ನಟಿಸಿಯೂ ಮೆಚ್ಚುಗೆ ಗಳಿಸಿದ್ದಾರೆ.['ವೀಕೆಂಡ್ ವಿತ್ ರಮೇಶ್' ಬಗ್ಗೆ ವೀಕ್ಷಕರಲ್ಲಿ ಭುಗಿಲೆದ್ದ ಅಸಮಾಧಾನ.!]


'Pushpaka Vimana' Is Ramesh Aravind's 100th Film In Sandalwood

ಇನ್ನು ತಮಿಳು-ತೆಲುಗು, ಹಿಂದಿ ಮತ್ತು ಮಲಯಾಳಂ ಮುಂತಾದ ಕ್ಷೇತ್ರಗಳಲ್ಲಿ ರಮೇಶ್ ಅರವಿಂದ್ ನಟಿಸಿದ್ದು, ಎಲ್ಲವನ್ನೂ ಸೇರಿಸಿದರೆ, ಒಟ್ಟಾರೆ ಸುಮಾರು 140ಕ್ಕೂ ಹೆಚ್ಚು ಚಿತ್ರಗಳಲ್ಲಿ ರಮೇಶ್ ಅವರು ನಟಿಸಿದ್ದಾರೆ.


ಕನ್ನಡ ಚಿತ್ರರಂಗದಲ್ಲಿ ತಮ್ಮ ಪಯಣವನ್ನು ನೆನಪಿಸಿಕೊಳ್ಳುವ ನಟ ರಮೇಶ್ ಅರವಿಂದ್ ಅವರು 'ಹಣ, ಹೆಸರು ಇದೆಲ್ಲಾ ಹೆಚ್ಚುವರಿ ಸಂತಸಗಳು. ಆದರೆ ನಿಜವಾದ ತೃಪ್ತಿ ಇರುವುದು ಕೆಲಸದಲ್ಲೇ, ಅದು ನಟನೆ, ನಿರ್ದೇಶನ ಅಥವಾ ಟಿವಿ ವಾಹಿನಿಯ ಕಾರ್ಯಕ್ರಮ ನಡೆಸಿಕೊಡುವುದಾಗಿರಬಹುದು. ಇವೆಲ್ಲಾ ನನ್ನನ್ನು ಜೀವಂತವಾಗಿಡುತ್ತವೆ' ಎಂದು ರಮೇಶ್ ಅವರು ತಮ್ಮ ಮನದಾಳದ ಮಾತನ್ನು ತೆರೆದಿಡುತ್ತಾರೆ.[ವಿಮರ್ಶೆ: ಪ್ರೇತಾತ್ಮಗಳ ಜೊತೆ ಸಂಭಾಷಣೆ ಮಾಡಿದ'ರೆ'.....]


ಅಂದಹಾಗೆ 'ಪುಷ್ಪಕ ವಿಮಾನ' ಚಿತ್ರ ತಮ್ಮ 100ನೇ ಸಿನಿಮಾ ಅಂತ ಖುದ್ದು ರಮೇಶ್ ಅವರಿಗೆ ತಿಳಿದಿರಲಿಲ್ಲವಂತೆ. ಇತ್ತೀಚೆಗೆ ಯಾವುದೋ ಸಂದರ್ಶನದಲ್ಲಿ ಮಾತನಾಡುವಾಗ ಅವರಿಗೆ ತಿಳಿಯಿತಂತೆ.


ಇದೀಗ ನೂರರ ಹೊಸ್ತಿಲಲ್ಲಿರುವ ರಮೇಶ್ ಅವರು ಬಹಳ ಖುಷಿಯಿಂದ ಇದ್ದಾರೆ. ಜೊತೆಗೆ ತಮ್ಮ ನೂರನೇ ಸಿನಿಮಾದಲ್ಲಿ, ಅದರಲ್ಲೂ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡು ಹೊಸಬರ ಜೊತೆ ಕೆಲಸ ಮಾಡಿದ್ದು ಬಹಳ ಸಂತಸ ತಂದಿದೆ ಎಂದು ರಮೇಶ್ ತಿಳಿಸಿದ್ದಾರೆ.[ಓ ದೇವ'ರೆ', '..ರೆ' ಬಗ್ಗೆ ವಿಮರ್ಶಕರು ಹೀಗಂತಾ'ರೆ'....]


ನಿರ್ದೇಶಕ ಎಸ್.ರವೀಂದ್ರನಾಥ್ ಆಕ್ಷನ್-ಕಟ್ ಹೇಳಿರುವ 'ಪುಷ್ಪಕ ವಿಮಾನ' ಸಿನಿಮಾದಲ್ಲಿ ಬೇಬಿ ಯುವಿನಾ ಪಾರ್ಥವಿ ಅವರು ರಮೇಶ್ ಅರವಿಂದ್ ಅವರ ಮಗಳ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ನಟಿ ರಚಿತಾ ರಾಮ್ ಬಾಲಿವುಡ್ ನಟಿ ಜೂಹಿ ಚಾವ್ಲಾ ಮುಂತಾದವರು ಮುಖ್ಯ ಭೂಮಿಕೆಯಲ್ಲಿ ಮಿಂಚಿದ್ದಾರೆ.


ಈಗಾಗಲೇ ಬಿಡುಗಡೆ ಆಗಿರುವ ಟೀಸರ್ ಮೂಲಕ ಸಾಕಷ್ಟು ನಿರೀಕ್ಷೆ ಮೂಡಿಸಿರುವ 'ಪುಷ್ಪಕ ವಿಮಾನ' ಚಿತ್ರ ಎಲ್ಲರ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ. ಚಿತ್ರದ ಕಲರ್ ಫುಲ್ ಪೋಸ್ಟರ್ ಗಳನ್ನು ನೋಡಲು ಸ್ಲೈಡ್ಸ್ ಕ್ಲಿಕ್ಕಿಸಿ...


-
-
-
-
-
-
-
-
-
-
-
-
-
-
-
-
-
-
-
English summary
Kannada Actor Ramesh Aravind has completed 100 films in Kannada film industry. Through his upcoming movie 'Pushpaka Vimana', Ramesh Aravind hits century in Sandalwood.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada