Just In
Don't Miss!
- News
'ರಫೇಲ್' ಖ್ಯಾತಿಯ ಬಿಲಿಯನೇರ್ ಒಲಿವರ್ ಡಸಾಲ್ಟ್ ಹೆಲಿಕಾಪ್ಟರ್ ಅಪಘಾತದಲ್ಲಿ ನಿಧನ
- Lifestyle
ದಿನ ಭವಿಷ್ಯ: ನಿಮ್ಮ ರಾಶಿ ಸೋಮವಾರ ಹೇಗಿರಲಿದೆ ನೋಡಿ
- Sports
ಆತನಲ್ಲಿ ನನಗಿಂತಲೂ ಹೆಚ್ಚಿನ ಸ್ವಾಭಾವಿಕ ಸಾಮರ್ಥ್ಯವಿದೆ: ರವಿಶಾಸ್ತ್ರಿ
- Finance
ಮಾರ್ಚ್ 07ರಂದು ಚಿನ್ನದ ಬೆಲೆ ಯಾವ ನಗರದಲ್ಲಿ ಹೆಚ್ಚು ಬೆಲೆ?
- Automobiles
ಅನಾವರಣವಾಯ್ತು ಫೋಕ್ಸ್ವ್ಯಾಗನ್ ಗಾಲ್ಫ್ ಜಿಟಿಐ ಕ್ಲಬ್ಸ್ಪೋರ್ಟ್ 45 ಕಾರು
- Education
Mandya District Court Recruitment 2021: 10 ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಸೀರಿಯಲ್ ಸಹವಾಸ 'ಪುಟ್ಟಗೌರಿ' ರಂಜನಿಗೆ ಸಾಕಾಗಿ ಹೋಗಿದೆ.!

ಕನ್ನಡ ಕಿರುತೆರೆಯಲ್ಲಿ ಅತಿ ಹೆಚ್ಚು ಟಿ.ಆರ್.ಪಿ ಹೊಂದಿರುವ ಧಾರಾವಾಹಿಗಳ ಪೈಕಿ 'ಪುಟ್ಟಗೌರಿ ಮದುವೆ' ಕೂಡ ಒಂದು. ಸಿಕ್ಕಾಪಟ್ಟೆ ಜನಪ್ರಿಯತೆ ಪಡೆದಿರುವ 'ಪುಟ್ಟಗೌರಿ ಮದುವೆ', ಅಷ್ಟೇ ಟ್ರೋಲ್ ಕೂಡ ಆಗಿದೆ.
ಅದರಲ್ಲೂ, 'ಪುಟ್ಟಗೌರಿ' ಕಾಡಿಗೆ ಹೋಗಿ ಹಾವಿನ ಕಪಾಳಕ್ಕೆ ಹೊಡೆದು, ಕೊಲ್ಲಲು ಬಂದಿದ್ದ ಹುಲಿಯನ್ನೇ ಹೆದರಿಸಿ ವಾಪಸ್ ಕಳುಹಿಸಿ, ನರಭಕ್ಷರ ಮನಃಪರಿವರ್ತನೆ ಮಾಡಿದ್ಮೇಲೆ ಯದ್ವಾತದ್ವಾ ಟ್ರೋಲ್ ಆಗಿತ್ತು.
''ಪುಟ್ಟಗೌರಿ'ಗೆ ಶೌರ್ಯ ಪ್ರಶಸ್ತಿ ನೀಡಬೇಕು'' ಎಂದು ಎಲ್ಲ ಟ್ರೋಲ್ ಪೇಜ್ ಗಳು ಕಾಲೆಳೆಯಲು ಶುರು ಮಾಡಿದ್ರು. ''ಪುಟ್ಟಗೌರಿ ಸಾಯಲ್ಲ, ಸೀರಿಯಲ್ ಮುಗಿಯಲ್ಲ'' ಎಂದು ಬೇಸತ್ತ ವೀಕ್ಷಕರು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಬೇಸರ ವ್ಯಕ್ತಪಡಿಸಿದ್ದರು.
ಈಗ 'ಪುಟ್ಟಗೌರಿ ಮದುವೆ' ಸೀರಿಯಲ್ ಅಂತೂ ಮುಗಿಯುವ ಯಾವುದೇ ಲಕ್ಷಣ ಕಾಣುತ್ತಿಲ್ಲ. ಆದ್ರೆ, ಸೀರಿಯಲ್ ಸಹವಾಸ ಸಾಕು... ಇನ್ಮುಂದೆ ಯಾವುದೇ ಧಾರಾವಾಹಿಯಲ್ಲಿ ನಟಿಸುವುದಿಲ್ಲ ಅಂತ 'ಪುಟ್ಟಗೌರಿ' ರಂಜನಿ ರಾಘವನ್ ಹೇಳಿದ್ದಾರೆ. ಮುಂದೆ ಓದಿರಿ...

ಇನ್ಮೇಲೆ ಧಾರಾವಾಹಿಯಲ್ಲಿ ಅಭಿನಯಿಸಲ್ಲ.!
''ಪುಟ್ಟಗೌರಿ ಮದುವೆ' ಧಾರಾವಾಹಿ ಬಳಿಕ ಇನ್ನು ಮುಂದೆ ಯಾವುದೇ ಧಾರಾವಾಹಿಯಲ್ಲಿ ಅಭಿನಯಿಸುವುದಿಲ್ಲ'' ಎಂದು ಕಡ್ಡಿ ತುಂಡು ಮಾಡಿದ ಹಾಗೆ ನಟಿ ರಂಜನಿ ರಾಘವನ್ ಹೇಳಿದ್ದಾರೆ.
'ಮಿಸ್ ಇಂಡಿಯಾ ಸೂಪರ್ ಮಾಡೆಲ್' ಪಟ್ಟಕ್ಕೇರಿದ ಪುಟ್ಟಗೌರಿ ರಂಜನಿ

ಬೆಳ್ಳಿತೆರೆ ಮೇಲೆ ಗಮನ.!
ಸೀರಿಯಲ್ ನಲ್ಲಿ ಅಭಿನಯಿಸದೆ, ಸಿನಿಮಾಗಳಲ್ಲಿ ಹೆಚ್ಚಾಗಿ ತೊಡಗಿಕೊಳ್ಳುತ್ತಾರಂತೆ ರಂಜನಿ ರಾಘವನ್. ಅದಾಗಲೇ ಸ್ಯಾಂಡಲ್ ವುಡ್ ನಿಂದ ಉತ್ತಮ ಅವಕಾಶಗಳು ಲಭಿಸುತ್ತಿರುವ ಕಾರಣ ಬೆಳ್ಳಿತೆರೆ ಮೇಲೆ ಮಿನುಗಲು ರಂಜನಿ ನಿರ್ಧರಿಸಿದ್ದಾರೆ.
'ಪುಟ್ಟಗೌರಿ' ಹೆಸರಿನಲ್ಲಿ ಇರುವ ದಾಖಲೆಗಳು ಒಂದಾ ಎರಡಾ.?

ಎರಡು ಸಿನಿಮಾ ಮಾಡಿರುವ ರಂಜನಿ
ಇತ್ತೀಚೆಗಷ್ಟೇ ತೆರೆಕಂಡಿದ್ದ 'ರಾಜಹಂಸ' ಚಿತ್ರದಲ್ಲಿ ನಾಯಕಿ ಆಗಿ ರಂಜನಿ ಅಭಿನಯಿಸಿದ್ದರು. ಸದ್ಯ 'ಸೂಫಿ' ಸಿನಿಮಾದಲ್ಲೂ ನಟಿಸಿದ್ದಾರೆ ರಂಜನಿ. ಉಳಿದ ಸಾಕಷ್ಟು ಆಫರ್ ಗಳು ರಂಜನಿ ಅವರನ್ನ ಹುಡುಕಿಕೊಂಡು ಬರುತ್ತಿದೆ.
'ಬೆಟ್ಟದ ಮೇಲಿಂದ ಬಿದ್ದ ಪುಟ್ಟಗೌರಿ': ಆಮೇಲೆ ಆದ ಅದ್ಭುತಗಳು ಇವು.!

ಗಾಯಕಿ ಕೂಡ ಹೌದು
ರಂಜನಿ ರಾಘವನ್ ಶಾಸ್ತ್ರೀಯ ಸಂಗೀತವನ್ನೂ ಅಭ್ಯಾಸ ಮಾಡಿದ್ದಾರೆ. ಗಾಯನದಲ್ಲಿ ರಂಜನಿ ಯಾರಿಗೂ ಕಮ್ಮಿ ಇಲ್ಲ. ಅಂದ್ಹಾಗೆ, ಸ್ಟಾರ್ ಫಿಲ್ಮ್ ಮೇಕರ್ಸ್ ಸ್ಕೂಲ್ ಆಫ್ ಫ್ಯಾಷನ್ ವತಿಯಿಂದ ಆಯೋಜಿತವಾಗಿದ್ದ 'ಮಿಸ್ಟರ್ ಅಂಡ್ ಮಿಸ್ ಸೂಪರ್ ಮಾಡೆಲ್ 2017'ರಲ್ಲಿ ಭಾಗವಹಿಸಿದ್ದ ರಂಜನಿ ರಾಘವನ್ ಮಹಿಳಾ ವಿಭಾಗದಲ್ಲಿ ಮೊದಲ ಸ್ಥಾನ ಕೂಡ ಪಡೆದುಕೊಂಡಿದ್ದಾರೆ.