ಟಾಲಿವುಡ್ ಗೆ ಎಂಟ್ರಿ ಕೊಟ್ಟ 'ಪುಟ್ಟಗೌರಿ' ಖ್ಯಾತಿಯ ನಟಿ ರಂಜಿನಿ

Recommended Video

Putta Gowri Maduve fame Ranjani Raghavan enter telugu cinema industry | FILMIBEAT KANNADA

ಕನ್ನಡ ಕಿರುತೆರೆ ಲೋಕದಲ್ಲಿ ಸಂಚಲನ ಮೂಡಿಸಿದ್ದ ಪುಟ್ಟ ಗೌರಿ ಮದುವೆ ಧಾರಾವಾಹಿ ಮೂಲಕ ಕನ್ನಡಿಗರಿಗೆ ಪರಿಚಿತವಾದ ನಟಿ ರಂಜಿನಿ ರಾಘವಾನ್. ರಂಜಿನಿ ಎನ್ನುವುದಕ್ಕಿಂತ ಪುಟ್ಚಗೌರಿ ಅಂದರೆ ಪ್ರೇಕ್ಷಕರಿಗೆ ಥಟ್ ಅಂತ ಗೊತ್ತಾಗುತ್ತೆ. ಧಾರಾವಾಹಿ ನಂತರ ಬೆಳ್ಳೆ ತೆರೆಗೆ ಎಂಟ್ರಿ ಕೊಟ್ಟ ರಂಜಿನಿಗೆ ಹೇಳಿಕೊಳ್ಳುವಷ್ಟು ಹೆಸರು ತಂದುಕೊಟ್ಟಿಲ್ಲ.

ರಾಜಹಂಸ ಸಿನಿಮಾ ಮೂಲಕ ದೊಡ್ಡ ಪರದೆ ಮೇಲೆ ಮಿಂಚಿದ ರಂಜಿನಿ ನಂತರ ಟಕ್ಕರ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಇದರ ನಡುವೆ ಕಿರುತೆರೆಯಲ್ಲಿ ಒಂದು ಧಾರಾವಾಹಿಯನ್ನು ನಿರ್ದೇಶನ ಮಾಡಿ ಸೈ ಎನಿಸಿಕೊಂಡಿದ್ದಾರೆ. ರಂಜಿನಿ ಈಗ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಹೌದು ರಂಜಿನಿ ಈಗ ಮೂರನೆ ಸಿನಿಮಾಗೆ ಗ್ರೀನ್ ಸಿಗ್ನಲ್ ನೀಡುವ ಮೂಲಕ ತೆಲುಗಿನಲ್ಲಿ ಮಿಂಚಲು ಸಿದ್ಧರಾಗಿದ್ದಾರೆ.

ಚಿತ್ರಕ್ಕೆ 'ಸತ್ಯಂ' ಎಂದು ಟೈಟಲ್ ಇಡಲಾಗಿದೆ. ಈ ಸಿನಿಮಾ ಕನ್ನಡ ಮತ್ತು ತೆಲುಗು ಎರಡರಲ್ಲೂ ತಯಾರಾಗುತ್ತಿದೆಯಂತೆ. ಚಿತ್ರಕ್ಕೆ ಸಂತೋಷ್ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸತ್ಯಂ ಅಶೋಕ್ ಕೆ ಕಡಬ ಆಕ್ಷನ್ ಕಟ್ ಹೇಳುತ್ತಿದ್ದಾರೆ. ರವಿ ಬಸ್ರೂರು ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ.

Putta Gowri Fame Ranjani Raghavan Entered To Telugu Industry

ಕಥೆ ಕೇಳಿ ಇಂಪ್ರೆಸ್ ಆದ ರಂಜಿನಿ ಸತ್ಯಂ ಸಿನಿಮಾ ಮಾಡಲು ಒಪ್ಪಿಕೊಂಡಿದ್ದಾರೆ. ಚಿತ್ರದಲ್ಲಿ ದೊಡ್ಡ ದೊಡ್ಡ ಕಲಾವಿದರು ಇರಲಿದ್ದಾರಂತೆ. ಪುಟ್ಟಗೌರಿ ಇಂದ ಪ್ರಾರಂಭವಾದ ರಂಜಿನಿ ಬಣ್ಣದ ಲೋಕದ ಪಯಣ ಈಗ ತೆಲುಗು ಚಿತ್ರರಂಗದವರೆಗೂ ಕರೆದೊಯ್ದಿದೆ. ಅಳೆದು ತೂಗಿ ಕಥೆಗಳನ್ನು ಆಯ್ಕೆ ಮಾಡಿಕೊಳ್ಳುತ್ತಿರುವ ರಂಜಿನಿ ಈಗ ಸತ್ಯಂ ಚಿತ್ರದಲ್ಲಿ ಹೇಗೆ ಕಾಣಿಸಿಕೊಳ್ಳಲಿದ್ದಾರೆ ಎನ್ನುವುದು ಅಭಿಮಾನಿಗಳ ಕುತೂಹಲ.

More from Filmibeat

English summary
Kannada actress Putta Gowri fame Ranjani Raghavan third Satyam.
Read more about: ranjani raghavan
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X